Assault Case: ಮಗಳೇ ಟೈಟಾಗಿ ಕುಡಿದು ಬಂದು ನಮಗೆ ಹೊಡಿತಾಳೆ ಎಂದು ದೂರು ಕೊಟ್ಟ ಪೋಷಕರು!!!

Share the Article

Assault Case: ಕುಡಿದು ಬಂದು ಮಗಳು ಹೊಡೆದು ಬಡಿದು (Assault Case) ಹಲ್ಲೆ ನಡೆಸುವುದಾಗಿ ಪೋಷಕರು ಮಗಳ ವಿರುದ್ದ ದೂರು ನೀಡಿರುವ ಘಟನೆ ವರದಿಯಾಗಿದೆ.

ದಂಪತಿಗಳಿಬ್ಬರು ತಮ್ಮ ಹಿರಿಯ ಮಗಳು ಧಾತ್ರಿ (42) ಎಂಬಾಕೆ ಕುಡಿದು ಬಂದು ಗಲಾಟೆ ಮಾಡಿ, ದೊಣ್ಣೆಯಲ್ಲಿ ಹೊಡೆದು ಹಲ್ಲೆ ಮಾಡಿದ್ದಾಳೆ ಎಂದು ಮಗಳ ವಿರುದ್ದ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕೂಡ ಧಾತ್ರಿ ಕುಡಿದು ಗಲಾಟೆ ಮಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿತ್ತು ಎನ್ನಲಾಗಿದೆ. ಈ ನಡುವೆ ಮತ್ತೆ ಕುಡಿದು ಗಲಾಟೆ ಮಾಡುವುದನ್ನು ಶುರು ಮಾಡಿದ್ದಾಳೆ ಎಂದು ತಾಯಿ ಗೀತಾರಾಣಿ ಆರೋಪಿಸಿದ್ದಾರೆ. ಈ ನಡುವೆ ಮನೆ ವಿಲ್ ತನ್ನ ಹೆಸರಿಗೆ ಬರೆಯದಿದ್ದರೆ ಕೊಲೆ ಮಾಡುವುದಾಗಿ ಪೋಷಕರಿಗೆ ಕೊಲೆ ಬೆದರಿಕೆ ಹಾಕಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.

ಇದನ್ನೂ ಓದಿ: Mumbai high court: ಮುಸ್ಲಿಂ ಗಂಡ-ಹೆಂಡತಿಯರ ಕುರಿತು ಮಹತ್ವದ ತೀರ್ಪು ಹೊರಡಿಸಿದ ಹೈಕೋರ್ಟ್ !!

ಈ ನಡುವೆ,ಮಗಳು ಕೂಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು,ಅವಾಚ್ಯ ಶಬ್ಧಗಳಿಂದ ನಿಂದಿಸಿ ನಿನಗೊಂದು ಗತಿ ಕಾಣಿಸುತ್ತೀವಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮಗಳು ಮನೆಯವರ ವಿರುದ್ಧ ದೂರು ನೀಡಿದ್ದಾಳೆ. ಇದರ ಜೊತೆಗೆ, ಪೋಷಕರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಗಳು ಆರೋಪಿಸಿದ್ದಾಳೆ. ಸದ್ಯ ಗಿರಿನಗರ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Leave A Reply