Belthangady: ಲಾರಿ ಚಾಲಕನ ವೇಗದ ಚಾಲನೆಗೆ ಬಸ್‌ಗೆಂದು ಕಾಯುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವು

Share the Article

Belthangady: ಲಾರಿ ಚಾಲಕನ ವೇಗ ಹಾಗೂ ನಿರ್ಲಕ್ಷ್ಯಕ್ಕೆ ದಾರಿ ಬದಿ ಬಸ್‌ಗಾಗಿ ಕಾಯುತ್ತಿದ್ದ ಇಬ್ಬರು ದಾರುಣವಾಗಿ ಮೃತ ಹೊಂದಿದ ಘಟನೆಯೊಂದು ಉಜಿರೆ ಸಮೀಪ ಇಂದು (ಫೆ.4) ರಂದು ನಡೆದಿದೆ.

ಉಜಿರೆ ಸಮೀಪದ ಗಾಂಧಿನಗರ ತಿರುವು ಬಳಿ ಬಸ್‌ಗೆಂದು ಕಾಯುತ್ತಿದ್ದ ಪುರುಷ ಹಾಗೂ ಮಹಿಳೆ, ಉಜಿರೆ ಕಡೆಯಿಂದ ತಿರುವಿನಲ್ಲಿ ಅತೀ ವೇಗವಾಗಿ ಬಂದ ಲಾರಿ ಇಬ್ಬರಿಗೆ ಡಿಕ್ಕಿ ಹೊಡೆದಿರುವುದು ಮಾತ್ರವಲ್ಲದೇ ವಿದ್ಯುತ್‌ ಕಂಬ ಸಮೀಪದ ಕಟ್ಟಡಕ್ಕೆ ಕೂಡಾ ಹಾನಿಯುಂಟು ಮಾಡಿದೆ.

ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮನಿಸಿರುವುದಾಗಿ ವರದಿಯಾಗಿದೆ.

Leave A Reply