Panjab: ಬಳೆ ಹಾಕಿ, ಕುಂಕುಮ, ಲಿಪ್‌ಸ್ಟಿಕ್ ಹಚ್ಚಿ ಪ್ರಿಯತಮೆಯಂತೆ ವೇಷ ಧರಿಸಿ ಆಕೆಯ ಎಕ್ಸಾಮ್ ಬರೆಯಲು ಹೋದ ಬಾಯ್ ಫ್ರೆಂಡ್ – ಸಿಕ್ಕಿಬಿದ್ದದ್ದೇ ರೋಚಕ !!

Share the Article

Panjab: ಪರೀಕ್ಷಾ ಕೇಂದ್ರದಲ್ಲಿ ಯುವಕನೊಬ್ಬ ತನ್ನ ಪ್ರಿಯತಮೆಯಂತೆ ಡ್ರೆಸ್ ಮಾಡಿಕೊಂಡು, ಆಕೆಯಂತೆ ವೇಷ ಧರಿಸಿ ಎಕ್ಸಾಂ ಬರೆಯಲು ಹೋಗಿರುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಪರೀಕ್ಷಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾನೆ.

ಹೌದು, ಪಂಜಾಬ್‌ನ(Panjab) ಫರೀದ್‌ಕೋಟ್‌’ನ ಡಿಎವಿ ಪಬ್ಲಿಕ್ ಸ್ಕೂಲ್‌ನಲ್ಲಿ ಬಾಬಾ ಫರೀದ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಬಹುಪಯೋಗಿ ಆರೋಗ್ಯ ಕಾರ್ಯಕರ್ತರ ಪರೀಕ್ಷೆಯನ್ನು ಜನವರಿ 7 ರಂದು ನಡೆಸಲಾಗಿತ್ತು. ಈ ವೇಳೆ, ಫಾಜಿಲ್ಕಾದ ಅಂಗ್ರೇಜ್ ಸಿಂಗ್ ತನ್ನ ಗೆಳತಿ ಪರಮ್‌ಜಿತ್ ಕೌರ್ ವೇಷ ಧರಿಸಿ ಪರೀಕ್ಷೆ ಬರೆಯಲು ನಿರ್ಧರಿಸಿದ್ದಾನೆ. ಇದಕ್ಕಾಗಿ ಕೆಂಪು ಬಳೆಗಳು, ಬಿಂದಿ, ಲಿಪ್‌ಸ್ಟಿಕ್ ಹಾಕಿಕೊಂಡು ಅಲಂಕಾರ ಮಾಡಿಕೊಂಡಿದ್ದ. ಆದರೂ, ವಿಶ್ವವಿದ್ಯಾಲಯದ ಅಧಿಕಾರಿಗಳು ಆತನನ್ನು ಹಿಡಿದು ಪೊಲೀಸರಿಗೆ ದೂರು ನೀಡಿದ್ದಾರೆ.

https://twitter.com/Cow__Momma/status/1746520142312284359?t=mg73DDwu74TP7T-HjOeSPA&s=19

ಅಂಗ್ರೇಜ್ ಸಿಂಗ್ ಸಿಕ್ಕಿಬಿದ್ದದ್ದೇಗ?
ನಕಲಿ ವೋಟರ್‌ ಐಡಿ ಕಾರ್ಡ್‌ ಮತ್ತು ಆಧಾರ್‌ ಕಾರ್ಡ್‌ ಬಳಸಿಕೊಂಡು ತಾನು ಪರಮ್ಜಿತ್‌ ಕೌರ್‌ ಅಂತ ಅಂಗ್ರೇಜ್ ಸಿಂಗ್ ಹೇಳಿಕೊಂಡಿದ್ದ. ಆದರೆ, ಬಯೋಮೆಟ್ರಿಕ್ ಸಾಧನದಲ್ಲಿ ನಿಜವಾದ ಅಭ್ಯರ್ಥಿಯ ಫಿಂಗರ್‌ಪ್ರಿಂಟ್‌ಗಳನ್ನು ತೆಗೆದುಕೊಳ್ಳುವಾಗ, ಅದು ಮ್ಯಾಚ್ ಆಗಲಿಲ್ಲ. ಆಗ ವಿವಿ ಸಿಬ್ಬಂದಿಗೆ ಅನುಮಾನ ಬಂದು ಆತನನ್ನು ವಿಚಾರಣೆ ನಡೆಸಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply