Home Interesting Viral News: ನೇಲ್‌ ಪಾಲಿಶ್‌ ರಿಮೂವರ್‌ ಬಾಟಲ್‌ ದಿಢೀರ್ ಸ್ಫೋಟ; ಹುಡುಗಿಯ ಪ್ರಾಣಕ್ಕೆ ಕಂಟಕ!! ‌

Viral News: ನೇಲ್‌ ಪಾಲಿಶ್‌ ರಿಮೂವರ್‌ ಬಾಟಲ್‌ ದಿಢೀರ್ ಸ್ಫೋಟ; ಹುಡುಗಿಯ ಪ್ರಾಣಕ್ಕೆ ಕಂಟಕ!! ‌

Viral News

Hindu neighbor gifts plot of land

Hindu neighbour gifts land to Muslim journalist

Viral News: ಹೆಣ್ಮಕ್ಕಳಿಗೆ ನೇಲ್‌ ಪಾಲಿಶ್‌ ತುಂಬಾ ಇಷ್ಟವಾದ ಅಲಂಕಾರಿಕ ಸಾಮಾಗ್ರಿ. ತಮ್ಮ ಉಗುರುಗಳನ್ನು ಕಲರ್‌ ಕಲರ್‌ ಬಣ್ಣಗಳಿಂದ ಹಚ್ಚಿ ಅದನ್ನು ನೋಡುವುದೇ ಒಂದು ಖುಷಿ. ಆದರೆ ಈ ನೇಲ್‌ ಪಾಲಿಶ್‌ ಪ್ರಾಣಕ್ಕೇ ಕಂಟಕ ತಂದ ಸುದ್ದಿಯೊಂದು ಬೆಳಕಿಗೆ ಬಂದಿದೆ.

ಕೆನಡಿ (14 ವರ್ಷ) ಎಂಬ ಬಾಲಕಿ ಮೇಣದ ಬತ್ತಿಯ ಪಕ್ಕದಲ್ಲಿ ಕುಳಿತು ನೇಲ್‌ ಪಾಲಿಶ್‌ ಹಚ್ಚಲು ಕುಳಿತಿದ್ದಾಳೆ. ಉಗುರುಗಳಿಗೆ ಹಚ್ಚಿರುವ ಬಣ್ಣ ತೆಗೆದಯಲೆಂದು ನೇಲ್‌ ಪಾಲಿಶ್‌ ರಿಮೂವರನ್ನು ಈಕೆ ಬಳಕೆ ಮಾಡಿದ್ದಾಳೆ. ಕೂಡಲೇ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ನೇಲ್‌ ಪಾಲಿಶ್‌ ರಿಮೂವರ್‌ ಬಾಟ್‌ ಸ್ಫೋಟಗೊಂಡಿದ್ದು, ಜೊತೆಗೆ ಬಾಲಕಿಯ ಕೂದಲು ಸಂಪೂರ್ಣವಾಗಿ ಸುಟ್ಟು ಹೋಗಿದೆ. ದೇಹದ ಇತರ ಭಾಗಗಳಿಗೂ ಸುಟ್ಟ ಗಾಯವಾಗಿದೆ.

ಇದನ್ನೂ ಓದಿ: Tiger Dance: ಖ್ಯಾತ ಹುಲಿ ವೇಷಧಾರಿ ಅಶೋಕ್‌ ರಾಜ್‌ ಇನ್ನಿಲ್ಲ!!

ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವರದಿಯಾಗಿದೆ. ಈಕೆ ಸಾರ್ವಜನಿಕವಾಗಿ ತನ್ನ ಅನುಭವವನ್ನು ಹಂಚಿಕೊಂಡಿದ್ದು, ಇಂತಹ ಘಟನೆ ಇನ್ನು ಮುಂದೆ ನಡೆಯದಂತೆ ಜಾಗೃತಿ ಮೂಡಿಸುತ್ತಿದ್ದೇನೆಂದು ಬರೆದಿದ್ದಾಳೆ.

ನೇಲ್‌ಪಾಲಿಶ್‌ ರಿಮೂವರ್‌ನಲ್ಲಿ ಆಲ್ಕೋಹಾಲ್‌ಯುಕ್ತ ಅಂಶ ಬಳಕೆ ಮಾಡುವುದರಿಂದ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ನೇಲ್ ಪಾಲಿಶ್‌ ರಿಮೂವರ್‌ ಸೇರಿದಂತ, ಸ್ಯಾನಿಟೈಸರ್‌ ಬಳಸುವಾಗ ಬೆಂಕಿಯಿಂದ ದೂರವಿದ್ದು ಬಳಕೆ ಮಾಡಿದರೆ ಉತ್ತಮ.