Madhyaprdesh: ಈ ಹಳ್ಳಿಯಲ್ಲಿ ಬಾಡಿಗೆ ಸಿಗುತ್ತಾರೆ ಹೆಂಡತಿಯರು!! ದಿನವಲ್ಲ, ತಿಂಗಳಲ್ಲ 1 ವರ್ಷ ಜೊತೆಗಿರಬಹುದು !!
Madhyapradesh: ಮನೆಗಳನ್ನು ಬಾಡಿಗೆ ಪಡೆಯುವುದು ಎಲ್ಲರಿಗೂ ಗೊತ್ತು. ಅಲ್ಲದೆ ಸೈಕಲ್, ಬೈಕು, ಬಸ್ಸು, ಕಾರು, ಜೀಪು ಹೀಗೆ ಇತರ ಯಾವುದೇ ವಾಹನಗಳನ್ನು ಕೂಡ ಬಾಡಿಗೆ ಪಡೆಯುವುದನ್ನು ನೀವು ಕೇಳಿದ್ದೀರಿ. ಆದರೆ ಹೆಂಡತಿಯೂ ಬಾಡಿಗೆಗೆ( surrogate wife)ಸಿಗುತ್ತಾಳೆ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಯಾಕೆಂದರೆ ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.
ಹೌದು, ಭಾರತದಲ್ಲಿ ಇಂತಹದ್ದೊಂದು ಪದ್ಧತಿ ಇನ್ನೂ ಜೀವಂತವಾಗಿ ಇರುವ ಒಂದು ಸ್ಥಳವಿದೆ. ಅದುವೇ ಮಧ್ಯಪ್ರದೇಶದ(Madhyapradesh) ಶಿವಪುರಿ. ಈ ಜಿಲ್ಲೆಯ ಒಳನಾಡಿನ ಹಳ್ಳಿಗಳಲ್ಲಿ ಈ ವಿಚಿತ್ರ ಪದ್ಧತಿ ಈಗಲೂ ಇದೆ. ‘ಧಾಡಿಚಾ ಪ್ರಾಥ’ ಎಂದು ಕರೆಯುವ ಈ ವ್ಯವಸ್ಥೆಯಲ್ಲಿ ಹೆಂಡತಿಯರನ್ನು ಒಂದು ತಿಂಗಳಿಂದ ಒಂದು ವರ್ಷದ ಅವಧಿಗೆ ಬಾಡಿಗೆಗೆ ನೀಡಲಾಗುತ್ತದೆ. ಇದಕ್ಕಾಗಿ ಮಾರುಕಟ್ಟೆಯನ್ನು ಸಹ ಸಿದ್ಧಪಡಿಸಲಾಗುತ್ತದೆ.
ಬಾಡಿಗೆ ಪಡೆಯುವುದು ಹೇಗೆ?
ಮಾರುಕಟ್ಟೆಗೆ ಹೋಗಿ ವ್ಯವಹಾರ ಕುದುರಿದ ನಂತರ, ಖರೀದಿದಾರ ಮತ್ತು ಮಹಿಳೆಯ ನಡುವೆ ಒಂದು ಒಪ್ಪಂದ ನಡೆಯುತ್ತದೆ. 10ರಿಂದ 100 ರೂ. ಸ್ಟಾಂಪ್ ಪೇಪರ್ನಲ್ಲಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಸ್ಟಾಂಪ್ ಪೇಪರ್ ನೀಡಿ ಖರೀದಿಸಿದ ಮಹಿಳೆಯರನ್ನು ಮರುಮಾರಾಟ ಮಾಡಲು ಈ ವ್ಯವಸ್ಥೆಯು ಅವಕಾಶ ನೀಡುತ್ತದೆ. ಒಪ್ಪಂದದ ಅವಧಿಯ ಕೊನೆಯಲ್ಲಿ ಮಹಿಳೆಯರ ಮಾಲೀಕತ್ವವನ್ನು ಹೆಚ್ಚಿನ ಮೊತ್ತಕ್ಕೆ ವರ್ಗಾಯಿಸಬಹುದು ಮತ್ತು ಒಪ್ಪಂದವನ್ನು ನವೀಕರಿಸಬಹುದು. ಮಹಿಳೆ ಬಯಸಿದಲ್ಲಿ ಯಾವುದೇ ಸಮಯದಲ್ಲಿ ಒಪ್ಪಂದದಿಂದ ಹಿಂದೆ ಸರಿಯಬಹುದು ಎಂದು ಮಾತುಕತೆ ಮಾಡ, ಒಪ್ಪಂದ ಮಾಡಲಾಗುತ್ತದೆ.
ಅಲ್ಲದೆ ಇದಕ್ಕೆ ಮಹಿಳೆ ಅಫಿಡವಿಟ್ ನೀಡಬೇಕು. ಅಲ್ಲದೆ, ಮಹಿಳೆ ತನ್ನ ಮಾಜಿ ಪತಿಗೆ ಪೂರ್ವನಿರ್ಧರಿತ ಮೊತ್ತವನ್ನು ಹಿಂದಿರುಗಿಸಬೇಕು. ಮಹಿಳೆ ಇನ್ನೊಬ್ಬ ಪುರುಷನಿಂದ ಹೆಚ್ಚು ಹಣವನ್ನು ಸ್ವೀಕರಿಸುವುದನ್ನು ಸಹ ಒಪ್ಪಂದದ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಬಾಡಿಗೆ ಪಡೆದ ಗಂಡಸು ಮಹಿಳೆಯೊಂದಿಗೆ ಮುಂದುವರಿಯಲು ಬಯಸಿದರೆ ಹೆಚ್ಚು ಮೊತ್ತ ನೀಡಬೇಕು.
ಇಷ್ಟೆಲ್ಲಾ ಮುಂದುವರಿದ ನಮ್ಮ ದೇಶದಲ್ಲಿ ಇಂತಹ ಒಂದು ಅನಿಷ್ಟ ಪದ್ಧತಿ ರೂಢಿಯಲ್ಲಿರುವುದು ದುರದೃಷ್ಟಕರ. ಈ ಆಚರಣೆಗಳ ಬಗ್ಗೆ ಪೊಲೀಸರಿಗೆ ಗೊತ್ತಿದ್ದರೂ ದೂರುದಾರರು ಇಲ್ಲದ ಕಾರಣ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಈ ಪದ್ಧತಿಗೆ ಹೆಚ್ಚು ಬಲಿಯಾಗುತ್ತಿರುವುದು ಮಾತ್ರ ಬಡ ಮನೆಯ ಹೆಣ್ಣುಮಕ್ಕಳು ಎಂಬುದು ವಿಷಾದನೀಯ.