HD Kumaraswamy: ಕುಮಾರಸ್ವಾಮಿಯಿಂದ ಕೋಟ್ಯಾಂತರ ರೂ ಸಾಲಗಾರನಾಗಿ, ಇಂದಿಗೂ ಬಡ್ಡಿ ಕಟ್ಟುತ್ತಿದ್ದಾರೆ ಈ ಪ್ರಬಲ ಸಂಸದ !!

HD Kumaraswamy: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯಿಂದ (Former CM HD Kumaraswamy) ನಾನು ಸಾಲಗಾರನಾಗಿದ್ದು ಅಲ್ಲದೇ, ಇಂದಿಗೂ ಆ ಸಾಲಕ್ಕೆ (Loan) ಬಡ್ಡಿ ಕಟ್ಟುತ್ತಿದ್ದೇನೆ ಎಂದು ಮಂಡ್ಯ ಮಾಜಿ ಸಂಸದ ಎಲ್​ಆರ್ ಶಿವರಾಮೇಗೌಡ (Former MP Shivaramegowda) ಗಂಭೀರ ಆರೋಪ ಮಾಡಿದ್ದಾರೆ.

ಹೌದು, ಮಂಡ್ಯ ಮಾಜಿ ಸಂಸದ ಎಲ್​ಆರ್ ಶಿವರಾಮೇಗೌಡ ಅವರು ನಾಗಮಂಗಲದಲ್ಲಿ ಮಾತನಾಡಿ, ನನ್ನನ್ನು ಸಾಲಗಾರನ್ನಾಗಿಸಿದ್ದು ಮಾಜಿ ಸಿಎಂ ಕುಮಾರಸ್ವಾಮಿ ಎಂದು ಆರೋಪಿಸಿದರು. ಆರು ತಿಂಗಳು ಸಂಸದನಾಗಿ ಮಾಡಿ ಮುಂದಿನ ಚುನಾವಣೆಗೆ ಟಿಕೆಟ್ ಕೊಡಲಿಲ್ಲ. ಆ ಬಳಿಕ ನಡೆದ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಸಾಲಗಾರನಾಗಿದ್ದೇನೆ.

ಶಿವರಾಮೇಗೌಡರು ಬೆಂಗಳೂರಿನ ಎಂಜಿ ರಸ್ತೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ 12.48 ಕೋಟಿ ರೂಪಾಯಿ ಲೋನ್ ಪಡೆದುಕೊಂಡಿದ್ದಾರೆ. ಆದರೆ ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ವಂಚನೆ ಆರೋಪದಡಿ ಮಾಜಿ ಸಂಸದ ಎಲ್​ಆರ್ ಶಿವರಾಮೇಗೌಡರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಲೋನ್ ಪಡೆದು, ಸಾಲದ ಹಣ ಬೇರೆಡೆ ವರ್ಗಾಯಿಸಿ ಅನ್ಯ ಉದ್ದೇಶ ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಎಲ್​ಆರ್ ಶಿವರಾಮೇಗೌಡ ಸೇರಿ ಏಳು ಮಂದಿ ವಿರುದ್ಧ ಬ್ಯಾಂಕಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಸಲ್ಲಿಸಿದ ದೂರಿನ ಅನ್ವಯ ಸಿಬಿಐ ಎಫ್​ಐಆರ್ ದಾಖಲಿಸಿಕೊಂಡಿದೆ. ಜೊತೆಗೆ ಶಿವರಾಮೇಗೌಡ, ಪತ್ನಿ ಸುಧಾ, ಮಗ ಚೇತನ್ ಗೌಡ, ಶಿವರಾಮೇಗೌಡ ಸೊಸೆ ಹಾಗೂ ರಾಯಲ್ ಕಂಕರ್ಡ್ ಎಜುಕೇಷನಲ್ ಟ್ರಸ್ಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಇದನ್ನು ಓದಿ: Road accident: ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು! ಸ್ಥಳದಲ್ಲಿ ಮೃತಪಟ್ಟ ಚಾಲಕ

Leave A Reply

Your email address will not be published.