Transgender Issue: ಬಸ್‌ ಕಂಡಕ್ಟರ್‌ ಜೊತೆ ಸಖತ್‌ ಕಿರಿಕ್‌; ಬಟ್ಟೆ ಬಿಚ್ಚಿ ನಡುರಸ್ತೆಯಲ್ಲಿಯೇ ಬೆತ್ತಲಾದ ಮಂಗಳಮುಖಿ!!

Share the Article

Chikkaballapura News: ಬಸ್‌ ಕಂಡಕ್ಟರ್‌ ಜೊತೆ ಕಿರಿಕ್‌ ಮಾಡಿಕೊಂಡ ಮಂಗಳಮುಖಿಯೊಬ್ಬಳು (Transgender issue) ನಡುರಸ್ತೆಯಲ್ಲಿಯೇ ಬಟ್ಟೆ ಬಿಚ್ಚಿ ತನ್ನ ಆಕ್ರೋಶವನ್ನು ತೋರಿಸಿದ ಘಟನೆಯೊಂದು ಚಿಕ್ಕಬಳ್ಳಾಪುರದ ನಗರದ ಶಿಡ್ಲಘಟ್ಟ ವೃತ್ತದಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ಸ್ಮಿತಾ ಎಂಬ ಮಂಗಳಮುಖಿಯೇ ಈ ರೀತಿ ವರ್ತಿಸಿದವಳು.

ಮಂಗಳವಾರ ಸ್ಮಿತಾ ಬಸ್‌ ಹತ್ತಿದ್ದು, ಕಂಡಕ್ಟರ್‌ ಜೊತೆ ಜಗಳ ಶುರು ಮಾಡಿಕೊಂಡಿದ್ದಾಳೆ. ಲಗೇಜ್‌ ವಿಚಾರಕ್ಕೆ ಇವರಿಬ್ಬರ ನಡುವೆ ಗಲಾಟೆ ಶುರುವಾಗಿದೆ. ಈ ಗಲಾಟೆಯ ಮಧ್ಯೆ ಅಸಭ್ಯವಾಗಿ ವರ್ತಿಸಲು ಪ್ರಾರಂಭ ಮಾಡಿದ ಈಕೆ ಕಂಡಕ್ಟರ್‌ಗೆ ಕಪಾಳ ಮೋಕ್ಷ ಮಾಡಿದ್ದಾಳೆ.

ಇದನ್ನೂ ಓದಿ: Bengaluru: ಬೆಂಗಳೂರಲ್ಲಿ ರಾಮನ ಕಟೌಟ್ ನಿಲ್ಲಿಸಿದ ಕಾಂಗ್ರೆಸ್ ಶಾಸಕರು- ‘ಕೈ’ ಪಾಳಯದಲ್ಲಿ ಭಾರೀ ಸಂಚಲನ !!

ಇದನ್ನು ಕಂಡ ಇತರ ಪ್ರಯಾಣಿಕರ ಮಧ್ಯೆ ಬಂದಿದ್ದು, ಅವರ ಜೊತೆ ಕೂಡಾ ಈಕೆ ಅಸಭ್ಯವಾಗಿ ವರ್ತಿಸಿದ್ದಾಳೆ. ನಂತರ ಈಕೆಯ ಉಪಟಳ ಹೆಚ್ಚಾಗಿದ್ದು ಆಕೆಯನ್ನು ಪ್ರಯಾಣಿಕರೆಲ್ಲ ಸೇರಿ ಶಿಡ್ಲಘಟ್ಟ ವೃತ್ತದಲ್ಲಿ ಇಳಿಸಿದ್ದಾರೆ. ಅನಂತರ ಈಕೆ ಕೋಪದಿಂದ ಕುದಿದ್ದು, ಕೂಡಲೇ ತಾನು ಉಟ್ಟಿದ್ದ ಚೂಡಿದಾರ್‌ನ ಟಾಪನ್ನು ಬಿದ್ದಿದ್ದಾಳೆ. ತನ್ನ ನಗ್ನ ದೇಹ ಪ್ರದರ್ಶನ ಮಾಡಿದ ಈಕೆ ಕಂಡಕ್ಟರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಈ ಗಲಾಟೆಯ ಸಂದರ್ಭ ಜನ ಸೇರಿರುವುದನ್ನು ಅಲ್ಲೇ ಇದ್ದ ಪೊಲೀಸರು ಗಮನಿಸಿದ್ದು, ಕೂಡಲೇ ಧಾವಿಸಿದ್ದು, ಆಕೆಗೆ ಬಟ್ಟೆ ಧರಿಸುವಂತೆ ಒತ್ತಾಯ ಮಾಡಿದ್ದಾರೆ. ನಂತರ ಆಕೆ ತನ್ನ ಶಾಲನ್ನು ಹೊದ್ದುಕೊಂಡಿದ್ದಾಳೆ. ನಂತರ ಪೊಲೀಸರು ಆಕೆಯನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ.

Leave A Reply