HSSRP Number Plate: ಫೆ.17 ರಿಂದ HSRP ನಂಬರ್ ಪ್ಲೇಟ್ ಇಲ್ಲ, ದಂಡ ಫಿಕ್ಸ್!!!

 

Bengaluru: ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸಲು 2024 ಫೆ.17 ರ ವರೆಗೆ ಸಾರಿಗೆ ಇಲಾಖೆಯು ವಾಹನ ಚಾಲಕರಿಗೆ ಗಡವು ನೀಡಿದೆ. ಚಾಲಕರ ನಿರಾಸಕ್ತಿಯಿಂದಾಗಿ ಸಾರಿಗೆ ಇಲಾಖೆ ದಂಡ ವಿಧಿಸಲು ಮುಂದಾಗುತ್ತಿದೆ . ಗಡುವಿನ ನಂತರ ಪ್ಲೇಟ್ ಇಲ್ಲದೆ ಸಿಕ್ಕಿಬಿದ್ದರೆ ಮೊದಲ ಬಾರಿಗೆ 1000 ರೂ ದಂಡ, ಎರಡನೇ ಬಾರಿಗೆ 2000 ರೂ ದಂಡ ವಿಧಿಸಲಾಗುವುದು ಇಲಾಖೆ ತಿಳಿಸಿದೆ.

ಇದನ್ನೂ ಓದಿ: Indian Tourist: ಫ್ರಾನ್ಸ್ ಗೆ ಹೋಗುವ ಭಾರತೀಯರಿಗೆ ಸಿಹಿ ಸುದ್ದಿ!!!

ಸಾರಿಗೆ ಈಗಾಗಲೇ ವಾಹನ ಚಾಲಕರಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸಲು ಗಡುವು ನೀಡಿದೆ. 2019 ಏ.1 ಕ್ಕಿಂತ ಮುಂಚೆ ನೋಂದಣಿಯಾಗಿರುವ ಎಲ್ಲ ವಾಹನಗಳಿಗೂ ಹೆಚ್‌ಎಸ್‌ಆರ್‌ಪಿ ಹಾಕಿಸಿಕೊಳಲ್ಲು ಡೆಡ್ ಲೈನ್ ನೀಡಿದ್ದರು ಈ ಬಗ್ಗೆ ತಲೆಕೆಡೆಸಿ ಕೊಳ್ಳದಿರುವುದು ಇಲಾಖೆಯ ತಲೆ ಕೆಡಸಿದೆ.

ಈ ಮೊದಲು 2023 ನ.17 ಕೊನೆಯ ಡೆಡ್ ಲೈನ್ ನೀಡಿತ್ತು. ಆದರೆ ಇದಕ್ಕೆ ಚಾಲಕರು ಪ್ರತಿಕ್ರಿಯೆ ನೀಡಿದ ಕಾರಣ 2024 ಫೆ.24 ರ ವರೆಗೆ ವಿಸ್ತರಿಸಲಾಗಿದೆ. ಇನ್ನೂ ಕೇವಲ 16 ದಿನಗಳು ಮಾತ್ರ ಉಳಿದಿದ್ದು, 10 ಲಕ್ಷ ವಾಹನಗಳಿಗೆ ಮಾತ್ರ ಪ್ಲೇಟ್ ಹಾಕಿಸಿ ಕೊಳ್ಳಲಾಗಿದೆ .ಸಾರಿಗೆ ಇಲಾಖೆಯ ಅಡಿಷನಲ್ ಕಮೀಷನರ್ ಮಲ್ಲಿಕಾರ್ಜುನ ಅವರು ಹೇಳಿದ್ದಾರೆ.

ಇನ್ನು ಆರ್ ಟಿ ಓ ದ ದಾಖಲೆಗಳ ಪ್ರಕಾರ 2.15 ಕೋಟಿ ಹಳೆಯ ವಾಹನಗಳಿಗೆ. 2019 ರಿಂದ ಹಿಂದಿನ 15 ವರ್ಷಗಳಲ್ಲಿ ಸುಮಾರು 1.70 ಕೋಟಿ ವಾಹನಗಳು ನೋಂದಣಿಯಾಗಿವೆ. ಗಡುವು ಮುಗಿಯುವುದರೊಳಗೆ ಪ್ಲೇಟ್ ಹಾಕಿಸಿಕೊಳ್ಳದೆ ಇದ್ದರೆ, ಸಂಚಾರಿ ಪೊಲೀಸ್ ಹಾಗೂ ಆರ್ ಟಿ ಓ ಜಂಟಿಯಾಗಿ ದಂಡ ವಿಧಿಸಲಾಗುತ್ತದೆ . ಆದರೆ ಚಾಲಕರು ಮಾತ್ರ ಸಮಯವನ್ನು ಕನಿಷ್ಠ 1 ವರ್ಷಕ್ಕೆ ವಿಸ್ತರಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.

ಈಗಾಗಲೇ ಎರಡು ಮೂರು ಬಾರಿ ಸಮಯಾವಕಾಶ ನೀಡಿರುವ ಸಾರಿಗೆ ಇಲಾಖೆ ಫೆ 17 ರ ನಂತರ ದಂಡ ವಿಧಿಸುವ ಸಾಧ್ಯತೆ ಹೆಚ್ಚಾಗಿದೆ.

Leave A Reply

Your email address will not be published.