India Saudi Arabia Hajj agreement: ಈ ವರ್ಷ ಎಷ್ಟು ಭಾರತೀಯ ಮುಸ್ಲಿಮರು ಹಜ್‌ಗಾಗಿ ಮೆಕ್ಕಾ-ಮದೀನಾಕ್ಕೆ ಹೋಗಲು ಸಾಧ್ಯ?

ಭಾರತ ಮತ್ತು ಸೌದಿ ಅರೇಬಿಯಾ ನಡುವೆ ಮಹತ್ವದ ಒಪ್ಪಂದ!

India Saudi Arabia Hajj agreement: 2024 ರ ಹಜ್ ಯಾತ್ರೆಗಾಗಿ ಸೌದಿ ಅರೇಬಿಯಾ ಭಾರತಕ್ಕೆ 1.75 ಲಕ್ಷ ಯಾತ್ರಿಗಳ ನಿಗದಿಪಡಿಸಿದೆ. ಭಾನುವಾರ (ಜನವರಿ 7) ಭಾರತ ಮತ್ತು ಸೌದಿ ಅರೇಬಿಯಾ ನಡುವೆ ನಡೆದ ಸಭೆಯಲ್ಲಿ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರ ಅಡಿಯಲ್ಲಿ ಈ ವರ್ಷ 1,75,025 ಹಜ್ ಯಾತ್ರಿಗಳ ಕೋಟಾವನ್ನು ನಿಗದಿಪಡಿಸಲಾಗಿದೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಸೌದಿ ಹಜ್ ಮತ್ತು ಉಮ್ರಾ ಸಚಿವ ಡಾ ತೌಫಿಕ್ ಬಿನ್ ಫೌಜಾನ್ ಅವರೊಂದಿಗೆ ಜೆಡ್ಡಾದಲ್ಲಿ ದ್ವಿಪಕ್ಷೀಯ ಹಜ್ ಒಪ್ಪಂದ 2024 ಗೆ ಸಹಿ ಹಾಕಿದ್ದಾರೆ.

ಇದನ್ನೂ ಓದಿ: Belthangady: ಹೃದಯಾಘಾತದಿಂದ ವ್ಯಕ್ತಿ ಸಾವು

ಅಧಿಕೃತ ಹೇಳಿಕೆಯ ಪ್ರಕಾರ, ಹಜ್ 2024 ಕ್ಕೆ ಭಾರತದಿಂದ ಒಟ್ಟು 1,75,025 ಯಾತ್ರಾರ್ಥಿಗಳ ಕೋಟಾವನ್ನು ನಿಗದಿಪಡಿಸಲಾಗಿದೆ. ಅದರಲ್ಲಿ 1,40,020 ಆಸನಗಳನ್ನು ಹಜ್ ಸಮಿತಿಯ ಮೂಲಕ ಯಾತ್ರಿಕರಿಗೆ ಕಾಯ್ದಿರಿಸಲಾಗಿದೆ ಮತ್ತು 35,005 ಯಾತ್ರಿಗಳನ್ನು ಖಾಸಗಿ ನಿರ್ವಾಹಕರ ಮೂಲಕ ಕಾಯ್ದಿರಿಸಲಾಗಿದೆ.

ಸ್ಮೃತಿ ಇರಾನಿ ಅವರು ಸಾಮಾಜಿಕ ಜಾಲತಾಣವಾದ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ. ಅವರು ಹಜ್ ಸಮ್ಮೇಳನದಲ್ಲಿ ಭಾಗವಹಿಸಲು ಮತ್ತು ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಹಜ್ ಒಪ್ಪಂದ 2024 ಗೆ ಸಹಿ ಹಾಕಲು ಎರಡು ದಿನಗಳ ಭೇಟಿಗಾಗಿ ಭಾನುವಾರ ಜೆಡ್ಡಾಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ರಾಯಭಾರಿ ಡಾ.ಸುಹೇಲ್ ಖಾನ್, ಕಾನ್ಸುಲ್ ಜನರಲ್ ಮೊಹಮ್ಮದ್ ಶಾಹಿದ್ ಮತ್ತು ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯದ ಅಧಿಕಾರಿಗಳು ಜೆಡ್ಡಾ ವಿಮಾನ ನಿಲ್ದಾಣದಲ್ಲಿ ಇರಾನಿ ಅವರನ್ನು ಸ್ವಾಗತ ಮಾಡಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.