B S Yadiyurappa: ಬಿ ಎಲ್ ಸಂತೋಷ್’ಗೆ ಬಿಗ್ ಶಾಕ್ ಕೊಟ್ಟ ಯಡಿಯೂರಪ್ಪ !!
B S Yadiyurappa: ಬಿ.ಎಲ್ ಸಂತೋಷ್ ಎಂಬುದು ಬಿಜೆಪಿ(BJP) ಪಾಳಯದಲ್ಲಿ ಕೇಳಿ ಬರುವ ಭಾರೀ ದೊಡ್ಡ ಪ್ರಭಾವಿ ವ್ಯಕ್ತಿ ಹೆಸರು. ಸಂಗದ ಹಿನ್ನೆಲೆಯಲ್ಲಿ ಬಂದ ಕ ನಾಯಕನಿಗೆ ಕೇಂದ್ರದ ನಾಯಕರೆಲ್ಲರೂ ಆತ್ಮೀಯರು. ರಾಜಕೀಯ ಲೆಕ್ಕಾಚಾರ ಹಾಕುವುದರಲ್ಲಿ ಇವರು ಚಾಣಕ್ಯ. ಅಂತೆಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 65 ಸ್ಥಾನ ಗೆದ್ದು, ಹೀನಾಯವಾಗಿ ಸೋಲುವಲ್ಲಿ ಇವರ ಪಾತ್ರ ತುಂಬಾ ಇತ್ತು. ಇತ್ತೀಚಿನ ದಿನಗಳಲ್ಲಿ ಯಾಕೋ ಕೊಂಚ ಸೈಲೆಂಟ್ ಆದದಂತೆ ತೋರುತ್ತದೆ. ಆದರೆ ಏನೇ ಇರಲಿ ಇದೀಗ ರಾಜ್ಯ ಬಿಜೆಪಿಯ ರಾಜಹುಲಿ ಯಡಿಯೂರಪ್ಪರು(Yadiyurappa)ಇವರಿಗೆ ಬಿಗ್ ಶಾಕ್ ನೀಡಿದ್ದಾರೆ.
ನಿನ್ನೆ ತಾನೆ ಜಗದೀಶ್ ಶೆಟ್ಟರ್(Jagadish Shetter) ಮತ್ತೆ ಬಿಜೆಪಿಗೆ ಮರಳುವ ಮೂಲಕ ಸಂಚಲನ ಮೂಡಿಸಿದ್ದಾರೆ. ಬಂಡಾಯವೆದ್ದು ಬಿಜೆಪಿ ತೊರೆದಿದ್ದ ಶೆಟ್ಟರ್, ಜೀವನದಲ್ಲೇ ಬಿಜೆಪಿಗೆ ಮರಳಲ್ಲ ಎಂದು ಹೇಳಿದ್ದರು. ಜಗದೀಶ್ ಶೆಟ್ಟರ್ ಬಿಎಸ್ ಯಡಿಯೂರಪ್ಪ ಮತ್ತು ಪುತ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಅಚ್ಚರಿ ಅಂದರೆ ತೆರೆಮರೆಯಲ್ಲಿ ನಿಂತು ರಾಜ್ಯದ ಬಿಜೆಪಿಯ ಸೂತ್ರಧಾರನಂತೆ ಕಾರ್ಯನಿರ್ವಹಿಸುವ ಬಿಲ್ ಸಂತೋಷ್ ಅವರಿಗೆ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಕುರಿತು ಯಾವುದೇ ಸುಳಿವು ಇರಲಿಲ್ಲ!!
ಹೌದು, ಇದು ಅಚ್ಚರಿ ಏನಿಸಿದರೂ ಸತ್ಯವಾದುದು. ಶೆಟ್ಟರ್ ಬಿಜೆಪಿಗೆ ಸೇರುವ ಬಗ್ಗೆ ಸಂತೋಷ್(B L Santosh)ಗೆ ಮಾತ್ರವಲ್ಲ ಪ್ರಲ್ಹಾದ್ ಜೋಶಿಗೂ ಗೊತ್ತಿರಲಿಲ್ಲವಂತೆ. ಈ ಮೂಲಕ ರಾಜ್ಯ ಬಿಜೆಪಿಯಲ್ಲಿ ಆರೆಸ್ಸೆಸ್ಗಿಂತ ಲಿಂಗಾಯತ ನಾಯಕರ ಪ್ರಾಬಲ್ಯ ಹೆಚ್ಚಿದೆ ಎನ್ನುವುದು ಮತ್ತೆ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸಂತೋಷ್’ಗೆ ಯಡಿಯೂರಪ್ಪರು ಬಿಗ್ ಶಾಕ್ ನೀಡಿದ್ದಾರೆ.
ಅಂದಹಾಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಚುನಾವಣೆಗೆ ಮುನ್ನ ಬಿಎಸ್ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದ ಬಿಜೆಪಿಗೆ ಹಿನ್ನಡೆಯಾಗಿತ್ತು. ಚುನಾವಣೆ ಸೋಲಿನ ಬಳಿಕ ಬಿಎಸ್ವೈ ಪುತ್ರ ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದು, ಲೋಕಸಭಾ ಚುನಾವಣೆ ತಯಾರಿಯಲ್ಲಿದ್ದಾರೆ. ಈ ನಡುವೆಯೇ ಬಿಎಸ್ವೈ ತೆರೆಮರೆಯಲ್ಲಿ ದಾಳ ಉರುಳಿಸಿದ್ದು ಶೆಟ್ಟರ್ ಅವರನ್ನು ಮತ್ತೆ ಬಿಜೆಪಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಬಿಎಸ್ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಅವರು ಪ್ರಮುಖರಾಗಿದ್ದಾರೆ. ಇಬ್ಬರೂ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. ಇದೀಗ ಇಬ್ಬರೂ ಮತ್ತೆ ಒಂದಾಗಿರುವುದರಿಂದ ಬಿಜೆಪಿಯಲ್ಲಿ ಲಿಂಗಾಯತ ಪ್ರಾಬಲ್ಯವೇ ಹೆಚ್ಚಾಗಿದ್ದು, ಯಡಿಯೂರಪ್ಪರಿಗೆ ಮೊದಲ ಮನ್ನಣೆ ದೊರೆಯುತ್ತಿದೆ.