Bantwala: ಕಾಣೆಯಾಗಿದ್ದ ಕೋಣಗಳು ಪತ್ತೆ, ಎರಡು ಜೀವಂತವಾಗಿ, ಒಂದು ಶವವಾಗಿ ಪತ್ತೆ!

Share the Article

Bantwala: ಕಾಣೆಯಾಗಿದ್ದ ಮೂರು ಕೋಣಗಳ ಪೈಕಿ ಎರಡು ಕೋಣಗಳು ಜೀವಂತ ಪತ್ತೆಯಾದರೆ, ಇನ್ನೊಂದು ಕೋಣ ಶವವಾಗಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆಂದು ವರದಿಯಾಗಿದೆ. ಈ ಮೂಲಕ ಪ್ರಕರಣಕ್ಕೆ ತಿರುವು ಸಿಕ್ಕಿದೆ ಎನ್ನಲಾಗಿದೆ.

ಘಟನೆ; ಅಮ್ಮುಂಜೆ ದೇವಂದಬೆಟ್ಟು ವಿನಯ ಬಲ್ಯಾಯ ಎಂಬುವವರ ಮನೆಯ ಸಮೀಪದ ಗದ್ದೆಯಲ್ಲಿ ಕಟ್ಟಿ ಹಾಕಿದ್ದ ಮೂರು ಕೋಣಗಳು ಡಿ.17 ರಂದು ನಾಪತ್ತೆಯಾಗಿತ್ತು. ಆದರೆ ಎಲ್ಲಿ ಹುಡುಕಿದರೂ ಸಿಗದೇ ಇರುವ ಕಾರಣ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಇದನ್ನು ಓದಿ: Salaar OTT Release: ಸಲಾರ್ ಒಟಿಟಿ ರಿಲೀಸ್ ಫಿಕ್ಸ್! ಇಷ್ಟು ಬೇಗ ಡೀಲ್​ ಆಗಿ ಹೋಯ್ತಾ?

ಮೊಹಮ್ಮದ್‌ ಹನೀಫ್‌ ಎಂಬಾತನ ಮೇಲೆ ಸಂಶಯವಿದ್ದು, ಹಾಗಾಗಿ ಕಳವು ಮಾಡಿರುವ ಶಂಕೆಯನ್ನು ದೂರಿನಲ್ಲಿ ಹೇಳಲಾಗಿತ್ತು. ಹಾಗಾಗಿ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಕೋಣಗಳು ಪತ್ತೆಯಾಗಿದೆ. ಆದರೆ ಎರಡು ಕೋಣಗಳು ದೂರದ ಗುಡ್ಡವೊಂದರಲ್ಲಿ ಮೇಯುತ್ತಿದ್ದರೆ, ಇನ್ನೊಂದು ಮಾತ್ರ ನೀರು ಕುಡಿಯಲೆಂದು ಹೋಗಿ ಕೆಸರಿನಲ್ಲಿ ಹೂತು ಮೇಲೆ ಬರಲಾಗದೆ ಮೃತಹೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ನಂತರ ಕೋಣಗಳನ್ನು ಮನೆಯವರಿಗೆ ನೀಡಲಾಗಿದೆ ಎಂದು ಹೇಳಲಾಗಿದೆ. ವಶಕ್ಕೆ ಪಡೆದುಕೊಂಡ ವ್ಯಕ್ತಿಯನ್ನು ವಿಚಾರಣೆ ನಡೆಸಿದ್ದು ಆತನನ್ನು ಇದೀಗ ಬಿಟ್ಟು ಕಳುಹಿಸಲಾಗಿದೆ.

Leave A Reply