Uttar Pradesh: ಸಿಎಂ ಯೋಗಿಯನ್ನು ಗೂಂಡ ಎಂದ ವ್ಯಕ್ತಿಗೆ ಪೋಲೀಸ್ ನಿಂದ ಸಿಕ್ತು ಸಖತ್ ಟ್ರೀಟ್ಮೆಂಟ್ – ಟ್ರೀಟ್ಮೆಂಟ್ ಕೊಟ್ಟ ವಿಡಿಯೋ ಫುಲ್ ವೈರಲ್

Share the Article

Uttar Pradesh: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಸಾರ್ವಜನಿಕವಾಗಿ ಮುಸ್ಲಿಂ ವ್ಯಕ್ತಿಯೊಬ್ಬ ಗೂಂಡಾ ಎಂದು ಜರಿದಿದ್ದಾನೆ. ವ್ಯಕ್ತಿಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೋಲಿಸರು ಆತನನ್ನು ಬಂದಿಸಿ ಸಖತ್ ಟ್ರೀಟ್ಮೆಂಟ್ ನೀಡಿದ್ದಾರೆ.

ಹೌದು, ಸಾರ್ವಜನಿಕವಾಗಿ ಮಾಧ್ಯಮದ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ವ್ಯಕ್ತಿಯೊಬ್ಬನು ಯೋಗಿಜಿಯನ್ನು ಅನಾವಶ್ಯಕವಾಗಿ ಜರಿದಿದ್ದಾನೆ. ನನ್ನ ವಿರುದ್ಧ ಕೇಸ್ ದಾಖಲಿಸಿದರೂ ನನಗೆ ಭಯವಿಲ್ಲ. ಮೊದಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi adityanath) ಇತಿಹಾಸ ಮತ್ತು ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಪರಿಶೀಲಿಸಿ ಎಂದು ಆತ ಸಂದರ್ಶಕರೊಂದಿಗೆ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿಸಿ ಪೊಲೀಸರು ಸರಿಯಾಗಿ ಬೆಂಡೆತ್ತಿದ್ದಾರೆ.

ಇಷ್ಟೇ ಅಲ್ಲದೆ ಕೆಲವೇ ಹೊತ್ತಿನಲ್ಲಿ ಈ ವ್ಯಕ್ತಿಯ ಮತ್ತೊಂದು ವಿಡಿಯೋ ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ಬಂಧನವಾಗಿರುವ ವ್ಯಕ್ತಿಯನ್ನ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದು ಆತ ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾನೆ. ಅಲ್ಲದೆ ನಡೆಯಲಾಗದ ಅವನನ್ನು ಪೊಲೀಸರು ಕರೆದೊಯ್ಯುವ ಕೈ ಹಿಡಿದು ಕರಿದೊಯ್ಯುತ್ತಿದ್ದಾರೆ. ಸದ್ಯ ಆರೋಪಿಯು ಪೊಲೀಸರ ವಶದಲ್ಲಿದ್ದು, ಮುಂದಿನ ಕ್ರಮ ಜರುಗಿಸಲಾಗುತ್ತಿದೆ.

https://twitter.com/ShivamdixitInd/status/1742222570202816662?t=vOayggALzgL34l1rztVWng&s=19

Leave A Reply