Home Interesting Theft: ಎಚ್ಚರ ಜನರೇ, ಬುಡುಬುಡುಕೆ ವೇಷದಲ್ಲಿ ಭವಿಷ್ಯ ನುಡಿಯುವ ನೆಪ, ಏಮಾರಿದರೆ ಮೂರು ನಾಮ!!!

Theft: ಎಚ್ಚರ ಜನರೇ, ಬುಡುಬುಡುಕೆ ವೇಷದಲ್ಲಿ ಭವಿಷ್ಯ ನುಡಿಯುವ ನೆಪ, ಏಮಾರಿದರೆ ಮೂರು ನಾಮ!!!

Theft

Hindu neighbor gifts plot of land

Hindu neighbour gifts land to Muslim journalist

Theft: ಬೆಂಗಳೂರು ನಗರದಲ್ಲಿ ಖತರ್ನಾಕ್‌ ಕಳ್ಳರ ಗ್ಯಾಂಗ್‌ವೊಂದು ಬಂದಿದೆ. ಬುಡುಬುಡುಕೆಯವರ ವೇಷದಲ್ಲಿ ಮನೆಯ ಮುಂದೆ ನಿಂತು ಭವಿಷ್ಯ ಹೇಳುವ ನೆಪದಲ್ಲಿ ಖದೀಮರು ಮನೆ ದೋಚುವ ಕೆಲಸಕ್ಕೆ ಮುಂದಾಗಿದ್ದಾರೆ. ಗಂಡನಿಗೆ ಗಂಡಾಂತರ ಉಂಟು, ಪೂಜೆ ಮಾಡಿ ಎಂದೆಲ್ಲ ಹೇಳಿ ಚಿನ್ನಾಭರಣ ದೋಚುತ್ತಿದ್ದಾರೆ. ಈ ಕುರಿತು ಕೊತ್ತನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:CAA: 7 ದಿನಗಳಲ್ಲಿ ದೇಶದಲ್ಲಿ ಸಿಎಎ ಜಾರಿಯಾಗಲಿದೆ, ಭಾರೀ ಸಂಚಲನ ಮೂಡಿಸಿದ ಕೇಂದ್ರ ಸಚಿವರ ಹೇಳಿಕೆ!!!

ಬುಡುಬುಡುಕೆ ವೃತ್ತಿ ಬಳಸಿ, ಕೆಲ ಖದೀಮರು ದರೋಡೆ ಮಾಡುವ ಹಂತಕ್ಕೆ ಬಂದಿಳಿದಿದ್ದಾರೆ. ಕೊತ್ತನೂರು ಠಾಣೆಯ ದೊಡ್ಡ ಗುಬ್ಬಿ ಗ್ರಾಮದ ಜನತಾ ಕಾಲೋನಿಯ ಶಂಕುತಲಾ ಎನ್ನುವವರ ಮೆನಗೆ ಬೆಳಗ್ಗೆ ಬಂದಿದ್ದ ಬುಡುಬುಡುಕೆಯವನು ಪೂಜೆ ಮಾಡದಿದ್ದರೆ 9 ದಿನದಲ್ಲಿ ನಿನ್ನ ಗಂಡನಿಗೆ ಸಾವು ಕಾದಿದೆ ಎಂದು ಹೇಳಿ ಕಿವಿಯೋಲೆ ದೋಚಿ ಪರಾರಿಯಾಗಿದ್ದಾನೆ.

ಅನಂತರ ಶಕುಂತಲಾ ಅವರು ಗಂಡ ಮನೆಗೆ ಬಂದ ನಂತರ ಗಂಡನ ಕೈಯಿಂದ ಪೂಜೆ ಮಾಡಿಸಿ ಮಡಿಕೆ ತೆಗೆದು ನೋಡಿದರೆ ಕಿವಿಯೋಲೆ ನಾಪತ್ತೆ. ನಂತರ ಅವರು ತಾನು ಮೋಸ ಹೋಗಿರುವುದು ತಿಳಿದಿದೆ. ಕೂಡಲೇ ಕೊತ್ತನೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.