Pavagadh: ಪಾವಗಡದ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ನಂತರ ಸೋಂಕು ತಗುಲಿ 3 ಮಹಿಳೆಯರ ಸಾವು: ಆಸ್ಪತ್ರೆ ಸಿಬ್ಬಂದಿ ಅಮಾನತು

Share the Article

ತುಮಕುರು ಜಿಲ್ಲೆಯ ಪಾವಗಡ ತಾಲೂಕಿನ ಸರ್ಕಾರಿ ಪ್ರಸೂತಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಮೂವರು ಮಹಿಳೆಯರು ಶಸ್ತ್ರಚಿಕಿತ್ಸೆಯ ಬಳಿಕ  ಸಾವನ್ನಪ್ಪಿದ್ದಾರೆ.

ಈ ಸಂಬಂಧ ಒಬ್ಬ ಸ್ತ್ರೀರೋಗ ತಜ್ಞ ಸೇರಿದಂತೆ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯೆ ಡಾ.ಪೂಜಾ, OT ಟೆಕ್ನಿಷಿಯನ್ ಕಿರಣ್, ಸ್ಟಾಫ್ ನರ್ಸ್ ಪದ್ಮಾವತಿ ಎಂಬುವವರನ್ನು ಸೇವೆಯಿಂದ ವಜಾ ಮಾಡಿದೆ.

ಇದನ್ನೂ ಓದಿ: EMI Ideas: ಸಾಲದ ಮಾಡಿ ಕಾರು ಖರೀದಿಸಲು ಬಯಸುವಿರಾ? ಇಲ್ಲಿದೆ ಇಎಂಐ, ಬಡ್ಡಿ ವಿವರ

ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು  ಶುಕ್ರವಾರ ಏಳು ಮಹಿಳೆಯರು ಸಿ – ಸೆಕ್ಷನ್ ಮತ್ತು ಗರ್ಭಾಶಯ ಸೋಂಕಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿಯಂದು ಅನಿತಾ ಮೃತಪಟ್ಟರೆ, ಗರ್ಭಕೋಶದ ಸೋಂಕಿಗನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ನರಸಮ್ಮ ಶನಿವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಎರಡನೇ ಮಗುವಿಗೆ ಜನ್ಮ ನೀಡಿದ್ದ ಅಂಜಲಿ ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದು, ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮೃತರ ಸಂಬಂಧಿಕರು ಹಾಗೂ ಗ್ರಾಮಸ್ಥರು ಸೋಮವಾರ ಆಸ್ಪತ್ರೆಗೆ ತೆರಳುವ ರಸ್ತೆ ತಡೆ ನಡೆಸಿದರು.

Leave A Reply