Sonu Gowda: ಸೋನು ಗೌಡ ಕಾರು ಅಪಘಾತ; ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಆಸ್ಪತ್ರೆಗೆ ದಾಖಲು!

Share the Article

Sonu Gowda: ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಸೋನುಗೌಡ ಅವರ ಕಾರು ಅಪಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿರುವ ಕುರಿತು ವರದಿಯಾಗಿದೆ.

ಅಪಾರ್ಟ್‌ಮೆಂಟ್‌ನಲ್ಲಿ ನಿಲ್ಲಿಸಿದ್ದ ಕಾರು ತೆಗೆಯಲು ಹೋಗಿ ಬ್ರೇಕ್‌ ಬದಲು ಆಕ್ಸಿಲೇಟರ್‌ ತುಳಿದಿದ್ದು, ಕಾರು ಪಿಲ್ಲರ್‌ ಕಂಬಕ್ಕೆ ಗುದ್ದಿದೆ ಎಂದು ತಿಳಿದು ಬಂದಿದೆ. ಸೋನುಗೌಡಗೆ ಕಾರು ಓಡಿಸಲು ಬರುವುದಿಲ್ಲ. ಕಾರು ಕಲಿಯಲು ಇತ್ತೀಚೆಗಷ್ಟೇ ಆರಂಭ ಮಾಡಿದ್ದರು. ಪರಿಣಾಮ ಸೋನು ಗೌಡ ಅವರು ಕೈ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾರಿ ಮುಂಭಾಗ ಜಖಂ ಗೊಂಡಿದ್ದು, ಗುದ್ದಿದ ಪಿಲ್ಲರ್‌ ಕೂಡಾ ಡ್ಯಾಮೇಜ್‌ ಆಗಿದೆ. ಇನ್ನು ಕಾರು ಸೋನು ಅವರು ಚಲಾಯಿಸುತ್ತಿದ್ದರೋ, ಅಥವಾ ಬೇರೆಯವರು ಚಲಾಯಿಸುತ್ತಿದ್ದರೋ ಎಂಬುವುದರ ಕುರಿತು ಸ್ಪಷ್ಟ ಮಾಹಿತಿ ಇಲ್ಲ.

Leave A Reply