Puttur: ನವವಿವಾಹಿತೆ ಪತಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ

Share the Article

Puttur: ನವ ವಿವಾಹಿತೆಯೋರ್ವರು ತನ್ನ ಪತಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಕಬಕ ವಿನಯನಗರದಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ಶೋಭಾ (26 ವರ್ಷ) ಮೃತ ಮಹಿಳೆ. ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಕ್ಕಾಜೆ ರಾಮ್ಮಣ್ಣ ಗೌಡ ಮತ್ತು ಪುಷ್ಪ ದಂಪತಿಯ ಪುತ್ರಿ.

ಇದನ್ನೂ ಓದಿ: Arecanut Farming: ಅಡಿಕೆಯ ಮೊಳಕೆಗಳನ್ನು ಬೆಳಸುವ ಸುಲಭ ವಿಧಾನ!! ಹೀಗೆ ಮಾಡಿ!!

ಒಂದುವರೆ ತಿಂಗಳ ಹಿಂದಷ್ಟೇ ಶೋಭಾ ಅವರನ್ನು ಪುತ್ತೂರು ಸಮೀಪದ ಕಬಕ ವಿನಯನಗರದ ರೋಹಿತ್‌ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಶೋಭಾ ಅವರು ಈ ಕೃತ್ಯ ಮಾಡಿದ್ದಾರೆ. ಆತ್ಮಹತ್ಯೆಗೆ ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ. ಈ ಘಟನೆ ಕುರಿತು ಪುತ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply