‘LPG’ ಗ್ರಾಹಕರೇ ಗಮನಿಸಿ; E-KYC ಮಾಡಿಸುವುದರ ಕುರಿತು ಇಲ್ಲಿದೆ ಬಿಗ್‌ ಅಪ್ಡೇಟ್‌!!!

LPG KYC: ಗೃಹಬಳಕೆ ಅನಿಲ ಸಂಪರ್ಕ ಹೊಂದಿರುವವರು ತಮ್ಮ ಆಧಾರ್‌ ಬಯೋಮೆಟ್ರಿಕ್‌ ನೀಡಿ ಕೆವೈಸಿ ಮಾಡಿಸಿಕೊಳ್ಳಲು ಯಾವುದೇ ಕೊನೆಯ ದಿನಾಂಕವನ್ನು ಕೇಂದ್ರ ಸರಕಾರ ನಿಗದಿ ಪಡಿಸಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸ್ಪಷ್ಟನೆ ನೀಡಿದೆ.

ಹಾಗಾಗಿ ಗ್ರಾಹಕರು ಈ ವಿಚಾರದಲ್ಲಿ ಅನಗತ್ಯ ಗೊಂದಲ, ಆತಂಕ ಪಡುವುದು ಬೇಡ ಎಂದು ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Bantwala: ಓವರ್‌ಟೇಕ್‌ ಭರದಲ್ಲಿ ಬೈಕ್‌ ಸ್ಕಿಡ್‌; ಸಹಸವಾರನ ಮೇಲೆ ಹರಿದ ಲಾರಿ,ಸ್ಥಳದಲ್ಲೇ ಯುವಕ ಮೃತ್ಯು!!!

ಡಿ.31 ರೊಳಗೆ ಇ-ಕೆವೈಸಿ ಮಾಡಿಸಬೇಕು ಇಲ್ಲದಿದ್ದರೆ ಸಬ್ಸಿಡಿ ರದ್ದಾಗಲಿದೆ ಎಂಬ ವದಂತಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಇದರಿಂದ ಜನರು ಆತಂಕಗೊಳಗಾಗಿದ್ದರು. ಹಾಗಾಗಿ ಗ್ಯಾಸ್‌ ಏಜೆನ್ಸಿಗಳಿಗೆ ಜನರು ಮುಗಿ ಬೀಳುತ್ತಿದ್ದ ವರದಿಯಾಗಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು ಇದೀಗ ಸ್ಪಷ್ಟನೆ ನೀಡಿದ್ದು, ತೈಲ ನಿಗಮಗಳಿಂದ ಆಧಾರ್‌ ಲಿಂಕ್‌ ಮೂಲಕ ಇ-ಕೆವೈಸಿ ಬಗ್ಗೆ ಜಾಗೃತಿ, ಕೆವೈಸಿ ಅಭಿಯಾನ ನಡೆದಿರುವುದು ನಿಜ. ಆದರೆ ಇದಕ್ಕೆ ಯಾವುದೇ ಗಡುವು ವಿಧಿಸಿಲ್ಲ. ಇದಕ್ಕೂ ಸಬ್ಸಿಡಿಗೂ ಸಂಬಂಧ ಇಲ್ಲʼ ಎಂದು ವರದಿಯಾಗಿದೆ.

Leave A Reply

Your email address will not be published.