6 Heart Attack: 6 ತಿಂಗಳ ಮೊದಲೇ ಸಂಭಾವ್ಯ ಹೃದಯಾಘಾತ ಪತ್ತೆ ಮಾಡಬಹುದು, ಹೇಗೆ?- ಅಧ್ಯಯನದಿಂದ ಮಾಹಿತಿ ಬಹಿರಂಗ
Heart Attack: ಪ್ರಸ್ತುತ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗಿದೆ. ಯಾವಾಗ ಹೇಗೆ ಬರುತ್ತದೆ ಎಂಬುದು ತಿಳಿಯುವುದಿಲ್ಲ. ಹೊಸ ಅಧ್ಯಯನದ ಪ್ರಕಾರ ರಕ್ತ ಪರೀಕ್ಷೆ ಮಾಡುವುದರಿಂದ ಮುಂದಿನ 6 ತಿಂಗಳೊಳಗೆ ಹೃದಯಾಘಾತವಾಗುವುದಿದ್ದರೆ ಮೊದಲೇ ತಿಳಿಯಬಹುದು. ಇದು ಮಹತ್ತರ ಬೆಳವಣಿಗೆಯಾಗಿದೆ.
ಜಾಗತಿಕವಾಗಿ ಹೃದಯಾಘಾತವು ಸಾವಿಗೆ ಮುಖ್ಯ ಕಾರಣವಾಗಿದೆ. WHO ಪ್ರಕಾರ ಹೃದಯ ರಕ್ತನಾಳದ ಕಾಯಿಲೆಗಳಿಂದ ಪ್ರತಿ ವರ್ಷ ಸುಮಾರು 17.9 ಮಿಲಿಯನ್ ಮಂದಿ ಸಾವನ್ನಪ್ಪುತ್ತಾರೆ ಎನ್ನಲಾಗಿದೆ.
ಐದು CVD ಸಾವುಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಹೃದಯಾಘಾತ ಮತ್ತು ಪಾರ್ಶ್ವವಾಯುಗಳಿಂದ ಸಂಭವಿಸುತ್ತವೆ. 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಲ್ಲಿ ಅಕಾಲಿಕವಾಗಿ ಮರಣ ಸಂಭವಿಸುತ್ತದೆ.
ನಮ್ಮ ಆಹಾರ, ಜೀವನಶೈಲಿ, ನಿದ್ರೆ ಮತ್ತು ಇತರ ಅಂಶಗಳು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೂ ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಇತರ ಅಂಶಗಳನ್ನು ನಾವು ಅನುಸರಿಸುತ್ತವೆ.
ಸ್ವೀಡನ್‌ನ ಉಪ್ಸಲಾ ವಿಶ್ವವಿದ್ಯಾನಿಲಯದ ಸಂಶೋಧಕರು ಆರು ತಿಂಗಳ ಮೊದಲೇ ಹೃದಯಾಘಾತವನ್ನು ಹೊಂದುವ ಅಪಾಯವನ್ನು ತಿಳಿಯಬಹುದು. ರಕ್ತ ಪರೀಕ್ಷೆಯಲ್ಲಿ ಅದನ್ನು ಊಹಿಸಬಹುದು ಎಂದು ಸಂಶೋಧನೆ ಮಾಡಿದ್ದಾರೆ.
ಉಪ್ಸಲಾ ವಿಶ್ವವಿದ್ಯಾನಿಲಯದ ಹೃದ್ರೋಗ ತಜ್ಞ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ಪ್ರಾಧ್ಯಾಪಕ ಜೋಹಾನ್ ಸುಂಡ್‌ಸ್ಟ್ರೋಮ್ ರವರು ಹೇಳುವಂತೆ, ‘ರಕ್ತಪರೀಕ್ಷೆಯಿಂದ ಹೃದಯಾಘಾತ ಮುನ್ಸೂಚನೆ ಸಿಗುತ್ತದೆ. ವಿಚ್ಛೇದನದ ತಿಂಗಳಲ್ಲಿ ಹೃದಯಾಘಾತದ ಅಪಾಯವು ದ್ವಿಗುಣಗೊಳ್ಳುತ್ತದೆ ಮತ್ತು ಕ್ಯಾನ್ಸರ್ ರೋಗನಿರ್ಣಯದ ನಂತರ ವಾರದಲ್ಲಿ ಮಾರಣಾಂತಿಕ ಹೃದಯ ಘಟನೆಯ ಅಪಾಯವು ಐದು ಪಟ್ಟು ಹೆಚ್ಚು.’ ಎಂದು ಹೇಳಿದ್ದಾರೆ.