Chikkamagaluru: ಕ್ರಿಕೆಟ್ ಆಡಿ ಬಂದು ಕೂತ ಪಶು ವೈದ್ಯ ಹೃದಯಾಘಾತದಿಂದ ಸಾವು !!

Share the Article

Chikkamagaluru: ಈಗಂತೂ ಹೃದಯಾಘಾತ ಯಾರಿಗೆ ಸಂಭವಿಸುತ್ತದೆ ಎಂದು ಹೇಳಲಾಗದು. ನಡೆದರೆ, ಆಟವಾಡಿದರೆ, ಓಡಿದರೆ, ಮಾತನಾಡಿದರೆ, ನಗಾಡಿದರೂ ಹಾರ್ಟ್ ಅಟ್ಯಾಕ್ ಆಗುತ್ತಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಅಂತೆಯೇ ಪಶು ವೈದ್ಯರೊಬ್ಬರು ಕ್ರಿಕೆಟ್ ಆಡಿ ಬಂದು ಕೂತ ತಕ್ಷಣ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಹೌದು, ಕೆಲ ದಿನಗಳ ಹಿಂದಷ್ಟೇ ನೊಯ್ಡಾದಲ್ಲಿ ಕ್ರಿಕೆಟ್‌ ಆಡುತ್ತಿದ್ದ ಟೆಕ್ಕಿಯೊಬ್ಬ ಆಟದ ನಡುವೆಯೇ ಕುಸಿದುಬಿದ್ದು ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಳಕಿಗೆ ಬಂದಿತ್ತು. ಇದೀಗ ಕ್ರಿಕೆಟ್ ಪಂದ್ಯ ಆಡಿ ಕುಳಿತಿದ್ದ ಪಶು ವೈದ್ಯ ತೀವ್ರ ಹೃದಯಾಘಾತ(Hart attack)ದಿಂದ ಮೃತಪಟ್ಟ ಘಟನೆ ಚಿಕ್ಕಮಗಳೂರು(Chikkamagaluru)ನಗರದ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆಯ ಪಶುವೈದ್ಯರಾದ ಶಿವಪ್ಪ ಬಾದಾಮಿ (56) ಎಂದು ಗುರುತಿಸಲಾಗಿದೆ. ಅಂದಹಾಗೆ ಚಿಕ್ಕಮಗಳೂರಿನಲ್ಲಿ ಪಶು ಇಲಾಖೆಯಿಂದ ಕ್ರಿಕೆಟ್ ಟೂರ್ನಮೆಂಟ್‌ ಆಯೋಜನೆ ಮಾಡಲಾಗಿದ್ದು, ನಿನ್ನೆ ಹಾಗೂ ಇಂದು ಎರಡು ದಿನಗಳ ಕಾಲ ನಡೆಯಲಿತ್ತು. ಕೊಡಗು ಕ್ರಿಕೆಟ್ ತಂಡದಲ್ಲಿ ಇಂದು ಒಂದು ಪಂದ್ಯ ಆಟವಾಡಿದ್ದ ಶಿವಪ್ಪ ದಣಿದು ವಿಶ್ರಾಂತಿಗೆ ಕುಳಿತಿದ್ದಾಗ ವೈದ್ಯನಿಗೆ ಹೃದಯಾಘಾತ ಸಂಭವಿಸಿದೆ. ಕುಳಿತಲ್ಲೇ ಕುಸಿದುಬಿದ್ದು ವೈದ್ಯರು ಸಾವನ್ನಪ್ಪಿದ್ದಾರೆ.

Leave A Reply