Kelvin Kiptum: 24 ನೇ ವಯಸ್ಸಿನಲ್ಲಿಯೇ ಭೀಕರ ರಸ್ತೆ ಅಪಘಾತದಲ್ಲಿ ದಾಖಲೆ ವೀರ ಮ್ಯಾರಥಾನ್ ಆಟಗಾರ ಕೆಲ್ವಿನ್‌ ಮರಣ!

Kelvin Kiptum: ಭಾನುವಾರ ನಡೆದ ಭೀಕರ ಕಾರು ಅಪಘಾತದಲ್ಲಿ ಮ್ಯಾರಥಾನ್‌ ವಿಶ್ವ ದಾಖಲೆ ಮಾಡಿರುವ ಕೆಲ್ವಿನ್‌ ಕಿಪ್ಟಮ್‌ ನಿಧನರಾಗಿದ್ದಾರೆ. ಈ ಘಟನೆ ಪಶ್ಚಿಮ ಕೀನ್ಯಾದಲ್ಲಿ ನಡೆದಿದೆ. ಕೆಲ್ವಿನ್‌ ಕಿಪ್ಟೋಮ್‌ ಅವರಿಗೆ ಕೇವಲ 24 ವರ್ಷ ವಯಸ್ಸಾಗಿತ್ತು. ಇಷ್ಟು ಸಣ್ಣ ಪ್ರಾಯದಲ್ಲಿ ಇಹಲೋಕಕ್ಕೆ ವಿದಾಯ ಹೇಳಿದ್ದು ಅವರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ವರದಿಯ ಪ್ರಕಾರ, ಕೆಲ್ವಿನ್ ಕಿಪ್ಟಮ್ (Kelvin Kiptum) ಅವರ ಕಾರಿನಲ್ಲಿ ಅವರ ತರಬೇತುದಾರ ಗೆರ್ವೈಸ್ ಹಕಿಜಿಮಾನ ಮತ್ತು ಇನ್ನೊಬ್ಬ ಮಹಿಳಾ ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ.

ಕೆಲ್ವಿನ್ ಕಿಪ್ಟೊಮ್ ಅವರ ತರಬೇತುದಾರ ಗೆರ್ವೈಸ್ ಹಕಿಜಿಮಾನ ಕೂಡ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಹಿಳಾ ಪ್ರಯಾಣಿಕರು ಗಾಯಗೊಂಡಿದ್ದಾರೆ. ಫೆ.10 ರಂದು ಶನಿವಾರ ರಾತ್ರಿ 11 ಗಂಟೆಗೆ ಸುಮಾರಿಗೆ ಪಶ್ಚಿಮ ಕೀನ್ಯಾದ ಕಪ್ಟೇಜ್‌ನಿಂದ ಎಲ್ಡೋರೇಟ್‌ಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇಬ್ಬರು ಸ್ಥಳದಲ್ಲೇ ಮೃತ ಹೊಂದಿದ್ದರೆ, ಒಬ್ಬರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

2022 ರಲ್ಲಿ ಅಕ್ಟೋಬರ್‌ನಲ್ಲಿ ಕೆಲ್ವಿನ್ ಕಿಪ್ಟಮ್ ಅವರು ಚಿಕಾಗೋ ಮ್ಯಾರಥಾನ್ ನಲ್ಲಿ ತನ್ನದೇ ದೇಶದವರಾದ ಎಲಿಯಡ್‌ ಕಿಪ್‌ಚೋಗ್‌ ಅವರ 2.01.09 ರ ದಾಖಲೆಯನ್ನು 35 ಸೆಕೆಂಡುಗಳ ಅಂತರದಲ್ಲಿ ಮುರಿದು ವಿಶ್ವ ದಾಖಲೆ ಮಾಡಿದ್ದರು.

ಇದನ್ನೂ ಓದಿ :EPFO: ಅತಿ ಶೀಘ್ರದಲ್ಲೇ ಬಡ್ಡಿ ಹಣ ಪಿಎಫ್‌ ಖಾತೆಗೆ ಜಮೆ, ಪರಿಶೀಲಿಸುವುದು ಹೇಗೆ

1 Comment
  1. […] ಇದನ್ನೂ ಓದಿ :  24 ನೇ ವಯಸ್ಸಿನಲ್ಲಿಯೇ ಭೀಕರ ರಸ್ತೆ ಅಪಘಾತದಲ… […]

Leave A Reply

Your email address will not be published.