Toilet: ಅತ್ತೆ ಮನೆಯಲ್ಲಿ ಟಾಯ್ಲೆಟ್ ಇಲ್ಲ, ಎರಡು ವರ್ಷ ಕಾದ ಅಳಿಯನಿಂದ ವಿಚ್ಛೇದನಕ್ಕೆ ನಿರ್ಧಾರ!!!

Share the Article

Toilet: ನಳಂದ ಜಿಲ್ಲೆಯಲ್ಲಿ ಯುವಕನೋರ್ವ ತನ್ನ ಹೆಂಡತಿ ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣ 2 ವರ್ಷಗಳಿಂದ ಅತ್ತೆಯ ಮನೆಗೆ ಹೋಗಿಲ್ಲ. ಇದೀಗ ಈ ವಿಷಯ ವಿಚ್ಛೇದನದ ಹಂತಕ್ಕೆ ತಲುಪಿದೆ. ತನ್ನ ಅತ್ತೆಯ ಮನೆಯನ್ನು ಯುವಕ ತೊರೆದಿದ್ದಾನೆ. ಏನಿದು ಘಟನೆ ಬನ್ನಿ ತಿಳಿಯೋಣ.

ವಿಷಯ ನಳಂದಾ ಜಿಲ್ಲೆಯ ತೆಲ್ಮಾರ್ ಗ್ರಾಮದದ್ದು. ಪಾಟ್ನಾ ನಗರದಲ್ಲಿ ವಾಸಿಸುವ ವಿಕ್ಕಿ ಎಂಬ ಹುಡುಗ ತನ್ನ ಮದುವೆಯ ಸಮಯದಲ್ಲಿ ಅತ್ತೆ ಮನೆಯಲ್ಲಿ ಶೌಚಾಲಯವನ್ನು ನಿರ್ಮಿಸಲು ಕೇಳಿದಾಗ ಹುಡುಗಿಯ ತಂದೆ ಒಪ್ಪಿದ್ದರು. ಆದರೆ ಆರ್ಥಿಕ ಸ್ಥಿತಿಯ ತೊಂದರೆಯಿಂದಾಗಿ ಅವರು ಅದನ್ನು ಮಾಡಿಲ್ಲ. ಇದರಿಂದ ಅಳಿಯ ಮದುವೆಯಾಗಿ ಎರಡು ವರ್ಷವಾದರೂ ಒಮ್ಮೆಯೂ ಅತ್ತೆ ಮನೆಗೆ ಹೋಗಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿದಿನ ಗಂಡ ಹೆಂಡತಿ ನಡುವೆ ವಾಗ್ವಾದ ನಡೆಯುತ್ತಾ ಇರುತ್ತದೆ. ಈಗ ಇಬ್ಬರ ನಡುವೆ ಮನಸ್ತಾಪ ಹೆಚ್ಚಾಗಿದ್ದು, ಹುಡುಗ ಹುಡುಗಿಗೆ ವಿಚ್ಛೇದನದ ಪ್ರಸ್ತಾಪವನ್ನೂ ಮಾಡಿದ್ದಾನಂತೆ.

ಶೌಚಾಲಯ ಕಟ್ಟಿಸಿಕೊಳ್ಳಲು ನಮ್ಮ ಬಳಿ ಹಣವಿಲ್ಲ, ಸರಕಾರದ ಯೋಜನೆಯ ಲಾಭವೂ ಸಿಗುತ್ತಿಲ್ಲ ಎನ್ನುತ್ತಾರೆ ಬಾಲಕಿಯ ತಾಯಿ ಸರಗುಣದೇವಿ. ಆದರೆ ಅಳಿಯ (ವಿಕ್ಕಿ) ಇದನ್ನು ಅರ್ಥಮಾಡಿಕೊಳ್ಳಲು ಸಿದ್ಧರಿಲ್ಲ. ಶೌಚಾಲಯ ಕಟ್ಟಿಸಿದ ಮಾತ್ರಕ್ಕೆ ಮಗಳ ಮನೆ ಪ್ರವೇಶ ಮಾಡುತ್ತೇನೆ. ಇಲ್ಲವಾದಲ್ಲಿ ವಿಚ್ಛೇದನಕ್ಕೆ ಸಿದ್ಧ ಎಂದು ಹೇಳುತ್ತಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮದುವೆ ನಡೆಸಿಕೊಟ್ಟ ಮುಖಂಡರಿಗೆ ದೂರು ನೀಡಿದಾಗ ಅವರು ಹುಡುಗಿ ಮನೆಯವರಿಗೆ ಥಳಿಸಿದ್ದಾರೆ ಎಂದು ವರದಿಯಾಗಿದೆ.

Leave A Reply