Bangalore: ಮಟ ಮಟ ಮಧ್ಯಾಹ್ನವೇ ಕಾರೊಳಗೆ ಸಂಭೋಗದಲ್ಲಿ ನಿರತವಾಗಿದ ಜೋಡಿ! ಪ್ರಶ್ನಿಸಿದ ಪೊಲೀಸ್‌, ಮುಂದೇನಾಯ್ತು ಗೊತ್ತೇ?

Share the Article

Bangalore : ಜೋಡಿಯೊಂದು ಮಧ್ಯಾಹ್ನದ ಸಮಯದಲ್ಲಿ ಕಾರಿನಲ್ಲಿ ಬೆತ್ತಲಾಗಿ ತಮ್ಮ ಕಾಮತೃಷೆ ತೀರಿಸಿಕೊಂಡ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

ಈ ಸಮಯದಲ್ಲಿ ಬುದ್ಧಿ ಹೇಳಲೆಂದು ಹೋದ ಪೊಲೀಸರ ಮೇಲೆಯೇ ಕಾರು ಚಲಾಯಿಸಿಕೊಂಡು ಜೋಡಿ ಪರಾರಿಯಾಗಿದೆ. ಈ ಘಟನೆಯಲ್ಲಿ ಸಬ್‌ಇನ್ಸ್‌ಪೆಕ್ಟರ್‌ ಮಹೇಶ್‌ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಂಗಳೂರಿನ ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯ ಉದ್ಯಾನವೊಂದರ ಬಳಿ ಕಿಯೋ ಸೆಲಾಟೋಸ್‌ ಕಾರಿನಲ್ಲಿ ಬಂದಿದ್ದ ಜೋಡಿಯೊಂದು ಅಲ್ಲೇ ತಮ್ಮ ಸಂಭೋಗದಲ್ಲಿ ನಿರತವಾಗಿತ್ತು. ಪಾರ್ಕ್‌ನಲ್ಲಿ ಅನೇಕ ಮಂದಿ ಇದ್ದರೂ ಅವರಿಗೆಲ್ಲ ಇದು ಕಾಣಿಸುತ್ತದೆ ಎಂಬುವುದು ಗೊತ್ತಿದ್ದರೂ ಅದನ್ನು ಲೆಕ್ಕಿಸದೆ ಸರದಲ್ಲಿ ಈ ಜೋಡಿ ತಲ್ಲೀನರಾಗಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ಕರ್ತವ್ಯದಲ್ಲಿದ್ದ ಸಬ್‌ಇನ್ಸ್‌ಪೆಕ್ಟರ್‌ ಮಹೇಶ್‌ ಈ ಜೋಡಿಯ ಕ್ರಿಯೆಯನ್ನು ಗಮನಿಸಿದ್ದು, ಬುದ್ಧಿ ಹೇಳಲೆಂದು ಕಾರಿನ ಬಳಿ ಬಂದಿದ್ದಾರೆ.

ಕಾರಿನ ನಂಬರ್‌ ಪ್ಲೇಟ್‌ ಗಮನಿಸಿದ್ದಾರೆ. ಈ ಸಮಯದಲ್ಲಿ ಜೋಡಿ ಗಮನಿಸಿ, ಯುವಕ ಏಕಾಏಕಿ ಕಾರು ಚಲಾಯಿಸಿದ್ದಾನೆ. ಕಾರು ಚಲಿಸಲು ಪ್ರಾರಂಭ ಆದದ್ದನ್ನು ನೋಡಿ ಸಬ್‌ಇನ್ಸ್‌ಪೆಕ್ಟರ್‌ ಮಹೇಶ್‌ ಅವರು ಬಾನೆಟ್‌ ಮೇಲೆ ಬಿದ್ದಿದ್ದಾರೆ. ಕಾರಿನ ಬಾನೆಟ್‌ ಹಿಡಿದುಕೊಂಡಿದ್ದರೂ ಯುವಕ ಕಾರು ಚಲಾಯಿಸಿದ್ದಾನೆ. ಕಾರನ್ನು ರಿವರ್ಸ್‌ ತೆಗೆದು ಮುಂದಕ್ಕೆ ಚಲಾಯಿಸಿದ್ದಾನೆ. ಕೂಡಲೇ ಕೆಳಗೆ ಬಿದ್ದ ಸಬ್‌ಇನ್ಸ್‌ಪೆಕ್ಟರ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಜ್ಞಾನ ಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply