Home Breaking Entertainment News Kannada FootBall: ಕ್ರೀಡಾಂಗಣದಲ್ಲಿ ಆಡುವಾಗ ಸಿಡಿಲು ಬಡಿದು ಉಸಿರು ಚೆಲಿದ್ದ ಆಟಗಾರ; ವಿಡಿಯೋ ವೈರಲ್‌

FootBall: ಕ್ರೀಡಾಂಗಣದಲ್ಲಿ ಆಡುವಾಗ ಸಿಡಿಲು ಬಡಿದು ಉಸಿರು ಚೆಲಿದ್ದ ಆಟಗಾರ; ವಿಡಿಯೋ ವೈರಲ್‌

Hindu neighbor gifts plot of land

Hindu neighbour gifts land to Muslim journalist

Football :ಎಲ್ಲಿ ಯಾರಿಗೆ ಸಾವು ಬರುತ್ತದೆಯೋ ಅದನ್ನು ಹೇಳಲಾಗುವುದಿಲ್ಲ. ಹಾಗೆನೇ ಕ್ರೀಡಾಂಗಣವೊಂದರಲ್ಲಿ ಫುಟ್ಬಾಲ್‌ (Football) ಪಂದ್ಯಾವಳಿಯೊಂದು ನಡೆಯುತ್ತಿದ್ದ ಸಮಯದಲ್ಲಿ ಆಟಗಾರನೊಬ್ಬನಿಗೆ ಸಿಡಿಲು ಬಡಿದು ಸಾವಿಗೀಡಾದ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದ್ದು, ಕಳೆದ ಶನಿವಾರ ಮಧ್ಯಾಹ್ನ ಫುಟ್ಬಾಲ್‌ ಪಂದ್ಯಾವಳಿ ನಡೆಯುತ್ತಿದ್ದ ವೇಳೆ ಸಿಡಿಲು ಬಡಿದು ಫುಟ್ಬಾಲ್‌ ಆಟಗಾರ ಕ್ರೀಡಾಂಗಣದಲ್ಲೇ ಉಸಿರು ಚೆಲ್ಲಿದ್ದಾನೆ. ಈ ವೀಡಿಯೋ ನೋಡುವಾಗಲೇ ನಿಜಕ್ಕೂ ಶಾಕ್‌ ಆಗುತ್ತದೆ.

https://twitter.com/githii/status/1756606815033282759

ಪಶ್ಚಿಮ ಜಾವಾದ ಬಂಡಂಗ್‌ನಲ್ಲಿರುವ ಸಿಲಿವಾಂಗಿ ಸ್ಟೇಡಿಯಂನಲ್ಲಿ ಸುಬಾಂಗ್‌ ಮತ್ತು ಬಂಡಂಗ್‌ ತಂಡದ ಮಧ್ಯೆ ನಡೆಯುತ್ತಿದ್ದ ಸೌಹಾರ್ದಯುತ ಪಂದ್ಯದಲ್ಲಿ ಭಾಗವಹಿಸಿದ್ದ ಸೆಪ್ಟೈನ್‌ ರಹರ್ಜಾ ಎಂಬ ವ್ಯಕ್ತಿಗೆ ಕ್ರೀಡಾಂಗಣದಲ್ಲಿ ಆಡುವ ಸಮಯದಲ್ಲಿ ಸಿಡಿಲು ಬಡಿದು ಆತನ ಅಲ್ಲೇ ಕುಸಿದು ಬಿದ್ದಿದ್ದಾನೆ. ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದರೂ, ಪ್ರಯೋಜನವಾಗಲಿಲ್ಲ. ಆತ ಅಷ್ಟರಲ್ಲೇ ಸಾವಿಗೀಡಾಗಿದ್ದ.

ಇದನ್ನೂ ಓದಿ :  24 ನೇ ವಯಸ್ಸಿನಲ್ಲಿಯೇ ಭೀಕರ ರಸ್ತೆ ಅಪಘಾತದಲ್ಲಿ ದಾಖಲೆ ವೀರ ಮ್ಯಾರಥಾನ್ ಆಟಗಾರ ಕೆಲ್ವಿನ್‌ ಮರಣ!