Mangaluru: ಕೊಲ್ಯ ಹೆದ್ದಾರಿಯಲ್ಲಿ ಸರಣಿ ಅಪಘಾತ; ಡಿವೈಡರ್‌ಗೆ ಎಸೆಯಲ್ಪಟ್ಟು ಸ್ಕೂಟರ್‌ ಸವಾರ ಸಾವು

Share the Article

Mangaluru: ಕಾರಿನ ಹಿಂಬದಿಗೆ ಅತಿ ವೇಗದಿಂದ ಅಜಾಗರೂಕತೆಯಿಂದ ಬರುತ್ತಿದ್ದ ಥಾರ್‌ ಜೀಪ್‌ವೊಂದು ಡಿಕ್ಕಿ ಹೊಡದ ಪರಿಣಾಮ ಕಾರಿನ ಚಕ್ರ ಸಿಡಿದು ಮುಂದೆ ಬರುತ್ತಿದ್ದ ಸ್ಕೂಟರ್‌ಗೆ ಡಿಕ್ಕಿಯಾದ ಪರಿಣಾಮ ಸ್ಕೂರ್‌ ಸವಾರ ಡಿವೈಡರ್‌ಗೆ ಎಸೆಯಲ್ಪಟ್ಟಿದ್ದು, ಸಾವನ್ನಪ್ಪಿದ್ದ ಘಟನೆಯೊಂದು ರಾ.ಹೆ.66 ರ ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಎದುರುಗಡೆ ಮಂಗಳವಾರ ನಡೆದಿದೆ.

Pavitra Lokesh: ಅಮ್ಮನ ಸವತಿ, ನಟಿ ಸರ್ವಮಂಗಳಾ ಹಾದಿಯಲ್ಲೇ ಅ’ಪವಿತ್ರ’ ನಡಿಗೆ, ಯಾಕೆ ಹೀಗಾದ್ಳು…

ಸಂತೋಷ್‌ ಬೆಳ್ಚಡ (48) ಎಂಬುವವರೇ ಮೃತ ಹೊಂದಿದ ವ್ಯಕ್ತಿ.

ತಮ್ಮ ಕೆಲಸ ಮುಗಿಸಿ ಮನೆ ಕಡೆ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.

avi Belagere Writing: ‘ ಮತ್ತೆ ಬಂದ್ರು ಬೆಳಗೆರೆ ‘, ರವಿ ಬೆಳಗೆರೆ ಇಂಟರೆಸ್ಟಿಂಗ್ ಧಾರಾವಾಹಿ ಶುರು…

ಮಂಗಳೂರು ಕಡೆಯಿಂದ ಅತಿ ವೇಗದ ಚಾಲನೆಯಲ್ಲಿದ್ದ ಥಾರ್‌ ಜೀಪ್‌ ಎದುರಿನಲ್ಲಿ ಧರ್ಮಸ್ಥಳದಿಂದ ಕಾಞಂಗಾಡ್‌ಗೆ ಕುಟುಂಬ ಸಮೇತ ಹೋಗುತ್ತಿದ್ದ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ, ನಿಯಂತ್ರಣ ತಪ್ಪಿದ ಕಾರು ಎದುರಿನಲ್ಲಿ ತೆರಳುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡದಿದೆ.

ಕೂಡಲೇ ಸ್ಕೂಟರ್‌ ಸವಾರ ಹೆದ್ದಾರಿಯ ಡಿವೈಡರ್‌ಗೆ ಬಿದ್ದಿದ್ದು, ಪರಿಣಾಮ ಗಂಭೀರ ಗಾಯಗೊಂಡ ಸಂತೋಷ್‌ ಅವರು ಆಸ್ಪತ್ರೆಗೆ ಸಾಗಿಸುವ ಮೊದಲು ಸಾವನ್ನಪ್ಪಿರುವ ಕುರಿತು ವರದಿಯಾಗಿದೆ.

Leave A Reply