Cigarette rule: ಸಿಗರೇಟ್ ಕೊಳ್ಳಲೂ ಬಂತು ಹೊಸ ರೂಲ್ಸ್, ಇನ್ಮುಂದೆ ಸಿಗೋದಿಲ್ಲ ಸಿಂಗಲ್ ಸಿಗರೇಟ್, ಸರ್ಕಾರದಿಂದ ಖಡಕ್ ಆದೇಶ!

Share the Article

Cigarette rule: ದೂಮಪಾನ ಆರೋಗ್ಯಕಾಕೆ ಹಾನಿಕಾರಕ ಎಂದರೂ ಹೆಚ್ಚಿನವರಿಗೆ ಅದನ್ನು ಬಿಡಲು ಸಾಧ್ಯವಿಲ್ಲ. ದಿನಕ್ಕೆ ಒಂದಲ್ಲ, ಎರಡಲ್ಲ ಒಂದೊಂದು ಪ್ಯಾಕ್ ಸಿಗರೇಟ್(Cugarette rule) ಸೇದುವವರೂ ಇದ್ದಾರೆ. ಇದರಿಂದ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಣಮ ಬೀರುತ್ತದೆ. ಹೀಗಾಗಿ ಇದರ ಅಪಾಯ ತಪ್ಪಿಸಲು ರಾಜ್ಯ ಸರ್ಕಾರ ಹೊಸ ರೂಲ್ಸ್ ಜಾರಿಗೆತಂದಿದೆ.

https://www.instagram.com/reel/C3ruW8yP8sD/?igsh=MWgwemE5andjZGRzYw==

ಇದನ್ನೂ ಓದಿ: Heart attack: ಅಭ್ಯಾಸವಿದ್ದರೆ ಮಹಿಳೆಯರಿಗೆ ಬೇಗ ಹೃದಯಾಘಾತ ಆಗುತ್ತೆ !!

ಹೌದು, ಇನ್ಮುಂದೆ ಅಂಗಡಿಗಳಲ್ಲಿ ಸಿಂಗಲ್ ಸಿಗರೇಟ್ ನೀಡಬಾರದು, ಕೊಳ್ಳುವುದಿದ್ದರೆ ಫುಲ್ ಪ್ಯಾಕೆಟ್ ಸಿಗರೇಟ್ ಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರ ಹೊಸ ರೂಲ್ಸ್ ತರಲು ಮುಂದಾಗಿದೆ.

ಅಂದಹಾಗೆ ವಿಧಾನಪರಿಷತ್(Vidhanaparishath) ನಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು ಇನ್ಮುಂದೆ ಸಿಗರೇಟ್ ಕೊಳ್ಳಲು ಹೊಸ ನಿಯಮ ಜಾರಿಗೆ ತರುತ್ತಿದ್ದು, ಯಾವ ಅಂಗಡಿಯವರು ಯಾರಿಗೂ ಒಂದೊಂದೆ ಸಿಗರೇಟ್ ನೀಡಬಾರದು, ಕೊಂಡರೆ ಫುಲ್ ಪ್ಯಾಕೆಟ್ ಕೊಳ್ಳಬೇಕು. ಇದರಿಂದ ಕೆಲವರು ಕೊಳ್ಳುವ ಶಕ್ತಿ ಇಲ್ಲದೆ ಸಿಗರೇಟ್ ಸೇದುವವರ ಸಂಖ್ಯೆಯೂ ಕಡಿಮೆಯಾಗುತ್ತದೆ. ವಿದೇಶದಲ್ಲೂ ಹೀಗೆ ಸಿಂಗಲ್ ಆಗಿ ಮಾರುವುದಿಲ್ಲ, ಇನ್ನು ಚಿಲ್ಲರೆ ಮಾರಬಾರದು. ಮಾರಿದರೆ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.

Leave A Reply