Hormones: ಸಲಿಂಗಕಾಮಕ್ಕೆ ಇದೂ ಕೂಡ ಕಾರಣವಂತೆ!!

Share the Article

Hormones: ಸಲಿಂಗಕಾಮವು ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಯಲ್ಲಿರುವ ವಿಚಾರಗಳಲ್ಲಿ ಒಂದು. ಒಂದೇ ಲಿಂಗದ ಜನರ ಕಡೆಗೆ ಆಕರ್ಷಣೆ ಮತ್ತು ಪ್ರೀತಿಯನ್ನು ಅನುಭವಿಸುವ ನಡವಳಿಕೆಯನ್ನು ಸಲಿಂಗಕಾಮವೆನ್ನಲಾಗುತ್ತದೆ. ಸಲಿಂಗಕಾಮಿಗಳನ್ನು ಹೆಚ್ಚಿನ ಸಂದರ್ಭಗಳಲ್ಲಿ ಸಮಾಜ ಮತ್ತು ಕುಟುಂಬವು ಸ್ವೀಕರಿಸಲು ಸಿದ್ದರಿರುವುದಿಲ್ಲ. ಈ ರೀತಿ ಒಂದೇ ಲಿಂಗದ ಜನರತ್ತ ಆಕರ್ಷಿತರಾಗಿ ಸಲಿಂಗಿಯಾಗಲು(Homo sexuality)ಅನೇಕ ಕಾರಣಗಳಿರಬಹುದು.

ಜನನದ ಸಮಯದಲ್ಲಿ ಟೆಸ್ಟೋಸ್ಟೆರಾನ್ನಂತಹ ಹಾರ್ಮೋನ್ಗಳನ್ನು( Hormones)ಅಸಹಜವಾಗಿ ಹೆಚ್ಚಾಗಿ ಇಲ್ಲವೇ ಕಡಿಮೆ ಮಟ್ಟದಲ್ಲಿ ಹೊಂದಿರುವ ಶಿಶುಗಳು ಸಲಿಂಗಕಾಮಿ ನಡವಳಿಕೆಯನ್ನು ತೋರುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತದೆ. ಅಂದರೆ, ಹುಡುಗನಿಗೆ ಜನನದ ನಂತರ ಕಡಿಮೆ ಮಟ್ಟದ ಟೆಸ್ಟೋಸ್ಟೆರಾನ್ ಇದ್ದಲ್ಲಿ ಇದರಿಂದ ತೆಳುವಾದ ಧ್ವನಿ, ಹುಡುಗರೊಂದಿಗೆ ಹೆಚ್ಚು ಮಾತನಾಡದೆ ಇರುವ ಗುಣಲಕ್ಷಣಗಳು ಕಂಡುಬರಬಹುದು. ಅದೇ ರೀತಿ, ಹುಡುಗಿಯರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಅಧಿಕವಿದ್ದರೆ ದೇಹವು ಹುಡುಗಿಯರಿಗಿಂತ ಭಾರವಾಗಿರುವ ಅನುಭವ ಉಂಟಾಗಬಹುದು. ಧ್ವನಿಯಲ್ಲಿ ಒರಟುತನ, ಮುಖದ ಮೇಲೆ ಕೂದಲು ಮತ್ತು ಅಂಗಗಳಲ್ಲಿನ ಬದಲಾವಣೆಗಳು ಕಂಡುಬರಬಹುದು.

ಇದನ್ನೂ ಓದಿ: Expired Spices: ಅಡುಗೆ ರುಚಿಸಲಿಲ್ಲ ಎಂದು ಅಮ್ಮನ ಮಸಾಲೆ ಡಬ್ಬಿ ತೆರೆದ ಮಗಳಿಗೆ ಕಾದಿತ್ತು ಶಾಕ್; ಇದರ ಅಸಲಿ ಕಹಾನಿ ಕೇಳಿದರೆ ಬೆಚ್ಚಿ ಬೀಳೋದು ಫಿಕ್ಸ್!!

ಗರ್ಭಾವಸ್ಥೆಯಲ್ಲಿ ಮಗುವಿನ ಮೇಲೆ ಪರಿಣಾಮ ಬೀರುವ ಪ್ರಸವಪೂರ್ವ ಆಂಡೊಜೆನ್ ಮಟ್ಟಗಳು ಸಲಿಂಗಕಾಮಿ ವರ್ತನೆಗೆ ಕಾರಣವಾಗಿರುವ ಸಾಧ್ಯತೆ ಬಗ್ಗೆ ಸಂಶೋಧನೆಗಳು ತಿಳಿಸುತ್ತವೆ. ಇದರ ಜೊತೆಗೆ ಸಲಿಂಗಕಾಮಿ ಜನರಲ್ಲಿ ಮೆದುಳಿನ ಕೆಲವು ಭಾಗಗಳಲ್ಲಿ ರಚನಾತ್ಮಕ ವ್ಯತ್ಯಾಸ ಕೂಡ ಇರುತ್ತವೆ ಎನ್ನಲಾಗಿದೆ. ಕೇವಲ ಹಾರ್ಮೋನ್ ಅಂಶಗಳು ಮಾತ್ರ ಸಲಿಂಗಕಾಮಕ್ಕೆ ಕಾರಣವಾಗಿರಬಹುದು ಎನ್ನಲು ಸಾಧ್ಯವಿಲ್ಲ. ಇದರ ಜೊತೆಗೆ, ವೈಯಕ್ತಿಕ ಅನುಭವ, ಪಾಲನೆ ಮತ್ತು ಸಾಮಾಜಿಕ-ಸಾಂಸ್ಕೃತಿಕ ಅಂಶಗಳೂ ಪ್ರಮುಖ ಪಾತ್ರ ವಹಿಸುತ್ತದೆ.

Leave A Reply