Home Interesting Mangaluru Daivaradhane: ರಕ್ತೇಶ್ವರಿ ದೈವದ ಗೆಜ್ಜೆ ಸದ್ದು; ಪ್ರಶ್ನಾ ಚಿಂತನೆಯಲ್ಲಿ ದೊರೆತ ಉತ್ತರವೇನು?

Mangaluru Daivaradhane: ರಕ್ತೇಶ್ವರಿ ದೈವದ ಗೆಜ್ಜೆ ಸದ್ದು; ಪ್ರಶ್ನಾ ಚಿಂತನೆಯಲ್ಲಿ ದೊರೆತ ಉತ್ತರವೇನು?

Mangaluru Daivaradhane

Hindu neighbor gifts plot of land

Hindu neighbour gifts land to Muslim journalist

Mangaluru Daivaradhane: ದೈವಗಳನ್ನು ನಂಬುವ ಕರಾವಳಿಗರಿಗೆ ದೈವಾರಾಧನೆ ಬಹಳ ಮಹತ್ವದ್ದು. ಇತ್ತೀಚೆಗೆ ಯೆಯ್ಯಾಡಿಯ ಇಂಡಸ್ಟ್ರಿಯಲ್‌ ಎಸ್ಟೇಟ್‌ ಹಿಂಬದಿಯಲ್ಲಿ ಇರುವ ನಾಗಮಂಟಪ ರಸ್ತೆಯ ರಕ್ತೇಶ್ವರಿ ಕ್ಷೇತ್ರದಲ್ಲಿ ದೈವದ ಗೆಜ್ಜೆ ಶಬ್ದ ಕೇಳಿ ಬರುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿತ್ತು. ಇದೀಗ ಪ್ರಶ್ನಾ ಚಿಂತನೆ ಹಾಕಿದಾಗ ರಕ್ತೇಶ್ವರಿ ದೈವ ಇರುವಿಕೆ ಕುರಿತು ಇರುವಿಕೆಯ ಬಗ್ಗೆ ಪತ್ತೆಯಾಗಿದೆ.

ಇದನ್ನೂ ಓದಿ: Mangaluru: ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆ

ಯೆಯ್ಯಾಡಿಯ ಈ ಜಾಗದಲ್ಲಿ ಜನರಿಗೆ ಬೆಂಕಿ ಬೆಳಕಿ, ಗೆಜ್ಜೆ ಸದ್ದಿನ ಜೊತೆಗೆ ರಕ್ತೇಶ್ವರಿ ದೈವ ಸಂಚರಿಸುವಂತಹ ಅನುಭವಗಳು ಆಗುತ್ತಿತ್ತು. ಅನೇಕ ಜನ ಇದರ ಅನುಭವ ಮಾಡಿದ್ದಾಗಿಯೂ ಹೇಳಿದ್ದಾರೆ. ಇದೀಗ ಜನರಿಗೆ ಇದು ದೈವದ ಪವಾಡ ಇರುವುದು ಗೊತ್ತಾಗಿದೆ.

ಬಹಳ ವರ್ಷಗಳ ಹಿಂದೆ ಈ ಜಾಗದಲ್ಲಿ ರಕ್ತೇಶ್ವರಿ ಆರಾಧನೆ ನಡೆಯುತ್ತಿದ್ದು, ನಂತರ ಕಾಲ ಕ್ರಮೇಣ ರಕ್ತೇಶ್ವರಿ ದೈವದ ಆರಾಧನೆ ನಿಂತು ಹೋಗಿತ್ತು. ಗ್ರಾಮಸ್ಥರಿಗೆ ಇಲ್ಲೊಂದು ದೈವಸ್ಥಾನವಿದೆ ಎಂಬುವುದೇ ಮರೆತು ಹೋಗಿತ್ತು. ಇದೀಗ ಪ್ರಶ್ನಾ ಚಿಂತನೆಯಲ್ಲಿ ದೈವದ ಕುರುಹು ಪತ್ತೆ ಆಗಿದೆ. ಆ ಜಾಗದಲ್ಲಿ ದೀಪ ಹಚ್ಚುವಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ಇದೀಗ ನಾಗನ ಹುತ್ತದ ಬಳಿ ಗ್ರಾಮದ ಜನರು ದೀಪ ಹಚ್ಚುತ್ತಿದ್ದರು. ಆದರೂ ಜನರಿಗೆ ಮತ್ತೆ ಮತ್ತೆ ಗೆಜ್ಜೆಯ ಸದ್ದು ಕೇಳಿ ಬರುತ್ತಿದ್ದರಿಂದ ಇದೊಂದು ಪ್ರಶ್ನೆಯಾಗಿಯೇ ಉಳಿದಿತ್ತು.

ಇದನ್ನೂ ಓದಿ: Mangaluru: ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆ

ಆ ಜಾಗದ ಮರವೊಂದರ ಬುಡದಲ್ಲಿ ಆ ಗೆಜ್ಜೆ ಸದ್ದು ಕೊನೆಯಾಗುತ್ತಿತ್ತು. ನಂತರ ಮತ್ತೆ ಪ್ರಶ್ನಾ ಚಿಂತನೆ ನೋಡಿದಾಗ, ಅಲ್ಲಿ ರಕ್ತೇಶ್ವರಿ ದೈವದ ಇರುವಿಕೆ ಇರುವುದು ಗೊತ್ತಾಗಿದೆ. ಮರದ ಬುಡದಲ್ಲೇ ರಕ್ತೇಶ್ವರಿ ದೈವ ನೆಲೆ ನಿಂತಿರೋದು ಚಿಂತನೆಯಲ್ಲಿ ಪತ್ತೆಯಾಗಿದೆ. ಸದ್ಯಕ್ಕೆ ಮರದ ಬುಡದಲ್ಲೇ ದೀಪ ಹಚ್ಚಿ ರಕ್ತೇಶ್ವರಿ ದೈವ ಆರಾಧನೆ ಮಾಡಲಾಗುತ್ತಿದೆ.