Home Crime Pune: ಮದುವೆ ಆಗುವುದಾಗಿ ನಂಬಿಸಿ ಖ್ಯಾತ ನಟಿಯ ಮೇಲೆ ಅತ್ಯಾಚಾರ!!

Pune: ಮದುವೆ ಆಗುವುದಾಗಿ ನಂಬಿಸಿ ಖ್ಯಾತ ನಟಿಯ ಮೇಲೆ ಅತ್ಯಾಚಾರ!!

Pune

Hindu neighbor gifts plot of land

Hindu neighbour gifts land to Muslim journalist

Pune: ಮದುವೆ ಆಗುತ್ತೇನೆ ಎಂದು ನಂಬಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಖ್ಯಾತ ನಟಿಯೊಬ್ಬಳು ಪೋಲೀಸ್ ಠಾಣೆ ಮೆಟ್ಟಿಲೇರಿರುವ ಪ್ರಕರಣವೊಂದು ಬೆಳಕಿದೆ ಬಂದಿದೆ.

ಹೌದು, ಮಹಾರಾಷ್ಟ್ರದ ಪುಣೆ(Pune)ಯಲ್ಲಿ ಮದುವೆಯಾಗುತ್ತೇನೆ ಎಂದು ನಂಬಿಸಿ ನಟಿಯೋರ್ವರ ಮೇಲೆ ಅತ್ಯಾಚಾರ ಎಸಗಲಾಗಿದ್ದು, ದೂರು ದಾಖಲಾಗಿದೆ. ಆರೋಪಿ ನನ್ನ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಂದಹಾಗೆ 2023 ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ನಟಿ ಜೊತೆ ಸ್ನೇಹ ಬೆಳೆಸಿದ ವ್ಯಕ್ತಿ ಪ್ರಫೋಸ್ ಮಾಡಿದ್ದ. ನಂತರ ನಟಿ ಜೊತೆ ಸಂಬಂಧ ಬೆಳೆಸಲು ಪತ್ನಿಗೆ ಡೈವೋರ್ಸ್ ನೀಡುತ್ತೇನೆ ಎಂದು ಹೇಳಿದ್ದನು. ನಂತರ ನಟಿ ಮದುವೆಯಾಗಲು ಒತ್ತಾಯಿಸಿದ್ದು, ಆತ ಬಂದೂಕು ತೋರಿಸಿ ಬೆದರಿಸಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಇದೀಗ ನಟಿಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.