Home latest Son Killed: ತನ್ನ 4 ನಾಲ್ಕು ವರ್ಷದ ಮಗುವನ್ನು ಹತ್ಯೆ ಮಾಡಿದ್ದು ಹೇಗೆ? ಯಾಕೆ ಎಂದು...

Son Killed: ತನ್ನ 4 ನಾಲ್ಕು ವರ್ಷದ ಮಗುವನ್ನು ಹತ್ಯೆ ಮಾಡಿದ್ದು ಹೇಗೆ? ಯಾಕೆ ಎಂದು ಪೊಲೀಸ್‌ ವಿಚಾರಣೆಯಲ್ಲಿ ಬಾಯ್ಬಿಟ್ಟ ಹಂತಕಿ ಸುಚನಾ!!!

Son killed

Hindu neighbor gifts plot of land

Hindu neighbour gifts land to Muslim journalist

ಎಐ ಕಂಪನಿಯೊಂದರ ಸಿಇಒ, ತನ್ನಮಗ ಚಿನ್ಮಯ್‌ (4 ವರ್ಷ) ಹತ್ಯೆ ಮಾಡಿದ್ದು, ಘಟನೆಗೆ ಸಂಬಂಧ ಪಟ್ಟಂತೆ ಕೆಲವು ಆಘಾತಕಾರಿ ಮಾಹಿತಿಗಳನ್ನು ಸಿಇಒ ಸುಚನಾ ಬಾಯಿ ಬಿಟ್ಟಿದ್ದಾಳೆ. ಗೋವಾ ಪೊಲೀಸರು ಈಕೆಯನ್ನು ವಿಚಾರಣೆಗೊಳಪಡಿಸಿದಾಗ ಮಗುವನ್ನು ಹೇಗೆ ಕೊಂದೆ, ಯಾಕೆ ಕೊಲೆ ಮಾಡಿದೆ ಎಂದು ಹೇಳಿದ್ದಾಲೆ. ಆರೋಪಿ ಸುಚನಾ ಮಗುವನ್ನು ನಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

ತಂದೆ ವೆಂಕಟರಮಣ ಪ್ರತಿ ಭಾನುವಾರ ವೀಡಿಯೋ ಕಾಲ್‌ ಅಥವಾ ನೇರವಾನಿ ಮಾತನಾಡಬಹುದು ಎಂದು ನ್ಯಾಯಾಲಯ ಆದೇಶ ನೀಡಿದೆ. ಈ ಕಾರಣದಿಂದ ಜ.7 ರಂದು ರವಿವಾರ ವೆಂಕಟರಮಣ ಮಗುವಿನೊಂದಿಗೆ ಮಾತನಾಡಲು ಪತ್ನಿ ಸೂಚನಗೆ ವೀಡಿಯೋ ಕಾಲ್‌ ಮಾಡಿದ್ದಾರೆ. ಆದರೆ ಸುಚನಾ ಮಗು ಮಲಗಿದೆ ಎಂದು ಹೇಳಿದ್ದಾರೆ. ಒಕೆ ಎಂದ ವೆಂಕಟರಮಣ ಅವರು ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಸುಚನಾಗೆ ಕರೆ ಮಾಡಿದ್ದಾರೆ. ಹೀಗೆ ಮತ್ತೆ ಮತ್ತೆ ಕರೆ ಮಾಡಿದ್ದಾರೆ.

ಇದನ್ನೂ ಓದಿ: Ravindar Chandrasekaran: ಅನಾರೋಗ್ಯದಿಂದ ಹಾಸಿಗೆ ಹಿಡಿದ್ರಾ ರವೀಂದರ್ ಚಂದ್ರಶೇಖರ್ ?! ಪತ್ನಿ ಮಹಾಲಕ್ಷ್ಮೀ ಹೇಳಿದ್ದೇನು??

ಆದರೆ ಪತಿ ವೆಂಕಟರಮಣರೊಂದಿಗೆ ಮಗ ಚಿನ್ಮಯ್‌ ಮಾತನಾಡುವುದು ಸುಚನಾಗೆ ಇಷ್ಟವಿರುವುದಿಲ್ಲ. ಮಗು ಎಚ್ಚರವಿರುವಾಗಲೇ ವೀಡಿಯೋ ಕಾಲ್‌ ಮಾಡಿದ್ದಾರೆ. ಆಗ ಸುಚನಾ ಮಗು ಚಿನ್ಮಯ್‌ಗೆ ಮಲಗಲು ಹೇಳಿದ್ದಾಳೆ. ಆದರೆ ಚಿನ್ಮಯ್‌ ಮಲಗಿಲ್ಲ. ಸುಚನಾ ಕಾಲ್‌ ರಿಸೀವ್‌ ಮಾಡಿ ಮಗು ಮಲಗಿದೆ ಎಂದು ಹೇಳುತ್ತಾರೆ. ಆದರೆ ವೆಂಕಟರಮಣನಿಗೆ ಮಗನ ಶಬ್ದ ಕೇಳುತ್ತದೆ. ಕೂಡಲೇ ಸುಚನಾ ಪುತ್ರ ಚಿನ್ಮಯ್‌ ಶಬ್ದ ಪತಿ ವೆಂಕಟರಮಣಗೆ ಕೇಳಬಾರದೆಂದು ದಿಂಬನ್ನು ಮಗುವಿನ ಮುಖಕ್ಕೆ ಅದುಮುತ್ತಾಳೆ. ಇದರಿಂದ ಉಸಿರು ಗಟ್ಟಿ ಮಗುಚಿನ್ಮಯ್‌ ಮೃತಪಟ್ಟಿದ್ದಾನೆ. ಪೊಲೀಸರ ಮುಂದೆ ಕೊಲೆ ಮಾಡಬೇಕು ಎಂಬ ಉದ್ದೇಶದಿಂದ ಮಗನನ್ನು ಹತ್ಯೆ ಮಾಡಿಲ್ಲ ಎಂದು ಸುಚನಾ ಹೇಳಿರುವುದಾಗಿ ವರದಿಯಾಗಿದೆ.

ಚಿನ್ಮಯ್‌ ಮೃತಪಟ್ಟ ಬಳಿಕ ಸುಚನಾ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದಾಳೆ. ಆಮೇಲೆ ಅದೇನಾಯಿತೋ ಬೆಂಗಳೂರಿಗೆ ಹೋಗಲು ನಿರ್ಧಾರ ಮಾಡಿದ್ದಾಳೆ. ಹೀಗೆ ಯೋಚನೆ ಮಾಡಿದವಳೇ ಹೋಟೆಲ್‌ ಸಿಬ್ಬಂದಿಯಿಂದ ಟ್ಯಾಕ್ಸಿ ಬುಕ್‌ ಮಾಡಿಸಿದ್ದಾಳೆ. ಅನಂತರ ಮಗನ ಶವವನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಗೋವಾದಿಂದ ಹೊರಟು, ಚಿತ್ರದುರ್ಗದಲ್ಲಿ ಬಂಧಿತಳಾಗಿದ್ದಾಳೆ.