Bigg Boss Kannada: ಕನ್ನಡ ಬಿಗ್‌ಬಾಸ್‌ಗೆ ಮತ್ತೊಂದು ಕಂಟಕ!!! ಮತ್ತೊಂದು ಗಂಭೀರ ಆರೋಪ!

ಬಿಗ್‌ಬಾಸ್‌ ಮುಂದುವರಿಯುತ್ತಾ?

Share the Article

Bigg Boss Kannada: ಕನ್ನಡದ ಮನರಂಜನಾ ಕಾರ್ಯಕ್ರಮ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 (Bigg Boss Kannada)ಇದೀಗ ಫಿನಾಲೆ ಹಂತ ತಲುಪಿದೆ.ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ (Entertainment)ವಿರುದ್ಧ ಇದೀಗ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಕನ್ನಡ ಬಿಗ್‌ಬಾಸ್‌ಗೆ (BIGG BOSS)ಕೊನೆಯ ಕ್ಷಣದಲ್ಲಿ ಸಂಕಷ್ಟ ಎದುರಾಗಿದೆ. ಹೀಗಾಗಿ, ಅಭಿಮಾನಿಗಳಿಗೆ ಶೋ ಮುಂದುವರೆಯುತ್ತಾ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ.

 

ಬೆಂಗಳೂರು ಹೊರವಲಯದಲ್ಲಿ ನಿರ್ಮಾಣ ಮಾಡಿರುವ ಬಿಗ್‌ ಬಾಸ್‌ ಕಟ್ಟಡವನ್ನು ಯಾವ ಅನುಮತಿ ಪಡೆಯದೆ, ಕೃಷಿ ಜಮೀನಿನಲ್ಲಿ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿಯ ಮಾಳಗೊಂಡನಹಳ್ಳಿ ಸರ್ವೇ ನಂಬರ್‌ 128\1ರಲ್ಲಿ 7 ಎಕರೆ 11 ಗುಂಟೆ ಕೃಷಿ ಜಮೀನಿನಲ್ಲಿ ಬಿಗ್‌ಬಾಸ್‌ ಶೋ ನಡೆಸುವ ನಿಟ್ಟಿನಲ್ಲಿ ಪ್ರಾಧಿಕಾರದಿಂದ ಯಾವುದೇ ಅನುಮತಿ ಸ್ವೀಕರಿಸದೆ ಅಕ್ರಮವಾಗಿ ಕಟ್ಟಡ ನಿರ್ಮಿಸಿ ವಾಣಿಜ್ಯ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ದಕ್ಷಿಣ ಉಪವಿಭಾಗದ ಉಪವಿಭಾಗಾಧಿಕಾರಿ ಅವರಿಗೆ ರಾಘವೇಂದ್ರಚಾರ್‌ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

Leave A Reply