Belthangady: ಸೌಜನ್ಯ ಕೊಲೆ ಪ್ರಕರಣ :ನ್ಯಾಯಾಲಯಕ್ಕೆ ಹಾಜರಾಗಲು ಸಂತೋಷ್ ರಾವ್ ಹಾಜರಾಗಲು ನೋಟೀಸ್
Belthangady: ಕಾಲೇಜು ವಿದ್ಯಾರ್ಥಿನಿ ಕು.ಸೌಜನ್ಯ (17) ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ವಿಶೇಷ ನ್ಯಾಯಾಲಯವು ಆರೋಪಿಯಾಗಿದ್ದ ಸಂತೋಷ್ ರಾವ್ ಮೇಲಿನ ಸಾಕ್ಷ್ಯಾಧಾರದ ಕೊರತೆಯಿಂದ 16.-6-2023 ರಂದು ದೋಷಮುಕ್ತಗೊಳಿಸಿ ಆದೇಶ ನೀಡಿತ್ತು.
ಇದನ್ನೂ ಓದಿ: Budget 2024: ಲಕ್ಷದ್ವೀಪ ಪ್ರಯಾಣದ ಮೇಲೆ ಸರ್ಕಾರ ವಿಶೇಷ ಗಮನ! ಸಂಪೂರ್ಣ ಯೋಜನೆ ಏನು ಗೊತ್ತಾ?
ಸಿಬಿಐ ಪರ ವಕೀಲ ಪ್ರಸನ್ನ ಅವರು ಕೆಳ ನ್ಯಾಯಾಲಯವು ಸಂತೋಷ್ ರಾವ್ ವಿರುದ್ಧ ದೋಷಮುಕ್ತಗೊಳಿಸಿದ ಆದೇಶದ ವಿರುದ್ಧ ಸಲ್ಲಿಸಿದ್ದ ಅಪೀಲು ಜ.30 ರಂದು ಬೆಂಗಳೂರು ಹೈಕೋರ್ಟ್‌ನ ನ್ಯಾಯಾಧೀಶರಾದ ಶ್ರೀನಿವಾಸ ಹರೀಶ್ ಕುಮಾರ್ ಮತ್ತು ವಿಜಯ ಕುಮಾರ್ ಎ ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಸೌಜನ್ಯ ಕೊಲೆ ಪ್ರಕರಣದ ಸಿಬಿಐ ಸಲ್ಲಿಸಿದ್ದ ಮರುತನಿಖೆಯ ಮೇಲ್ಮನವಿ ವಿಭಾಗೀಯ ಪೀಠದ ಎದುರು ತನಿಖೆಗೆ ಬಂದಿರುತ್ತದೆ.
ಸಂತೋಷ್ ರಾವ್ ಅವರು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ವಿಭಾಗೀಯ ನ್ಯಾಯಪೀಠವು ನೋಟಿಸ್ ನೀಡಲು ಆದೇಶ ಮಾಡಿದೆ ಎಂದು ವರದಿಯಾಗಿದೆ.