Home National Rape: ಜಾರ್ಖಂಡ್‌ನಲ್ಲಿ ಸ್ಪ್ಯಾನಿಷ್ ಮಹಿಳೆಯ ನಂತರ ಇದೀಗ ರಂಗ ಕಲಾವಿದೆಯ ಮೇಲೆ ಸಾಮೂಹಿಕ ಅತ್ಯಾಚಾರ, ಇಬ್ಬರ...

Rape: ಜಾರ್ಖಂಡ್‌ನಲ್ಲಿ ಸ್ಪ್ಯಾನಿಷ್ ಮಹಿಳೆಯ ನಂತರ ಇದೀಗ ರಂಗ ಕಲಾವಿದೆಯ ಮೇಲೆ ಸಾಮೂಹಿಕ ಅತ್ಯಾಚಾರ, ಇಬ್ಬರ ಬಂಧನ ಓರ್ವ ಪರಾರಿ

Hindu neighbor gifts plot of land

Hindu neighbour gifts land to Muslim journalist

Rape: ಜಾರ್ಖಂಡ್‌ನ ದುಮ್ಕಾದಲ್ಲಿ ಸ್ಪ್ಯಾನಿಷ್ ಪ್ರವಾಸಿ ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಇನ್ನೂ ತಣ್ಣಗಾಗಿಲ್ಲ, ಇದೀಗ ಮತ್ತೊಂದು ಸಾಮೂಹಿಕ ಅತ್ಯಾಚಾರದ ಸುದ್ದಿ ಪಲಾಮು ಜಿಲ್ಲೆಯಿಂದ ಬೆಳಕಿಗೆ ಬಂದಿದೆ. 21 ವರ್ಷದ ಯುವತಿ, ಆರ್ಕೆಸ್ಟ್ರಾ ಕಲಾವಿದೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಸಂತ್ರಸ್ತೆ ಮೂಲತಃ ಛತ್ತೀಸ್‌ಗಢದವರಾಗಿದ್ದು, ವೇದಿಕೆಯಲ್ಲಿ ಪ್ರದರ್ಶನ ನೀಡಲು ಜಾರ್ಖಂಡ್‌ಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಸ್ವಂತ ಸಹೋದ್ಯೋಗಿಗಳ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಸೋಮವಾರ (4 ಮಾರ್ಚ್ 2024) ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮೂರನೆಯ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಈ ಘಟನೆ ಪಲಮುವಿನ ವಿಶ್ರಾಮ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶನಿವಾರ (2 ಮಾರ್ಚ್ 2024), ಸಂತ್ರಸ್ತೆ ತನ್ನ 3 ಪುರುಷ ಸಹೋದ್ಯೋಗಿಗಳೊಂದಿಗೆ ಜಾರ್ಖಂಡ್‌ನ ವಿಶ್ರಾಮ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಲು ಛತ್ತೀಸ್‌ಗಢದಿಂದ ಬಂದಿದ್ದಳು. ಆ ದಿನ ಆರ್ಕೆಸ್ಟ್ರಾ ಪ್ರೋಗ್ರಾಂ ಕ್ಯಾನ್ಸಲ್‌ ಆಗಿತ್ತು. ಕಾರ್ಯಕ್ರಮ ನಡೆಸಲು ಸಾಧ್ಯವಾಗದೇ ಇದ್ದುದರಿಂದ ಯುವತಿ ತನ್ನ ಸ್ನೇಹಿತರ ಜೊತೆ ಅದೇ ಕಾರಿನಲ್ಲಿ ಮತ್ತೊಂದು ಕಾರ್ಯಕ್ರಮಕ್ಕೆ ತೆರಳಿದ್ದಳು. ಈ ಘಟನೆ ನಡೆದಿರುವುದು ಹುಸೇನಾಬಾದ್‌ನಲ್ಲಿ. ದಾರಿ ಮಧ್ಯೆ ಸಂತ್ರಸ್ತ ಮಹಿಳೆಗೆ ಆಕೆಯ ಜೊತೆ ಇದ್ದವರು ಮಾದಕ ದ್ರವ್ಯವನ್ನು ನೀಡಿದ್ದರಿಂದ ಆಕೆ ಪ್ರಜ್ಞಾಹೀನಳಾದಳು.

ಇದಾದ ನಂತರ ಸಂತ್ರಸ್ತೆಯ ಮೂವರು ಸಹ ಕಲಾವಿದರು ಚಲಿಸುತ್ತಿದ್ದ ಕಾರಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಅತ್ಯಾಚಾರದ ನಂತರ ಮೂವರೂ ಸಂತ್ರಸ್ತೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಬದಿಯಲ್ಲಿ ಬಿಟ್ಟು ಹೋಗಿದ್ದಾರೆ. ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಚಿಕಿತ್ಸೆ ಪಡೆದಿದ್ದು,  ಪ್ರಜ್ಞೆ ಬಂದ ನಂತರ ಸಂತ್ರಸ್ತೆಯ ಹೇಳಿಕೆ ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಘಟನೆಯಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇಲ್ಲಿಯವರೆಗೆ ಮೂರನೇ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗೆ ಹುಡುಕಾಟ ನಡೆಯುತ್ತಿದೆ.