Crime News: 16 ರ ಬಾಲಕಿಯ ಜೊತೆ 61 ರ ವೃದ್ಧನ ಅಕ್ರಮ ಸಂಬಂಧ? ಬಾಲಕಿ ಗರ್ಭಿಣಿ, ತಂದೆ ಮಾಡಿದ್ದೇನು ಗೊತ್ತೇ?

Share the Article

Crime News: 16 ರ ಹರೆಯ ಬಾಲಕಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇಲೆ 61 ವರ್ಷದ ವ್ಯಕ್ತಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ. ರಾಮ್‌ ಅಸರೆ ಕುಶ್ವಾಹ (61) ಎಂದು ಗುರುತಿಸಲಾಗಿದೆ.

ಕೊಲೆಯಾದ ವೃದ್ಧನಿಗೆ ಎಂಟು ಜನ ಹೆಣ್ಣು ಮಕ್ಕಳಿದ್ದು, ಮೃತ ರಾಮ್‌ ಅಸರಾ ಕುಶ್ವಾಹ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿದ್ದಾರೆ.

16 ಹರೆಯ ಹುಡುಗಿ ಗರ್ಭಿಣಿಯಾಗಿದ್ದು, ಇದಕ್ಕೆ ಯಾರು ಹೊಣೆ ಎಂದು ಕೇಳಿದಾಗ ಆಕೆ ರಾಮ್‌ ಅಸರಾ ಕುಶ್ವಾಹ ಹೆಸರು ಹೇಳಿದ್ದಾಳೆ. ಇದರಿಂದ ಕೋಪಗೊಂಡ ಬಾಲಕಿಯ ತಂದೆ ವೃದ್ಧನ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ, ಹತ್ಯೆಗೈದಿರುವುದಾಗಿ ವರದಿಯಾಗಿದೆ.

ಬಾಲಕಿ ಆರೋಪ ಮಾಡಿದಾಗ ವೃದ್ಧ ನಾನು ಮಾಡಿಲ್ಲ ಎಂದು ಹೇಳಿದ್ದಾಗಿ ವರದಿಯಾಗಿದೆ. ರಾಮ್‌ ಆಸರೆ ಅವರ ಎಂಟು ಜನ ಹೆಣ್ಣು ಮಕ್ಕಳಲ್ಲಿ ಆರು ಮಂದಿಗೆ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆಯಾಗಿಲ್ಲ. ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿಲ್ಲ ಎಂದು ರಾಮ್‌ ಆಸರೆ ಅವರ ಅಳಿಯ ದೂರಿದ್ದಾರೆ ಎಂದು ವರದಿಯಾಗಿದೆ.

Leave A Reply