Parliment election : ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಮಂತ್ರಿಗಳು !!
Parliment election : ಮುಂಬರುವ ಲೋಕಸಭಾ ಚುನಾವಣೆಯ(Parliament election)ಕಾವು ಇದೀಗ ದೇಶಾದ್ಯಂತ ರಂಗೇರಿದೆ. ಎಲ್ಲಾ ಪಕ್ಷಗಳು ಗೆಲುವಿನ ಮಂತ್ರವನ್ನು ಪಠಿಸುತ್ತಿವೆ. ಕೆಲವು ಪಕ್ಷಗಳು ಮೈತ್ರಿ ಮಾಡಿಕೊಂಡು ಈಗಲೇ ಗೆಲುವಿನ ನಗೆ ಬೀರುತ್ತಿದೆ. ಇದರ ನಡುವೆಯೇ ಅಭ್ಯರ್ಥಿಗಳ ಆಯ್ಕೆ ಕೂಡ ನಡೆಯುತ್ತಿದ್ದು, ಲಾಭಿಗಳು ಕೂಡ ಜೋರಾಗಿದೆ. ಈ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ 20 ಕ್ಕೂ ಹೆಚ್ಟು ಸ್ಥಾನಗಳನ್ನು ಗೆಲ್ಲುವ ಪಣತೊಟ್ಟಿದ್ದು ಸರ್ಕಾರದ ಮಂತ್ರಿಗಳನ್ನೇ ಕಣಕ್ಕಿಳಿಸಲು ತೀರ್ಮಾನಿಸಿದೆ.
ಹೌದು, ಲೋಕಸಭಾ ಚುನಾವಣೆ(Parliament election)ರಾಜ್ಯ ಕಾಂಗ್ರೆಸ್ ಗೆ ಅಗ್ನಿ ಪರೀಕ್ಷೆಯಾಗಿದೆ. ಯಾಕೆಂದರೆ ವಿಧಾನಸಭಾ ಚುನಾವಣೆಯ ಗೆಲುವಿನಷ್ಟು ಇದು ಸುಲಭವಲ್ಲ. ಮೋದಿ ಹವಾ ದೇಶಾದ್ಯಂತ ಇನ್ನೂ ಹಾಗೆಯೇ ಇದೆ. ಹೀಗಾಗಿ ಬಿಜೆಪಿ ವಿರುದ್ಧ ಪ್ರಬಲ ನಾಯಕರನ್ನು ಕಣಕ್ಕಿಳಿಸಿ ಹೇಗಾದರೂ ಗೆಲುವನ್ನು ತಮ್ಮದಾಗಿಸಿಕೊಳ್ಳಬೇಕೆಂಬುದು ಅವರ ತಂತ್ರ. ಇದಕ್ಕೆ ತುಂಬಾ ಖ್ಯಾತಿಗಳಿಸಿ ಹೆಸರು ಮಾಡಿರುವ ಮಂತ್ರಿಗಳೇ ಸರಿಯೆಂದು ಭಾವಿಸಿರುವ ಕಾಂಗ್ರೆಸ್ ಈ ಎಲ್ಲಾ ಕ್ಷೇತ್ರಗಳಲ್ಲಿ ಸಚಿವರನ್ನೇ ಕಣಕ್ಕಿಳಿಸಲು ತೀರ್ಮಾನ ಮಾಡಿದೆ. ಹಾಗಿದ್ದರೆ ಯಾವ ಮಂತ್ರಿಗಳೆಲ್ಲಾ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ನೋಡೋಣ.
ಹೆಚ್.ಸಿ.ಮಹದೇವಪ್ಪ (ಚಾಮರಾಜನಗರ)
ಸತೀಶ್ ಜಾರಕಿಹೊಳಿ(ಬೆಳಗಾವಿ)
ಚೆಲುವರಾಯಸ್ವಾಮಿ(ಮಂಡ್ಯ)
ಕೆ.ಎನ್.ರಾಜಣ್ಣ(ಹಾಸನ)
ಕೆ.ಹೆಚ್.ಮುನಿಯಪ್ಪ(ಕೋಲಾರ)
ಅಂದಹಾಗೆ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು ಲೋಕಸಭೆಗೆ ಸಚಿವರ ಸ್ಪರ್ಧೆ ಅನಿವಾರ್ಯ ಆಗಬಹುದು ಎಂದು ತೀರ್ಮಾನಿಸಲಾಗಿದೆ. ಹೀಗಾಗಿ ಮಾನಸಿಕವಾಗಿ ಸಿದ್ದರಾಗಿರಿ ಎಂದು ಸಚಿವರುಗಳಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: Bed Room Tips: ತಿಂಗಳಿಗೆ ಎಷ್ಟು ಬಾರಿ ದೈಹಿಕ ಸಂಪರ್ಕ ಮಾಡುವುದು ಉತ್ತಮ?