Belthangady: ಆಸಿಡ್‌ ದಾಳಿ ಪ್ರಕರಣ; 29 ವರ್ಷಗಳ ನಂತರ ಆರೋಪಿ ಖುಲಾಸೆಗೊಳಿಸಿದ ನ್ಯಾಯಾಲಯ

Share the Article

Belthangady: ಆಸಿಡ್‌ ದಾಳಿ ಪ್ರಕರಣದ ಆರೋಪಿಯೋರ್ವರನ್ನು ನ್ಯಾಯಾಲಯ ಖುಲಾಸೆಗೊಳಿಸಿದ ಘಟನೆಯೊಂದು ನಡೆದಿದೆ. ಉಜಿರೆಯಲ್ಲಿ 1995, 27 ಸೆಪ್ಟಂಬರ್‌ನಲ್ಲಿ ನಡೆದ ಆಸಿಡ್‌ ದಾಳಿ ಪ್ರಕರಣವಿದು.

ಇದನ್ನೂ ಓದಿ: Draught: ಬರ ನಿರ್ವಹಣೆಗೆ ರೈತರಿಗೆ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ!

ಉಜಿರೆ ಗ್ರಾಮದ ನಿವಾಸಿ ಮಂಜುನಾಥ್‌ ಪ್ರಭು ಅವರ ಮಗ ಗಣೇಶ್‌ ಪ್ರಭು ಎಂಬುವವರ ಮಾಲೀಕತ್ವಕ್ಕೆ ಸೇರಿದ ಬಾಡಿಗೆ ಮನೆಯೊಂದರಲ್ಲಿ ಪ್ರಕರಣದ ಆರೋಪಿ ಶಂಕರ ಗೌಡ ಯಾನೇ ವೀರಪ್ಪ ಗೌಡ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು. ಆರೋಪಿಯ ಪತ್ನಿ ಗಣೇಶ್‌ ಪ್ರಭುವಿನ ಮನೆಯಲ್ಲಿ ಮನೆಗೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದರು. ಆಕೆಯನ್ನು ಮನೆ ಕೆಲಸದಿಂದ ಅನಂತರ ತೆಗೆದುಹಾಕಲಾಗಿತ್ತು. ಈ ಕಾರಣದಿಂದ ಕೆಲಸದಿಂದ ಕಿತ್ತುಹಾಕಿದ ಪೂರ್ವದ್ವೇಷದ ಕಾರಣಕ್ಕಾಗಿ ಆರೋಪಿಯು 27 ಸೆಪ್ಟೆಂಬರ್‌ 1995 ರಂದು ಈ ಕೃತ್ಯ ಎಸಗಿದ್ದ ಎಂದು ಹೇಳಿದ್ದಾರೆ.

ಇನ್ನು ಈ ಪ್ರಕರಣ ಆರೋಪಿ ಶಂಕರ ಗೌಡ ಎಂಬುವವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇನ್ನು ಈ ಪ್ರಕರಣದ ಕುರಿತು ದೀರ್ಘಕಾಲದ ಸಾಕ್ಷ್ಯ ವಿಚಾರಣೆಯು ಬೆಳ್ತಂಗಡಿ ನ್ಯಾಯಾಲಯದಲ್ಲಿ ನಡೆದಿದ್ದು, ಆರೋಪಿ ಶಂಕರಗೌಡ ಯಾನೆ ಶ್ರೀಧರ ಗೌಡ ದೋಷಮುಕ್ತನಾಗಿದ್ದಾನೆ ಎಂದು ನ್ಯಾಯಾಲಯ ತೀರ್ಪು ಪ್ರಕಟ ಮಾಡಿದೆ.

Leave A Reply

Your email address will not be published.