Home Karnataka State Politics Updates HSRP: ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಸಹಾಯವಾಣಿ ಆರಂಭ!!

HSRP: ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಸಹಾಯವಾಣಿ ಆರಂಭ!!

HSRP

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು ; ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಇದ್ದ ಸಮಯ ಈಗೆ ವಿಸ್ತರಣೆಯಾಗಿದೆ. ಈ ಕುರಿತಂತೆ ಹಲವು ಗೊಂದಲಗಳಿವೆ. ವಾಹನ ಸವಾರರು ಸಾರಿಗೆ ಇಲಾಖೆಗೆ ಗೊಂದಲ ಪರಿಹಾರ ಮಾಡುವಂತೆ ಮನವಿಗಳನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ಇಲಾಖೆಗೆ ಈಗ ಸಹಾಯವಾಣಿ ಆರಂಭಿಸಿದೆ.

ಇದನ್ನೂ ಓದಿ: Vijayapura: ಹೆಂಡತಿಯ ಶೀಲ ಶಂಕಿಸಿ ಸನಿಕೆ ಹಿಡಿದ ಗಂಡ ಏನು ಮಾಡಿದ ಗೊತ್ತಾ?! ಯಪ್ಪಾ.. ಬೆಚ್ಚಿಬೀಳಿಸುತ್ತೆ ಘಟನೆ

ಹೆಚ್‌ಎಸ್‌ಆರ್‌ಪಿ ಪ್ಲೇಟ್‌ನಲ್ಲಿ ವಾಹನದ ಸಂಪೂರ್ಣ ವಿವರ ಇರುತ್ತದೆ. ಒಂದು ವೇಳೆ ವಾಹನ ಕಳ್ಳತನವಾದರೆ ಇದರಿಂದ ಹುಡುಕಲು ಅನುಕೂಲವಾಗುತ್ತದೆ. ಇದನ್ನು ಅನಧಿಕೃವಾಗಿ ಬದಲಾವಣೆ ಮಾಡುವುದಕ್ಕೆ ಸಾಧ್ಯವೇ ಇಲ್ಲ.

ಸಹಾಯವಾಣಿ ಆರಂಭ

ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಹಾಕಿಸಲು ಆನ್‌ಲೈನ್ ಮುಖೇನ ನೋಂದಣಿ ಮಾಡಿಸಬೇಕಾಗಿದೆ. ಇಂತಹ ಸಮಯದಲ್ಲಿ ತಾಂತ್ರಿಕ ತೊಂದರೆಗಳು ಉಂಟಾದರೆ ಅದನ್ನು ಬೇಗ ಬಗೆಹರಿಸಲು ಸಹಾಯವಾಣಿಯನ್ನು ಸಾರಿಗೆ ಇಲಾಖೆ ಆರಂಭ ಮಾಡಿದೆ.

ಬೆಳಗ್ಗೆ 10 ರಿಂದ ಸಂಜೆ 5.30ರ ತನಕ ಸಹಾಯವಾಣಿ ಸಂಖ್ಯೆ 9449863429/26 ಸಂಖ್ಯೆಗೆ ಕರೆ ಮಾಡಬಹುದು. ಆನ್‌ಲೈನ್‌ನಲ್ಲಿ ಹೆಚ್‌ಎಸ್ಆರ್‌ಪಿ ಪ್ಲೇಟ್ ನೋಂದಣಿ ಬಗ್ಗೆ ಹಲವಾರು ಲಿಂಕ್‌ಗಳು ಸಿಗುತ್ತಿವೆ. ಆ ಲಿಂಕ್ಗಳ ಬಗ್ಗೆ ಎಚ್ಚರದಿಂದ ಇರಿ ಎಂದು ಸಾರಿಗೆ ಇಲಾಖೆ ಮನವಿ ಮಾಡಿದೆ.

https://transport.karnataka.gov.in ಅಥವ www.siam.in ಗೆ ಭೇಟಿ ನೀಡಿ ವಾಹನಗಳಿಗೆ ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆಗೆ ನೋಂದಣಿ ಮಾಡಿಕೊಳ್ಳಬಹುದು.

ವೆಬ್‌ಸೈಟ್‌ಗೆ ಭೇಟಿ ನೀಡಿ ವಾಹನದ ವಿವರವನ್ನು ನೋಂದಣಿ ಮಾಡಬೇಕು. ಫಲಕ ಅಳವಡಿಕೆ ದಿನಾಂಕ, ಮಾರಾಟ ಕೇಂದ್ರದ ಹೆಸರು, ವಿಳಾಸ ಖಚಿತಪಡಿಸಿಕೊಳ್ಳಬೇಕು. ಆನ್‌ಲೈನ್ ಮೂಲಕವೇ ನಿಗದಿತ ಶುಲ್ಕವನ್ನು ಪಾವತಿಸಬೇಕು.

ಗಡುವು ವಿಸ್ತರಣೆಯಾಗಿರುವುದರಿಂದ ಸವಾರರು ಸುಮ್ಮನೆ ಕೂರುವಂತಿಲ್ಲ. ಕೋಟ್ಯಾಂತರ ವಾಹನಗಳಿಗೆ ನಂಬರ್ ಪ್ಲೇಟ್ ಅನ್ನು ಹಾಕಿಸಬೇಕಿದೆ. ಆದ್ದರಿಂದ ಬೇಗ ನೋಂದಣಿ ಮಾಡಿಕೊಳ್ಳುವುದು ಒಳ್ಳೆಯದು.