7th pay commission: ವೇತನ ಆಯೋಗದ ಮುಂದೆ, ಹೊಸ ಬೇಡಿಕೆಯನ್ನಿಟ್ಟ ಪೊಲೀಸ್ ಇಲಾಖೆ,
ಬೆಂಗಳೂರು: ಮೊನ್ನೆ ಸಿದ್ದರಾಮಯ್ಯ ನೇತೃತ್ವದ ಬಜೆಟ್ ನಲ್ಲಿ 7 ನೆಯ ವೇತನ ಆಯೋಗವನ್ನು ರಚನೆ ಮಾಡಿದ್ದು ಇದರ ಹೊಣೆಯನ್ನು ಕೆ. ಸುಧಾಕರ್ ಗೆ ವಹಿಸಲಾಗಿದೆ. ಮೊದಲು ಆಯೋಗದ ವರದಿಯನ್ನು ಪಡೆದುಕೊಂಡು ನಂತ್ರ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Marriage And Divorce: ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ ರದ್ದತಿಗೆ ಅಸ್ಸಾಂ ಸಚಿವ ಸಂಪುಟ ಅಸ್ತು
ಈಗಾಗಲೇ ರಾಜ್ಯಸರ್ಕಾರ 2023 ನವೆಂಬರ್ ನಲ್ಲಿ ಅವಧಿಯನ್ನು 2024 ಮಾರ್ಚ್ 15 ರ ವರೆಗೆ ವಿಸ್ತರಿಸಲಾಗಿದೆ. ಮಾರ್ಚ್ ತಿಂಗಳಲ್ಲಿ ಲೋಕ ಸಭಾ ಚುನಾವಣೆಗಳು ನಡೆಯುವುದರಿಂದ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. ಅಲ್ಲದೆ ಎನ್ಪಿಎಸ್ ಅನ್ನು ಕೈ ಬಿಟ್ಟು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಬಜೆಟ್ ನಲ್ಲಿ ಉಲ್ಲೇಖ ಮಾಡಿಲ್ಲ. ಈಗ ನೌಕರರ ಇನ್ನಷ್ಟು ಬೇಡಿಕೆಗಳನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ.
ಪೊಲೀಸ್ ಇಲಾಖೆ ಬೇಡಿಕೆ
ಪೊಲೀಸ್ ಇಲಾಖೆ ಸಹ ವೇತನ ಆಯೋಗದ ಮುಂದೆ ತನ್ನ ಬೇಡಿಕೆಗಳನ್ನು ಇಟ್ಟಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇನ್ನೂ ನೌಕರರ ಮನೆ ಭತ್ಯೆ,ಪಿಂಚಣಿ, ಪ್ರಯಾಣ ಭತ್ಯೆ ಇವುಗಳ ಬೇಡಿಕೆ ಇಟ್ಟಿದ್ದಾರೆ.
ಅಗ್ನಿಶಾಮಕ ದಳ ಹಾಗೂ ಕಾರಾಗೃಹ ದಲ್ಲಿ ಕೆಲಸ ಮಾಡುವ ಎಎಸ್ಐ ಹಾಗೂ ಪಿಎಸ್ಐ ವಾರ್ಷಿಕವಾಗಿ 30 ದಿನಗಳ ವೇತನವನ್ನು ಪಡೆಯುತ್ತಿದ್ದಾರೆ. ಪೋಲಿಸ್ ಇಲಾಖೆಯಲ್ಲಿ 15 ದಿನಗಳ ವೇತನ ಪಡೆಯುತ್ತದೆ. ಹಾಗೇ ಪೊಲೀಸ್ ಇಲಾಖೆಗೂ ಮಾಡಿ ಎಂದು ಮನವಿ ಮಾಡಿದ್ದಾರೆ.
ಪೊಲೀಸ್ ಇಲಾಖೆಯ 30 ದಿನದ ಹೆಚ್ಚುವರಿ ವೇತನ ನೀಡುವ ವಿಷಯ ಆಯೋಗದ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಇದು ಜಾರಿಯಾದರೆ ಪೊಲೀಸ್ ಇಲಾಖೆಗೂ 30 ದಿನಗಳ ವೇತನ ದೊರೆಯಲಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.
.