Belthangady: ಭೀಕರ ಪಟಾಕಿ ಸ್ಫೋಟ ಪ್ರಕರಣ; ಗೋಡಾನ್‌ನಲ್ಲಿ ಗ್ರೆನೇಡ್‌ ತಯಾರಾಗುತ್ತಿತ್ತಾ?

Share the Article

Belthangady: ವೇಣೂರಿನ ತೋಟದ ಮನೆಯಲ್ಲಿ ಪಟಾಕಿ ಗೋಡಾನ್‌ನಲ್ಲಿ (Crackers Godown) ನಡೆದ ಭೀಕರ ಸ್ಫೋಟಕ್ಕೆ ಮೂವರ ಪ್ರಾಣ ಪಕ್ಷಿ ಹಾರಿಹೋಗಿದ್ದು, ಆರು ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಇದನ್ನೂ ಓದಿ: Belthangady: ಪಟಾಕಿ ಸ್ಫೋಟ ಪ್ರಕರಣ; ಮಾಲೀಕ ಸೈಯದ್‌ ಬಶೀರ್‌ ಪೊಲೀಸ್‌ ವಶಕ್ಕೆ!!!

ಈ ಘಟನೆಯನ್ನು ಗಮನಿಸಿದರೆ ಈ ಗೋಡಾನ್‌ನಲ್ಲಿ ಕೇವಲ ಪಟಾಕಿಯಷ್ಟೇ ತಯಾರಿಯಾಗುತ್ತಿತ್ತಾ? ಗ್ರೇನೇಡ್‌ ಮಾದರಿಯನ್ನೂ ಇಲ್ಲಿ ತಯಾರಿ ಮಾಡುತ್ತಿದ್ರಾ ಎಂಬ ಪ್ರಶ್ನೆ ಉದ್ಭವವಾಗಿದೆ.

ಮೇಲ್ನೋಟಕ್ಕೆ ಇದೊಂದು ಬಾಂಬ್‌ ಸ್ಫೋಟದ ರೀತಿಯಲ್ಲಿ ಶಬ್ದ ಕೇಳಿ ಬಂದಿರುವ ಕುರಿತು ಮಾಹಿತಿ ಇದೆ. ಸ್ಥಳದಲ್ಲಿ ಗ್ರೇನೇಡ್‌ ಮಾದರಿಯ ಸ್ಫೋಟಕ ತಯಾರಿಸುವುದರ ಕುರಿತು ಅನುಮಾನ ವ್ಯಕ್ತವಾಗಿದೆ. ಸ್ಫೋಟವಾದ ಗೋಡಾನ್‌ನಲ್ಲಿ ಮತ್ತು ಅಕ್ಕ ಪಕ್ಕ ಸಾಕಷ್ಟು ಗ್ರೇನೇಡ್‌ ಮಾದರಿ ವಸ್ತು ಪತ್ತೆಯಾಗಿದೆ. ಪಟಾಕಿ ಸ್ಫೋಟದ ತೀವ್ರತೆ ಇಷ್ಟೊಂದು ಇರಲ್ಲ ಎಂದು ಸ್ಥಳೀಯರ ಅನುಮಾನ.

ಸ್ಫೋಟದ ಶಬ್ದ ಐದಾರು ಕಿ.ಮೀ. ದೂರದವರೆಗೆ ಕೇಳಿ ಬಂದಿದ್ದು, ಮೊಬೈಲ್‌ ಫೋರೆನ್ಸಿಕ್‌ ತಂಡದಿಂದ ಗ್ರೇನಡ್‌ ಮಾದರಿ ವಸ್ತು ಸಂಗ್ರಹ ಮಾಡಲಾಗಿದೆ.

Leave A Reply