Family tips: ಗಂಡಸರೇ ಇದನ್ನು ಮಾಡಿದ್ರೆ ಹೆಂಡತಿಯರಿಗೆ ಎಂದೂ ಸಿಟ್ಟೇ ಬರಲ್ಲ !!

Family tips : ಸಾಂಸಾರಿಕ ಜೀವನದಲ್ಲಿ ಗಂಡ, ಹೆಂಡತಿಯ ಜಗಳ ಕಾಮನ್. ಆದರೆ ಗಲಾಟೆ ಆಗಿ ಕೆಲ ಹೊತ್ತಲ್ಲೇ ಗಂಡ ಸಮಾಧಾನಗೊಂಡರೆ ಹೆಂಡತಿಯ ಹಟ ಸ್ವಲ್ಪ ತುಸು ಹೆಚ್ಚಿರೋದ್ರಿಂದ ಆಕೆ ಬೇಗ ಸಮಾಧಾನ ಆಗೋದೆ ಇಲ್ಲ. ಹೀಗಾಗಿ ಆಕೆಯನ್ನು ಸುಮ್ಮನಾಗಿಸಲು, ರಾಜಿಯಾಗಲು ಬಾರಿ ಹರಸಾಹಸ ಪಡಬೇಕಾಗುತ್ತದೆ. ಹೀಗಾಗಿ ಗಂಡಸ್ರೆ ಇನ್ಮುಂದೆ ಈ ಕುರಿತು ಟೆನ್ಶನ್ ಬಿಡಿ. ಈ ಕೆಲಸ ಮಾಡಿ ನೋಡಿ, ಹೆಂಡ್ತಿ ಯಾವತ್ತೂ ನಿಮ್ಮ ಮೇಲೆ ಕೋಪ ಮಾಡೋದೆ ಇಲ್ಲ!

ಇದನ್ನೂ ಓದಿ: Karnataka Congress : ರಾಜ್ಯದ 12 ಲೋಕಸಭಾ ಕ್ಷೇತ್ರಗಳಿಗೆ ಒಬ್ಬನೇ ಅಭ್ಯರ್ಥಿಯನ್ನು ಆಯ್ಕೆಮಾಡಿದ ಕಾಂಗ್ರೆಸ್ !!

ಹೌದು, ಪ್ರತಿಯೊಬ್ಬ ಮಹಿಳೆ ತನ್ನ ಸಂಗಾತಿಯಿಂದ ಕೆಲವು ವಿಷಯಗಳನ್ನು ಬಯಸುತ್ತಾಳೆ. ಆದರೆ ಕೆಲವು ಗಂಡಂದಿರು ಇದರ ಬಗ್ಗೆ ಗಮನ ಕೊಡದೆ ತಮ್ಮ ಪಾಡಿಗೆ ತಾವಿರುತ್ತಾರೆ. ಹೀಗಾಗಿ ಗಂಡಂದಿರೆ ಕೆಲವು ವಿಷಯಗಳ ಬಗ್ಗೆ ಇಲ್ಲಿ ನಾವು ನಿಮಗೆ ಹೇಳುತ್ತಿದ್ದೇವೆ. ಇವುಗಳನ್ನು ನಿರಂತರವಾಗಿ ಪಾಲಿಸಿ, ನಿಮ್ಮ ಹೆಂಡತಿ ಎಂದಿಗೂ ನಿಮ್ಮೊಂದಿಗೆ ಕೋಪಿಸಿಕೊಳ್ಳವುದಿಲ್ಲ.

 

• ಬಹಿರಂಗವಾಗಿ ಪ್ರೀತಿಯನ್ನು ವ್ಯಕ್ತಪಡಿಸಿ : ಅನೇಕ ಗಂಡಸರು, ಗಂಡಂದಿರು ತಮ್ಮ ಕೋಪವನ್ನು ತಮ್ಮ ಸಂಗಾತಿಯ ಮೇಲೆ ಹೊರಹಾಕುತ್ತಾರೆ, ಆದರೆ ಪ್ರೀತಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ಅವರು ತುಂಬಾ ನಾಚಿಕೆಪಡುತ್ತಾರೆ. ನೀವು ಸಹ ಈ ತಪ್ಪನ್ನು ಮಾಡುತ್ತಿದ್ದರೆ, ಅದನ್ನು ಈಗಲೇ ಸರಿಪಡಿಸಿ. ಏಕೆಂದರೆ ಇದು ಸಂಬಂಧದಲ್ಲಿ ನಿಮ್ಮ ಹೆಂಡತಿಯನ್ನು ಸಂತೋಷಪಡಿಸುವ ಒಂದು ಮಾರ್ಗವಾಗಿದೆ.

• ಸಹಾಯ: ವೈವಾಹಿಕ ಜೀವನದಲ್ಲಿ (married life) ಗಂಡ ಹೆಂಡತಿ ಜೊತೆಯಾಗಿ ಅರ್ಥ ಮಾಡಿಕೊಂಡು ಬಾಳೋದು ಮುಖ್ಯ. ಇನ್ನು ಮನೆಯ ಜವಾಬ್ಧಾರಿ ಅಂದ್ರೆ, ಅದು ಕೇವಲ ಹೆಂಡತಿಯ ಪಾಲಾಗಬಾರದು. ಮನೆಯ ಎಲ್ಲಾ ಕೆಲಸದಲ್ಲೂ ಪತ್ನಿಗೆ ಸಹಾಯ ಮಾಡುತ್ತಾ ಬಂದ್ರೆ ಅವರಿಗೂ ಖುಷಿಯಾಗುತ್ತೆ, ಕೆಲಸವೂ ಬೇಗವಾಗುತ್ತೆ. ಇದರಿಂದ ಅವರಿಗೆ ನಿಮ್ಮ ಮೇಲೆ ಪ್ರೀತಿಯೂ ಹೆಚ್ಚುತ್ತೆ.

• ಅಪರೂಪಕ್ಕೆ ಸರ್ ಪ್ರೈಸ್ ನೀಡಿ: ಹೆಂಗಸರಿಗೆ ಸರ್ ಪ್ರೈಸ್ (surprise) ಅಂದ್ರೆ ತುಂಬಾನೆ ಇಷ್ಟ. ಹಾಗಾಗಿ, ಅವರಿಗೆ ತಿಂಗಳಿಗೊಮ್ಮೆಯಾದ್ರೂ ಸರ್ ಪ್ರೈಸ್ ನೀಡೋದನ್ನು ಮರೆಯಬೇಡಿ. ಇದರಿಂದ ಅವರಿಗೂ ತುಂಬಾನೆ ಖುಷಿಯಾಗುತ್ತೆ.

• ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು: ನೀವು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ, ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ಸಮಯವನ್ನು ಏಕಾಂಗಿಯಾಗಿ ಕಳೆಯಲು (spend quality time) ಸಮಯ ತೆಗೆದುಕೊಳ್ಳಿ. ಅವರ ದಿನ ಹೇಗಿತ್ತು ಎಂದು ತಿಳಿದುಕೊಳ್ಳಿ, ಅವರ ಸಮಸ್ಯೆಗಳು ಮತ್ತು ಕಾಳಜಿಗಳನ್ನು ಅರ್ಥಮಾಡಿಕೊಳ್ಳಿ. ಈ ಒಂದು ವಿಷಯವು ನಿಮ್ಮ ಸಂಬಂಧದ ಬೇರುಗಳನ್ನು ಹೆಚ್ಚು ಬಲಪಡಿಸುತ್ತದೆ.

Leave A Reply

Your email address will not be published.