Expensive Gift: ತನ್ನ ಸಹಪಾಠಿಗೆ ದುಬಾರಿ ಉಡುಗೊರೆ ನೀಡಿದ ನರ್ಸರಿ ಬಾಲಕ: ಬಾಲಕ ಕೊಟ್ಟ ಉಡುಗೊರೆ ಬೆಲೆ ತಿಳಿದರೆ ಶಾಕ್ ಆಗೋದು ಗ್ಯಾರಂಟಿ!!

Share the Article

Expensive Gift: ಪ್ರೀತಿಗೆ ಕಣ್ಣಿಲ್ಲ ಎಂಬ ಹೆಚ್ಚು ಪ್ರಚಲಿತ. ಇದರ ಜೊತೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನೂ ನಿರೂಪಿಸಿದ ಅದೆಷ್ಟೋ ಪ್ರಕರಣಗಳು ವರದಿಯಾಗಿವೆ. ಇದೀಗ,ಚೀನಾದ ಕ್ಸಿನ್ಚುವಾ ಪ್ರಾಂತ್ಯದಲ್ಲಿ ಕಿಂಡರ್ ಗಾರ್ಡನ್ ನಲ್ಲಿ(Kindergarden) ಓದುತ್ತಿರುವ ಬಾಲಕನೊಬ್ಬ ತನ್ನ ಸಹಪಾಠಿಗೆ ನೀಡಿದ ದುಬಾರಿ ಉಡುಗೊರೆ (expensive gift)ಭಾರೀ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಆ ಬಾಲಕ ಕೊಟ್ಟ ಉಡುಗೊರೆಯ ಮೌಲ್ಯ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ!!

ಪುಟ್ಟ ಬಾಲಕ, ತನ್ನ ಗೆಳತಿಗೆ ಭಾರಿ ಮೌಲ್ಯದ ಉಡುಗೊರೆ ನೀಡಿದ್ದು, ಇವು ತಲಾ 15,000 ಯುಎಸ್ ಡಾಲರ್ (12.49 ಲಕ್ಷ ರೂ.) ಮೌಲ್ಯದ 100 ಗ್ರಾಂ ಚಿನ್ನದ ಬಿಸ್ಕತ್ತುಗಳಾಗಿತ್ತು (gold biscuit). ಈ ಕುರಿತ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿವೆ.

ಬಾಲಕಿ ತನ್ನ ಸಹಪಾಠಿ ನೀಡಿದ್ದ ಉಡುಗೊರೆಯನ್ನು ಮನೆಗೆ ಬಂದು ಪೋಷಕರಿಗೆ ತಿಳಿಸಿದ್ದು, ಚಿನ್ನದ ಬಿಸ್ಕಟ್ ನೋಡಿದ ಬಾಲಕಿಯ ಪೋಷಕರು ಮರುದಿನ ಹುಡುಗನಿಗೆ ಅದನ್ನು ಹಿಂದಿರುಗಿಸಬೇಕೆಂದು ಹೇಳಿ, ಹುಡುಗನ ಪೋಷಕರನ್ನು ಸಂಪರ್ಕ ಮಾಡಿದ್ದಾರೆ. ಪುಟ್ಟ ಬಾಲಕನಿಗೆ ಪೋಷಕರು ಮನೆಯಲ್ಲಿ ಇರಿಸಲಾದ ಚಿನ್ನವು ಅವನ ಭಾವಿ ಪತ್ನಿಗೆ ಎಂದು ಹೇಳಿದ್ದರಂತೆ. ಭಾವಿ ಪತ್ನಿಗಾಗಿ ಎಂದು ಹೇಳಿದ್ದನ್ನು ಗಂಭೀರವಾಗಿ ಪರಿಗಣಿಸಿದ ಬಾಲಕ ಅದನ್ನು ತನ್ನ ಸಹಪಾಠಿಗೆ ಉಡುಗೊರೆಯಾಗಿ ನೀಡಿದ್ದಾನೆ. ಆದರೆ, ಬಾಲಕನಿಗೆ ಅದರ ಮೌಲ್ಯ ತಿಳಿದಿರಲಿಲ್ಲ ಎನ್ನಲಾಗಿದೆ.

Leave A Reply