Valentine’s day: ಪ್ರೇಮಿಗಳ ದಿನವೇ ಹಿಂದೂ ಹುಡುಗಿಗೆ ಪ್ರಪೋಸ್ ಮಾಡಿದ ಮುಸ್ಲಿಂ ಯುವಕ – ಬಜರಂಗದಳದ ಕಾರ್ಯಕರ್ತರ ಎಂಟ್ರಿ, ನಂತರ ಆದದ್ದೇನು?

Share the Article

Valentine’s day: ಪ್ರೇಮಿಗಳ ದಿನದಂದು ಮುಸ್ಲಿಂ ಹುಡುಗನೊಬ್ಬ ಹಿಂದೂ ಯುವತಿ ಬಳಿ ತಾನೂ ಕೂಡ ಹಿಂದೂ ಹುಡುಗ ಎಂದು ಸುಳ್ಳು ಹೇಳಿ ಪ್ರಪೋಸ್ ಮಾಡಿದ್ದಾನೆ. ವಿಚಾರ ಗೊತ್ತಾಗಿ ಸ್ಥಳಕ್ಕೆ ಆಗಮಿಸಿದ ಬಜರಂಗದಳದ ಕಾರ್ಯಕರ್ತರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: West bengal: ಪೋಲೀಸ್ ಲಾಠಿ ಚಾರ್ಜ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಗಂಭೀರ ಗಾಯ – ಆಸ್ಪತ್ರೆಗೆ ದಾಖಲು !!

ಹೌದು, ಮಧ್ಯಪ್ರದೇಶದ(Madhyapradesh) ಇಂದೋರ್ ಜಿಲ್ಲೆಯ ಚಂದನ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಪ್ರೇಮಿಗಳ ದಿನದಂದು(Valentine’s day) ಅರ್ಷದ್ ಎಂಬ ಮುಸ್ಲಿಂ ಯುವಕ ತಾನು ಹರ್ಷ ಎಂಬ ಹೆಸರಿನಲ್ಲಿ ಹುಡುಗಿಯನ್ನು ಪರಿಚಯ ಮಾಡಿಕೊಂಡು ಪ್ರಫೋಸ್ ಮಾಡಿದ್ದಾನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ಇದಕ್ಕೆ ಹುಡುಗಿ ಒಪ್ಪಲಿಲ್ಲ.

ಬಳಿಕ ಈ ಮಾಹಿತಿ ಬಜರಂಗದಳದ(Bajarangdal) ಕಾರ್ಯಕರ್ತರಿಗೆ ತಲುಪಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು ಯುವಕನನ್ನು ಹಿಡಿದು ಥಳಿಸಿದ್ದಾರೆ. ನಂತರ ಯುವಕನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

Leave A Reply

Your email address will not be published.