Kidnap Case; ಬೆಳಗ್ಗೆ ಕೆಲಸಕ್ಕೆ ಸೇರಿ ಮಧ್ಯಾಹ್ನ ಮಗುವಿನ ಅಪಹರಣ ಮಾಡಿದ ಪ್ರಕರಣ; ಕೇಸಲ್ಲಿ ಟ್ವಿಸ್ಟ್‌, ಮಗು ಎಲ್ಲಿದೆ ಗೊತ್ತಾ?

Share the Article

ಅಂಗಡಿಗೆ ಕೆಲಸಕ್ಕೆಂದು ಸೇರಿದವನು ಬೆಳಗ್ಗೆ ಕೆಲಸಕ್ಕೆ ಸೇರಿ ಮಧ್ಯಾಹ್ನದೊಳಗೆ ಮಾಲೀಕನ ಮಗಳನ್ನು ಕಿಡ್ನಾಪ್‌ ಮಾಡಿದ ಘಟನೆಯೊಂದು ಬೆಂಗಳೂರು ಬಸವನಗುಡಿಯಲ್ಲಿ ನಡೆದಿತ್ತು. ಈ ಸಂಬಂಧ ಬನಶಂಕರಿ ನಿವಾಸಿ ಮಗುವಿನ ತಂದೆ ಶಫಿವುಲ್ಲಾ ಎಂಬುವವರು ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಪ್ರಕರಣ ದಾಖಲಿಸಿದ್ದು, ಕೆಲಸ ಕೇಳಿಕೊಂಡು ಬಂದಿದ್ದ ವಾಸೀಂ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Mangaluru: ಬಿಜೆಪಿ ಮುಖಂಡ, ಕಾರ್ಪೋರೇಟರ್‌ ಆತ್ಮಹತ್ಯೆಗೆ ಯತ್ನ, ವಿಷ ಸೇವಿಸಿ ಕಾರಿನಲ್ಲಿ ಪತ್ತೆ!!!

ಇದೀಗ ಮಾಹಿತಿ ಪ್ರಕಾರ, ಮಗು ಪತ್ತೆಯಾಗಿದ್ದು, ತಾಯಿ ಬಳಿ ಇದೆ ಎಂದು ಗೊತ್ತಾಗಿದೆ. ಕೌಟುಂಬಿಕ ವಿಚಾರವಾಗಿ ಮಗುವಿನ ತಾಯಿಯೇ ವಾಸಿಂ ಎಂಬಾತನ ಮೂಲಕ ಕರೆಸಿಕೊಂಡಿದ್ದಾಳೆ ಎಂದು ಪತ್ತೆಯಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ, ವಾಸೀಂ ಮಗುವನ್ನು ಶಫಿವುಲ್ಲಾರ ಮಾಜಿ ಪತ್ನಿಗೆ ಒಪ್ಪಿಸಿರುವುದಾಗಿ ವರದಿಯಾಗಿದೆ. ಮಾಜಿ ಪತ್ನಿಯನ್ನು ವಿಚಾರಣೆ ನಡೆಸಿದಾಗ ಮಗುವಿನ ಮೇಲೆ ತನಗೂ ಹಕ್ಕಿದೆ, ಹೀಗಾಗಿ ಆಕೆ ನನ್ನ ಬಳಿ ಇರುತ್ತಾಳೆ ಎಂದು ಹೇಳಿಕೆ ನೀಡಿದ್ದಾಳೆ ಎಂದು ವರದಿಯಾಗಿದೆ. ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಬೆಳಗ್ಗೆ ಕೆಲಸಕ್ಕೆ ಸೇರಿ, ಮಧ್ಯಾಹ್ನ ಮಾಲೀಕನ ಮಗಳ ಕಿಡ್ನ್ಯಾಪ್‌ ಮಾಡಿದ ವ್ಯಕ್ತಿ!!

Leave A Reply