Pakistan on Ram Mandir in United Nations: ರಾಮಮಂದಿರ ಪ್ರಾದೇಶಿಕ ಶಾಂತಿಗೆ ಬೆದರಿಕೆ; ಪಾಕಿಸ್ತಾನದ ಹೊಸ ವರಸೆ!!
Pakistan on Ram Mandir in United Nations: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಂತರ ಇದೀಗ ಬನಾರಸ್‌ನ ಜ್ಞಾನವ್ಯಾಪಿ ಮಸೀದಿ ಮತ್ತು ಮಥುರಾದ ಶಾಹಿ ಈದ್ಗಾ ವಿಚಾರವೂ ಇದೀಗ ಮುನ್ನಲೆಗೆ ಬಂದಿದೆ. ಜ್ಞಾನವ್ಯಾಪಿ ಮಸೀದಿ ಕುರಿತು ಗುರುವಾರ ಬಿಡುಗಡೆ ಮಾಡಿದ ಭಾರತೀಯ ಪುರಾತತ್ವ ಇಲಾಖೆಯ ವರದಿಯಲ್ಲಿ ದೇವಾಲಯದ ಕಂಬಗಳ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹೀಗಿರುವಾಗ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ತಲ್ಲಣ ಉಂಟಾಗಿದೆ.
ಪಾಕಿಸ್ತಾನದ ಡಾನ್ ನ್ಯೂಸ್‌ನ ಸುದ್ದಿ ಪ್ರಕಾರ, ಪಾಕಿಸ್ತಾನ ಸರ್ಕಾರವು ಈಗ ಈ ವಿಷಯವನ್ನು ವಿಶ್ವಸಂಸ್ಥೆಯ (ಯುಎನ್) ಬಳಿ ಎತ್ತಿದೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ್ ಅವರು ವಿಶ್ವಸಂಸ್ಥೆಯ ಕಾರ್ಯದರ್ಶಿಗೆ ಪತ್ರ ಬರೆಯುವ ಮೂಲಕ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಸ್ಥಿತಿ ಏನೆಂದು ಎಲ್ಲರಿಗೂ ತಿಳಿದಿದೆ. ಇಷ್ಟೆಲ್ಲಾ ಆದರೂ ಪಾಕಿಸ್ತಾನ ಇತರ ದೇಶಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದರಿಂದ ಹಿಂದೆ ಸರಿಯುವುದಿಲ್ಲ. ಪಾಕಿಸ್ತಾನವು ತನ್ನ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಬದಲು, ಇತರ ದೇಶಗಳಲ್ಲಿ ಭಯೋತ್ಪಾದನೆಯನ್ನು ಹರಡುವುದರತ್ತ ಹೆಚ್ಚು ಗಮನಹರಿಸುತ್ತಿದೆ.
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಖಾಯಂ ಸದಸ್ಯ ಮುನೀರ್ ಅಕ್ರಂ ಅವರು ವಿಶ್ವಸಂಸ್ಥೆಯ ಅಲಯನ್ಸ್‌ನ ಅಧೀನ-ಕಾರ್ಯದರ್ಶಿ-ಜನರಲ್‌ಗೆ ಬರೆದ ಪತ್ರದಲ್ಲಿ, ‘ನಾನು ನನ್ನ ಪತ್ರದಲ್ಲಿ ‘ರಾಮ ಮಂದಿರ ಉದ್ಘಾಟನೆಯನ್ನು ಪಾಕಿಸ್ತಾನ ಕಟುವಾಗಿ ಖಂಡಿಸುತ್ತದೆ. ಮಂದಿರ ನಿರ್ಮಾಣ ಅದರ ಲೋಕಾರ್ಪಣೆ ಸೌಹಾರ್ದತೆ ಹಾಗೂ ಶಾಂತಿಗೆ ಮಾರಕವಾಗಿದೆ. ಭಾರತದಲ್ಲಿರುವ ಧಾರ್ಮಿಕ ಸ್ಥಳಗಳ ರಕ್ಷಣಗೆ ಕೂಡಲೇ ವಿಶ್ವಸಂಸ್ಥೆ ಹಸ್ತಕ್ಷೇಪ ಮಾಡಬೇಕು” ಎಂದು ಒತ್ತಾಯ ಮಾಡಿದ್ದಾರೆ.
ಧ್ವಂಸಗೊಂಡ ಬಾಬರಿ ಮಸೀದಿಯು ಹಿಂದೂ ಬಹುಸಂಖ್ಯಾತತೆಯ ಗೊಂದಲದ ಉದಾಹರಣೆಯಾಗಿದೆ. ಈ ಪ್ರವೃತ್ತಿಯು ಭಾರತೀಯ ಮುಸ್ಲಿಮರ ಶಾಂತಿ ಮತ್ತು ಸಾಮರಸ್ಯಕ್ಕೆ ಅವರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಯೋಗಕ್ಷೇಮಕ್ಕೆ ಗಮನಾರ್ಹ ಬೆದರಿಕೆಯಾಗಿದೆ ಎಂದು ಬರೆದಿದ್ದಾರೆ.
In a letter to Under Secretary-General for the United Nations Alliance of Civilizations, I have drawn his attention to the threats of desecration aimed at Mosques & other holy sites and sought his intervention to protect & safeguard the Islamic heritage & worship places in India.
— Munir Akram, PR of Pakistan to the UN (@PakistanPR_UN) January 24, 2024