Udupi: ಉಡುಪಿಯಲ್ಲಿ ಕ್ರೈಸ್ತ ಧರ್ಮ ಪ್ರಚಾರಕ್ಕೆ ಬಂದ ಮಹಿಳೆಯರು – ದೊಣ್ಣೆ ಹಿಡಿದು ಓಡಿಸಿದ ಸ್ಥಳೀಯರು, ವಿಡಿಯೋ ವೈರಲ್ !!
Udupi: ಉಡುಪಿಯಲ್ಲಿ ಇಬ್ಬರು ಮಹಿಳೆಯರು ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡುತ್ತಿದ್ದು, ಇದನ್ನು ಮನಗಂಡ ಸ್ಥಳೀಯರು ಅವರನ್ನು ದೊಣ್ಣೆ ಹಿಡಿದು ಓಡಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.
ಇದನ್ನೂ ಓದಿ: Puttur: ಶ್ರೀ ಕ್ಷೇತ್ರ ನಳೀಲು :ಪತಿಯ ಸಂಕಲ್ಪವನ್ನು ಈಡೇರಿಸಿದ ಪತ್ನಿ
ಹೌದು, ಉಡುಪಿ(Udupi) ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪಿನಕೋಟೆಯಲ್ಲಿ ಇಬ್ಬರು ಮಹಿಳೆಯರು ಬಂದು ಸ್ಥಳೀಯರಿಗೆ ಕ್ರಿಶ್ಚಿಯನ್ ಮತದ ಬಗ್ಗೆ ಪ್ರಚಾರ ಮಾಡಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೊಬ್ಬ, ಮತಾಂತರ ಮಾಡಲು ಬಂದಿದ್ದೀರ ಎಂದು ಪ್ರಶ್ನಿಸಿದಾಗ ಮಹಿಳೆಯರ ಕೈಯಲ್ಲಿ ಪ್ರಚಾರದ ಪುಸ್ತಕಗಳಿರುವುದು ಕಂಡು ಆಕ್ರೋಶವ್ಯಕ್ತಪಡಿಸಿರುವ ಸ್ಥಳೀಯ ವ್ಯಕ್ತಿ, ದೊಣ್ಣೆ ಹಿಡಿದು ಓಡಿಸಿ, ಇನ್ನೆಂದೂ ಬಾರದಂತೆ ಅವಾಜ್ ಹಾಕಿದ್ದಾರೆ.