Pension Rules: ಗಂಡ ಸಾವನ್ನಪ್ಪಿದ್ದರೆ, ಹೆಂಡತಿಗೆ ಪಿಂಚಣಿ ಸಿಗುತ್ತದೆ??? ಯಾವಾಗ ಸಿಗಬಹುದು.! ಇಲ್ಲಿದೆ ಸಂಪೂರ್ಣ ಮಾಹಿತಿ.

 

ಗಂಡನ ಸಾವಿನ ನಂತರ ಹೆಂಡತಿಗೆ ಪಿಂಚಣಿ ಯಾವಾಗ ಸಿಗುತ್ತದೆ? EPFO ನಿಯಮಗಳೇನು ಗೊತ್ತಾ?

ಸಾಮಾನ್ಯವಾಗಿ ನಿವೃತ್ತಿಯ ಹೊಂದಿದ ಬಳಿಕ ಉದ್ಯೋಗಿಗಳಿಗೆ ಪಿಂಚಣಿಯನ್ನು ನೀಡಲಾಗುತ್ತದೆ. ಆದರೆ ನಿವೃತ್ತಿಯ ನಂತರ. ಪತಿ ಮರಣ ಹೊಂದಿದರೆ ಪತ್ನಿಗೆ ಪಿಂಚಣಿಯ ಮೊತ್ತ ಸಿಗುತ್ತದೆಯೇ ?? ಈ ಬಗ್ಗೆ ತಿಳಿಯೋಣ ಬನ್ನಿ.

ಇದನ್ನೂ ಓದಿ: Special leave for teachers: ಈ ಭಾಗದ ಶಿಕ್ಷಕರಿಗೆ ನಾಳೆ ವಿಶೇಷ ರಜೆ ಘೋಷಣೆ !!

ಖಾಸಗಿ ವಲಯದ ಉದ್ಯೋಗಿಗಳು ತಮ್ಮ ಸಂಬಳದ 12% ವನ್ನು ಪಿಎಫ್ ನಿಧಿಯಲ್ಲಿ ಠೇವಣಿಯಾಗಿ ಇಡುತ್ತಾರೆ. ಅವರ ನಿವೃತ್ತಿಯ ಬಳಿಕ ಈ ಮೊತ್ತವನ್ನು ಉದ್ಯೋಗಿಗೆ ಪಿಂಚಣಿಯ ರೂಪದಲ್ಲಿ ನೀಡಲಾಗುತ್ತದೆ. ನಿವೃತ್ತಿಯ ನಂತರ ಪತಿ ಮರಣ ಹೊಂದಿದಲ್ಲಿ ಪತ್ನಿಗೆ ಈ ಮೊತ್ತ ದೊರೆಯುತ್ತದೆಯೇ ಎಂಬುದನ್ನು ನೋಡೋಣ.

ಈ ಕುರಿತಂತೆ ಕೆಲವೊಂದು ನಿಯಮಗಳಿವೆ. ಅವುಗಳೇನು ಎಂಬುದನ್ನು ತಿಳಿದುಕೊಳ್ಳೋಣ. ಪತಿಯ ಮರಣ ಹೊಂದಿದ ನಂತರ ಅವರ ಪಿಂಚಣಿ ಮೊತ್ತವನ್ನು ಪತ್ನಿ ಪಡೆಯಬಹುದಾಗಿದ್ದರೂ ಅದಕ್ಕೆ ಕೆಲವು ನಿಯಮಗಳಿವೆ. ಪಿಂಚಣಿಯ ನಿಧಿಯು ಉದ್ಯೋಗಿಯ ಕುಟುಂಬಕ್ಕೆ ಆರ್ಥಿಕ ಭದ್ರತೆಯ ಜೊತೆಗೆ ಸ್ಥಿರತೆ ಒದಗಿಸುತ್ತದೆ.

ಪತಿಯ ಮರಣದ ನಂತರ ಪತ್ನಿಗೆ ಪಿಂಚಣಿಯ ಹಕ್ಕು ಇದೆಯೇ?

ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಯ ನಿವೃತ್ತಿ ವಯಸ್ಸು ಗರಿಷ್ಠ 58 ವರ್ಷಗಳಾಗಿದೆ. ಖಾಸಗಿ ಸಂಸ್ಥೆಯಲ್ಲಿ ಕನಿಷ್ಟ 10 ವರ್ಷಗಳ ಕಾಲವಾದರೂ ಕೆಲಸ ಮಾಡುತ್ತಿದ್ದರೆ ಮಾತ್ರ ಪಿಂಚಣಿಗೆ ಅರ್ಹರಾಗಿರುತ್ತಾರೆ. ಈ ಸಮಯದಲ್ಲಿ 58 ವರ್ಷ ತುಂಬಿದ ನಂತರ ಉದ್ಯೋಗಿ ಮರಣ ಹೊಂದಿದರೆ ಆತನ ಪತ್ನಿಗೆ ಪಿಂಚಣಿಯ ಲಾಭ ಸಿಗುತ್ತದೆಯೇ ಎಂಬುದನ್ನು ನಾವು ತಿಳಿದುಕೊಳ್ಳಲಿದ್ದೇವೆ.

ಉದ್ಯೋಗಿಯ ಹಠಾತ್ ಮರಣ ಸಂಭವಿಸಿದರೆ, ಅಥವಾ ದೈಹಿಕ ಅಸ್ವಸ್ಥತೆಯಿಂದ ಉದ್ಯೋಗಿ ಮರಣ ಹೊಂದಿದಾಗ ಇಪಿಎಫ್ ಅಡಿಯಲ್ಲಿ ಪಡೆದ ಮೊತ್ತವು ಮೃತರಾದವರ ಕುಟುಂಬಕ್ಕೆ ಸಾಕಷ್ಟು ಸಹಾಯವನ್ನು ಒದಗಿಸುತ್ತದೆ.

ಇಪಿಎಫ್‌ಒ ಅಡಿಯಲ್ಲಿ ಪಿಂಚಣಿ ಲಭ್ಯವಿದೆ

ಇಪಿಎಫ್‌ಒ ಖಾಸಗಿ ಉದ್ಯೋಗಿಗಳಿಗೆ ಪಿಂಚಣಿ ನೀಡುವ ಜವಾಬ್ದಾರಿಯನ್ನು ಹೊಂದಿದೆ. ಇಪಿಎಫ್ ಭವಿಷ್ಯದ ನಿಧಿಯಾಗಿ ಗುರುತಿಸಿಕೊಂಡಿದೆ. ಉದ್ಯೋಗಿಗೆ ಆರ್ಥಿಕವಾಗಿ ಸಬಲರಾಗಲು ಈ ಯೋಜನೆ ಇದೆ.

ಇಪಿಎಫ್ ನಿಧಿಗೆ ಪ್ರತಿ ತಿಂಗಳು ಉದ್ಯೋಗಿ ತನ್ನ ಸಂಬಳದ ಒಂದಷ್ಟು ಮೊತ್ತವನ್ನು ನೀಡುತ್ತಾನೆ. ಈ ಮೊತ್ತವು ನೌಕರರ ಮೂಲ ವೇತನದ ಶೇ.12% ರಷ್ಟು ಆಗಿದೆ. ಉದ್ಯೋಗಿಯೊಂದಿಗೆ ಆ ಕಂಪನಿ ಸಹ ಇಪಿಎಫ್‌ಗೆ ತನ್ನ ಸ್ಪಲ್ಪ ಭಾಗದ ಕೊಡುಗೆಯನ್ನು ನೀಡುತ್ತದೆ.

ಕಂಪನಿಯು ತಿಂಗಳಿಗೊಮ್ಮೆ ಅವರ ಪಿಎಫ್ ಖಾತೆಗೆ ಉದ್ಯೋಗಿಯ ಮೊತ್ತವನ್ನು ಜಮಾ ಮಾಡುತ್ತದೆ. ನಿವೃತ್ತಿಯ ಬಳಿಕ ಪಿಂಚಣಿ ಪಾವತಿಸಲು ಈ ನಿಧಿಯು ಸಹಾಯವಾಗುತ್ತದೆ. ಈ ನಿಧಿಯು ಉದ್ಯೋಗಿಗೆ ಹಾಗೂ ಅವರ ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ನೀಡುತ್ತದೆ.

ಪಿಂಚಣಿ ಯಾವಾಗ ದೊರೆಯುತ್ತದೆ?

ಸರ್ಕಾರದ ನಿಯಮದ ಅನುಸಾರ ನಿವೃತ್ತಿ ವಯಸ್ಸನ್ನು 58 ವರ್ಷಕ್ಕೆ ನಿಗದಿಪಡಿಸಿದೆ. ಉದ್ಯೋಗಿ ನೀಡುವ ಒಟ್ಟು ಮೊತ್ತದಲ್ಲಿ ಒಂದು ಭಾಗವನ್ನು ಪಿಎಫ್ ನಿಧಿಯಲ್ಲಿ ಹಾಗೂ ಮತ್ತೊಂದು ಭಾಗವನ್ನು ಇಪಿಎಸ್‌ನಲ್ಲಿ ಠೇವಣಿಯಲ್ಲಿ ಇಡಲಾಗುತ್ತದೆ.

ಉದ್ಯೋಗಿಗೆ 58 ವರ್ಷಗಳು ತುಂಬಿದ ತರುವಾಯ , ಅವರು ಈ ನಿಧಿಯಿಂದ ಹಣವನ್ನು ಪಡೆಯಬಹುದು. ನೌಕರರು ತಮ್ಮ ಪಿಎಫ್ ಖಾತೆಯಿಂದ ಒಂದು ದೊಡ್ಡ ಮೊತ್ತವನ್ನು ಪಡೆಯಬಹುದಾಗಿದೆ.

ಯಾವಾಗ ಪಡೆಯಬಹುದು.

ಉದ್ಯೋಗಿ 58 ವರ್ಷಗಳ ನಂತರ ಏನಾದರೂ ಮರಣಹೊಂದಿದರೆ, ನೇರವಾಗಿ ಆತನ ಪತ್ನಿ ಪತಿಯ ಪಿಂಚಣಿ ಹಕ್ಕನ್ನು ಪಡೆದುಕೊಳ್ಳುತ್ತಾರೆ. ಅಲ್ಲದೇ ನಾಮಿನಿಯು ಪೂರ್ಣ ಹಣವನ್ನು ಪಡೆಯುತ್ತಾರೆ. ಉದ್ಯೋಗಿ ಒಂದು ವೇಳೆ ನಿವೃತ್ತಿಯ ಬಳಿಕ ಮರಣಹೊಂದಿದಲ್ಲಿ ಪಿಂಚಣಿ ಮೊತ್ತದ ಅರ್ಧದಷ್ಟು ಆತನ ಪತ್ನಿಗೆ ಸಲ್ಲುತ್ತದೆ.

ಸರ್ಕಾರವು ವಿಧವೆಯರ ಪಿಂಚಣಿ ಮೊತ್ತವನ್ನು 1,000 ರೂ.ಗೆ ನಿಗದಿಗೊಳಿಸಿದೆ. ಅಂದರೆ ನೌಕರರು ಮರಣ ಹೊಂದಿದ ಬಳಿಕ ವಿಧವೆ ಪತ್ನಿಗೆ ಪಿಂಚಣಿಯಾಗಿ 1,000 ರೂವನ್ನು ನೀಡಲಾಗುತ್ತದೆ.

Leave A Reply

Your email address will not be published.