Home Breaking Entertainment News Kannada Actress Trisha: ನಟಿ ತ್ರಿಷಾ ವಿರುದ್ಧ ಮತ್ತೊಂದು ವಿವಾದಾತ್ಮಕ ಹೇಳಿಕೆ; 25ಲಕ್ಷ ಕೊಟ್ಟು ತ್ರಿಷಾಳನ್ನು ರೆಸಾರ್ಟ್‌ಗೆ...

Actress Trisha: ನಟಿ ತ್ರಿಷಾ ವಿರುದ್ಧ ಮತ್ತೊಂದು ವಿವಾದಾತ್ಮಕ ಹೇಳಿಕೆ; 25ಲಕ್ಷ ಕೊಟ್ಟು ತ್ರಿಷಾಳನ್ನು ರೆಸಾರ್ಟ್‌ಗೆ ಕರೆಸಿದ್ದೆ-ರಾಜಕಾರಣಿಯ ಶಾಕಿಂಗ್‌ ಹೇಳಿಕೆ

Actress Trisha

Hindu neighbor gifts plot of land

Hindu neighbour gifts land to Muslim journalist

Actress Trisha: ನಟಿ ತ್ರಿಷಾ ಅವರಿಗೆ ಇತ್ತೀಚೆಗೆ ವಿವಾದ ಬೆನ್ನತ್ತಿದೆ. ಮನ್ಸೂರು ಆಲಿ ಖಾನ್‌ ನಟ ಅವರು ಇತ್ತೀಚೆಗೆ ನಟಿ ವಿರುದ್ಧ ಅಸಭ್ಯ ಹೇಳಿಕೆ ನೀಡಿದ್ದು, ನಂತರ ಕ್ಷಮೆ ಕೇಳಿದ್ದು, ಇದೀಗ ಮತ್ತೊಂದು ವಿವಾದ ಉಂಟಾಗಿದೆ. ಎಐಎಡಿಎಂಕೆ ಪಕ್ಷದ ಮಾಜಿ ನಾಯಕ ಎ.ವಿ.ರಾಜು ಅಸಹ್ಯಕರ ಹೇಳಿಕೆಯೊಂದನ್ನು ನೀಡಿದ್ದಾರೆ.

ರಾಜು ಅವರು ಹೇಳಿದ ಈ ಮಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಪಶ್ಚಿಮ ಸೇಲಂನ ಶಾಸಕ ಜಿ ವೆಂಕಟಚಲಂ ಅವರನ್ನು ಟೀಕಿಸುವ ಭರದಲ್ಲಿ ತ್ರಿಷಾ ಅವರ ಹೆಸರನ್ನು ಎಳೆದು ತಂದಿದ್ದಾರೆ. ತ್ರಿಷಾಗೆ ದುಡ್ಡು ಕೊಟ್ಟು ನಮ್ಮ ರೆಸಾರ್ಟ್‌ಗೆ ಕರೆಸಿಕೊಂಡಿದ್ದೆ ಎಂಬರ್ಥದ ಹೇಳಿಕೆಯೊಂದನ್ನು ನೀಡಿದ್ದಾರೆ.

ಸಿಎಂ ಜಯಲಲಿತಾ ಅವರು 2016 ರಲ್ಲಿ ನಿಧನ ಹೊಂದಿದ್ದು, ನಂತರ ಶಾಸಕರು ಕೊವತ್ತೂರು ರೆಸಾರ್ಟ್‌ಗೆ ಶಿಫ್ಟ್‌ ಆಗಿದ್ದರು. ಈ ಕೂವತ್ತೂರು ರೆಸಾರ್ಟ್‌ ಕಾಂಚಿಪುರಂ ಜಿಲ್ಲೆಯಲ್ಲಿದೆ. ಎಡಪ್ಪಾಡಿ ಪಳನಿಸ್ವಾಮಿ ರೆಸಾರ್ಟ್‌ನಲ್ಲಿ ತನ್ನ ಬೆಂಬಲಕ್ಕೆ ನಿಲ್ಲುವಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಯುವ ನಾಯಕರಿಗೆ ಯಾವ ನಟಿ ಬೇಕು ಎಂದು ಶಾಸಕರಾಗಿದ್ದ ನಟ ಕರುಣಾಸ್‌ ನೋಡಿಕೊಳ್ಳುತ್ತಿದ್ದರು. ರೆಸಾರ್ಟ್‌ನಲ್ಲಿ ಅವರೆಲ್ಲ ಏನು ಮಾಡುತ್ತಾರೆ ಎಂದು ನೋಡಲು ಹೋಗಿದ್ದೆ. ಸೇಲಂ ಪಶ್ಚಿಮ ಕ್ಷೇತ್ರದ ಶಾಸಕರಾಗಿದ್ದ ವೆಂಕಟಾಚಲಂ ಅವರು ನನಗೆ ಯುವ ನಟಿಯೇ ಬೇಕು ಎಂದು ಹೇಳಿದ್ದರು. ನನಗೆ ತ್ರಿಷಾನೇ ಬೇಕು ಎಂದು ಹಠ ಮಾಡಿದ್ದರು. ನಂತರ ತ್ರಿಷಾಗೆ 25 ಲಕ್ಷ ರೂ. ನೀಡಿ ರೆಸಾರ್ಟ್‌ಗೆ ಕರೆದುಕೊಂಡು ಬಂದರು. ನಾವು ಅಲ್ಲಿಂದ ಊಟ ಮಾಡಿ ವಾಪಸ್‌ ಬಂದೆವು. ಸಾಕಷ್ಟು ನಟಿಯರ ಜೊತೆ ಕೂವತ್ತೂರು ರೆಸಾರ್ಟ್‌ನಲ್ಲಿ ಶಾಸಕರು ಮಜಾ ಮಾಡಿದ್ದಾರೆ. ಅವರ ಹೆಸರನ್ನು ಇಲ್ಲಿ ಹೇಳಲು ಆಗುವುದಿಲ್ಲ. ಆ ನಟಿಯರು ಅವರ ಆಸೆಯನ್ನೆಲ್ಲಾ ಈಡೇರಿಸಿದರು ಎಂದು ಎ.ವಿ.ರಾಜು ಹೇಳಿದ್ದಾರೆ.

ಇವರ ಈ ಹೇಳಿಕೆಯ ವೀಡಿಯೋ ಆಧರಿಸಿದ ಇದೀಗ ನಟಿ ತ್ರಿಷಾ ಮಾತನಾಡಿದ್ದಾರೆ. ಹಾಗೂ ಕಾನೂನಿನ ಮೊರೆ ಹೋಗಿದ್ದಾರೆ.