Home News Koppala : ನವ ದಂಪತಿಗಳ ಮಧ್ಯೆ ಜಗಳ- ಕೋಪಗೊಂಡ ಗಂಡನನ್ನು ಹುಡುಕಿಕೊಂಡು ಬಂದ 21ರ ಯುವತಿ...

Koppala : ನವ ದಂಪತಿಗಳ ಮಧ್ಯೆ ಜಗಳ- ಕೋಪಗೊಂಡ ಗಂಡನನ್ನು ಹುಡುಕಿಕೊಂಡು ಬಂದ 21ರ ಯುವತಿ ಮೇಲೆ ಗ್ಯಾಂಗ್ ರೇಪ್!!

Hindu neighbor gifts plot of land

Hindu neighbour gifts land to Muslim journalist

Koppala : ಅದೊಂದು ಜೋಡಿ ಪ್ರೀತಿಸಿ ಮದುವೆಯಾಗಿ ಮೂರು ತಿಂಗಳು ಕಳೆಯುವುದರೊಳಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಹುಸಿ ಕೋಪಕ್ಕೆ ಒಳಗಾಗಿತ್ತು. ಈ ಕೋಪವೇ ಘೋರ ದುರಂತಕ್ಕೆ ಕಾರಣವಾಗಿದ್ದು, 21ರ ಮುಗ್ಧ ಹೆಂಡತಿ ಮೇಲೆ ಗ್ಯಾಂಗ್ ರೇಪ್ ನಡೆಯುವಂತೆ ಮಾಡಿದೆ.

 

ಹೌದು, ಕೊಪ್ಪಳದ(Koppala) ಗಂಗಾವತಿ(Gangavati) ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿರುವ ಕೇಂದ್ರ ಬಸ್ ನಿಲ್ದಾಣದಲ್ಲಿ ಬೆಚ್ಚಿಬೀಳಿಸುವಂತ ಘಟನೆಯೊಂದು ಬೆಳಕಿಗೆ ಬಂದಿದ್ದು, ಗಂಡನೊಂದಿಗೆ ಕೋಪಗೊಂಡು ಪಾರ್ಕಿಗೆ ಬಂದ ಹೆಂಡತಿಯಮೇಲೆ ಅಲ್ಲೇ ಇದ್ದ ಕಾಮುಕರು ಗ್ಯಾಂಗ್ ರೇಪ್ ಮಾಡಿದ್ದಾರೆ.

 

ಅಂದಹಾಗೆ ಬೆಂಗಳೂರಿನ ಗೊರಗುಂಟೆಪಾಳ್ಯದ 21 ವರ್ಷ ವಯಸ್ಸಿನ ಯುವತಿ, ಗಂಗಾವತಿ ತಾಲ್ಲೂಕಿನ ಸಿದ್ಧಾಪುರದ ಯುವಕನನ್ನು ಪ್ರೀತಿಸಿ ಮೂರು ತಿಂಗಳ ಹಿಂದೆ ಮದುವೆಯಾಗಿದ್ದಳು. ಈ ನಡುವೆ ಏನೋ ಕಾರಣಕ್ಕೆ ಗಲಾಟೆ ನಡೆದು ಪತಿ ತನ್ನ ಪತ್ನಿಯನ್ನು ಬಿಟ್ಟು ಬಂದಿದ್ದ. ಪತಿಯನ್ನು ಹುಡುಕಿಕೊಂಡು ಪತ್ನಿ ಶುಕ್ರವಾರ ತಡರಾತ್ರಿ ಗಂಗಾವತಿಯ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿದ್ದಾಳೆ. ಇಬ್ಬರೂ ಸಂಧಿಸಿದ ಬಳಿಕ ಮತ್ತೆ ಹೆಂಡತಿ ತನ್ನ ಪತಿಯೊಂದಿಗೆ ಜಗಳಕ್ಕೆ ಇಳಿದಿದ್ದಾಳೆ. ಇದನ್ನು ಗಮನಿಸಿದ ಆರು ಜನರ ತಂಡವೊಂದು ಅಲ್ಲಿಗೆ ಬಂದು ಮಹಿಳೆಯನ್ನ ಚುಡಾಯಿಸುತ್ತಿದ್ದಾನೆ ಎಂದು ಭಾವಿಸಿ ಗಂಡನ ಮೇಲೆ ಹಲ್ಲೆ ಮಾಡಿದ್ದಾರೆ.

 

ಆಗ ಯುವತಿ, ಆತ ನನ್ನ ಗಂಡ ಎಂದು ಕೂಗಿ ಹೇಳಿದರೂ ಕೇಳಿಸಿಕೊಳ್ಳದ ಯುವಕರು, ವಿಪರೀತವಾಗಿ ಹಲ್ಲೆ ಮಾಡಿದ್ದಾರೆ. ಇದರಿಂದ ಗಾಬರಿಗೊಂಡ ಸಮೀಪದ ಪಾರ್ಕ್ ಕಡೆ ಓಡಿ ಹೋಗಿದ್ದಾಳೆ. ಹಿಂಬಾಲಿಸಿಕೊಂಡು ಬಂದ ಕಾಮುಕರ ಗುಂಪು, ಆಕೆ ಮೈ ಮೇಲಿದ್ದ ಬಟ್ಟೆ ಹರಿದು ಮೈ ಮೇಲೆರಗಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಪೈಕಿ ಒಬ್ಬ ಆಕೆಯನ್ನು ಅತ್ಯಾಚಾರ ಮಾಡಿದ್ದಾನೆ. ಪತಿ ಹುಡುಕಿಕೊಂಡು ಬರು ಹೊತ್ತಿಗೆ ಯುವಕರು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

 

ಸದ್ಯ ಆರೋಪಿಗಳನ್ನು ಪತ್ತೆ ಹಚ್ಚಲಾಗಿದ್ದು, ಅತ್ಯಾಚಾರ ಎಸಗಿದವನು ಲಿಂಗರಾಜ ಎಂದು ತಿಳಿದು ಬಂದಿದೆ. ಮಿಕ್ಕ ಆರೋಪಿಗಳನ್ನು ಮೌಲಹುಸೇನ್, ಶಿವಕುಮಾರಸ್ವಾಮಿ, ಪ್ರಶಾಂತ, ಮಹೇಶ ಮತ್ತು ಮಾದೇಶ ಎಂದು ಗುರುತಿಸಲಾಗಿದೆ. ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : RSS ಮುಖಂಡ ಹಾಗೂ ಪುತ್ರಿಯ ಕತ್ತು ಸೀಳಿ ಬರ್ಬರ ಹತ್ಯೆ, ಕೊಂದದ್ದು ಯಾರು, ಯಾಕೆ ಎಂದು ಗೊತ್ತಾದ್ರೆ ಶಾಕ್ ಆಗ್ತೀರಾ!!