IPL ಹರಾಜಿನ ವೇಳೆ ತಪ್ಪಾಗಿ ಈ ಆಟಗಾರನಿಗೆ ಬಿಡ್ ಕೂಗಿದ ಪಂಜಾಬ್ ಟೀಂ ಒಡತಿ – ನಂತರ ಏನಾಯ್ತು ?! ಇಲ್ಲಿದೆ ನೋಡಿ ವೈರಲ್ ವಿಡಿಯೋ

Share the Article

IPL 2024ಕ್ಕೆ ಭರದ ಸಿದ್ದತೆ ನಡೆಯುತ್ತಿದೆಹ ಈಗಾಗಲೇ ಹರಾಜು ಪ್ರಕ್ರಿಯೆ ಕೂಡ ನಡೆದಿದೆ. ಎಲ್ಲಾ ತಂಡದ ಮುಖ್ಯಸ್ಥರು ಅಳೆದು, ತೂಗಿ ತಮಗೆ ಸಮರ್ಥರೆನಿಸುವ ಆಟಗಾರರನ್ನು ಕೊಂಡುಕೊಂಡಿದ್ದಾರೆ. ಆದರೆ ಈ ವೇಳೆ ಪಂಜಾಬ್ ಟೀಂ ಒಡತಿ ಪ್ರೀತಿ ಝಿಂಟಾ ಅವರು ಮಹಾ ಎಡವಟ್ಟು ಮಾಡಿಕೊಂಡಿದ್ದು ಇದರ ವಿಡಿಯೋವೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ ವೈರಲ್ ಆಗ್ತಿದೆ.

 

ಹೌದು, ಆಟಗಾರರ ಹರಾಜಿನ ವೇಳೆ ಪಂಜಾಬ್ ಕಿಂಗ್ಸ್‌ ಫ್ರಾಂಚೈಸಿಯು ತಪ್ಪಾದ ಆಟಗಾರನನ್ನು ಬಿಡ್‌ ಮಾಡಿ ಮಹಾ ಎಡವಟ್ಟು ಮಾಡಿಕೊಂಡು ಸುದ್ದಿಯಾಗಿದೆ. ಅಂದಹಾಗೆ ಭಾರತೀಯ ಅನುಭವಿ ದೇಶಿ ಆಟಗಾರನಾಗಿರುವ, 20 ಲಕ್ಷ ರುಪಾಯಿ ಮೂಲಬೆಲೆ ಹೊಂದಿದ್ದ ಶಶಾಂಕ್ ಸಿಂಗ್ ಅವರಿಗೆ ಪಂಜಾಬ್ ಕಿಂಗ್ಸ್‌ ಕನ್‌ಫ್ಯೂಸ್ ಮಾಡಿಕೊಂಡು ಬಿಡ್ ಮಾಡಿತು. ಆ ಬಳಿಕ ತಾವು ತೆಗೆದುಕೊಳ್ಳಬೇಕಿದ್ದ ಆಟಗಾರನಲ್ಲ ಎಂದು ತಿಳಿಯುವಷ್ಟರಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ಮುಗಿದುಹೋಗಿತ್ತು.

ಇದನ್ನು ಓದಿ: SBIನಲ್ಲಿ ಖಾತೆ ಹೊಂದಿರುವವರು ಗಮನಿಸಿ- ಇಂದೇ ಬ್ಯಾಂಕಿಗೆ ತೆರಳಿ ಈ ಕೆಲಸ ಮಾಡಿ, RBIನಿಂದ ಬಂತು ಹೊಸ ನಿಯಮ !!

ಶಶಾಂಕ್ ಸಿಂಗ್ ಹೆಸರು ಬರುತ್ತಿದ್ದಂತೆಯೇ ಪ್ರೀತಿ ಝಿಂಟಾ ಉಳಿದ ಪಂಜಾಬ್ ಕಿಂಗ್ಸ್‌ನ ಸಹ ಮಾಲೀಕರ ಜತೆ ಚರ್ಚಿಸಿ ಪ್ಯಾಡ್ಲ್‌ ಎತ್ತಿ ಬಿಡ್‌ ಮಾಡಿದರು. ಆಕ್ಷನರ್ ಆಗಿದ್ದ ಮಲ್ಲಿಕಾ ಸಾಗರ್, ಈ ಆಟಗಾರನ ಹೆಸರನ್ನು ಕರೆಯುತ್ತಿದ್ದಂತೆಯೇ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಮೂಲಬೆಲೆಗೆ ಬಿಡ್ ಮಾಡಿತು. ಬಳಿಕ ಮುಂದಿನ ಸೆಟ್ ಹರಾಜು ಆರಂಭವಾಯಿತು. ತಾನ್ಯ ತ್ಯಾಗರಾಜನ್ ಹೆಸರು ಬರುತ್ತಿದ್ದಂತೆಯೇ ಪಂಜಾಬ್ ಕಿಂಗ್ಸ್‌ಗೆ ತಾವು ಈ ಹಿಂದೆ ತಪ್ಪಾದ ಆಟಗಾರನಿಗೆ ಬಿಡ್ ಮಾಡಿರುವುದು ಅರಿವಾಯಿತು. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡದ ಕೋ-ಓನರ್ ಪ್ರೀತಿ ಝಿಂಟಾ ಈ ಬಿಡ್ಡಿಂಗ್ ವಾಪಾಸ್ ಪಡೆಯುವಂತೆ ಮನವಿ ಮಾಡಿಕೊಂಡರಾದರೂ ಅವರ ಮನವಿಯನ್ನು ಪುರಸ್ಕರಿಸಲಿಲ್ಲ.

https://x.com/PunjabKingsUK/status/1737144740087239024?t=uxeICx28HbSohs082mfI0w&s=08

Leave A Reply