Skin Care: ಈ ಆಹಾರಗಳ ಸೇವನೆ ರೂಢಿಸಿಕೊಳ್ಳಿ- ಕೆಲವೇ ದಿನಗಳಲ್ಲಿ ಮುಖದ ಸೌಂದರ್ಯ ಹೇಗೆ ಹೆಚ್ಚುತ್ತೆ ನೋಡಿ

Lifestyle health news skin care eating these natural foods to get healthy and glowing skin

Beauty Tips: ಸೌಂದರ್ಯ (beauty)ಎನ್ನುವುದು ನೋಡುವವರ ಕಣ್ಣಿನಲ್ಲಿದೆ ಎನ್ನುವುದು ಪ್ರಚಲಿತ ಮಾತು. ಆದರೆ, ಸೌಂದರ್ಯ ಎಂದೊಡನೆ ಹೆಚ್ಚಿನವರಿಗೆ ನೆನಪಾಗುವುದು ಹೆಣ್ಣು. ಹೆಣ್ಣು ಅಂದ ಸೌಂದರ್ಯದ ಕಾಳಜಿ(Beauty Tips)ಮಾಡುವ ವಿಷಯದಲ್ಲಿ ಹೆಚ್ಚು ಲಕ್ಷ್ಯ ವಹಿಸುತ್ತಾರೆ. ಹೆಂಗೆಳೆಯರು ದೇಹ, ಚರ್ಮದ ಕಾಂತಿ ಹೆಚ್ಚಿಸುವ ನಿಟ್ಟಿನಲ್ಲಿ ಏನೇನೋ ಹರಸಾಹಸ ಪಡುತ್ತಾರೆ. ಚರ್ಮದ ಆರೋಗ್ಯದ(Health) ದೃಷ್ಠಿಯಿಂದ ಇದು ಅವಶ್ಯಕವೆಂದರು ತಪ್ಪಾಗದು. ನೈಸರ್ಗಿಕವಾಗಿ ಸಿಗುವ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ಮೂಲಕ ಮುಖದ ಸೌಂದರ್ಯವನ್ನು (Skin Care)ಹೆಚ್ಚಿಸಿಕೊಳ್ಳಬಹುದು.

ಸೌಂದರ್ಯ ಹೆಚ್ಚಿಸುವ ಆಹಾರಗಳು ಯಾವುದೆಲ್ಲ ಗೊತ್ತಾ?
# ಬೆಣ್ಣೆ ಹಣ್ಣು
ಅವಕ್ಯಾಡೊ ಹಣ್ಣು ಅಥವಾ ಬೆಣ್ಣೆ ಹಣ್ಣಿನಲ್ಲಿ ಚರ್ಮಕ್ಕೆ ಸಹಕಾರಿಯಾಗಿರುವ ವಿಟಮಿನ್ ಇ ಅಂಶ ಹೆಚ್ಚಾಗಿರುತ್ತದೆ. ಇವು ಮುಖದಲ್ಲಿ ಕಾಣುವ ಗೆರೆಗಳು, ಕಲೆಗಳು ಮತ್ತು ಸುಕ್ಕುಗಳನ್ನು ನಿವಾರಣೆ ಮಾಡಲು ಸಹಕರಿಸುತ್ತದೆ.

# ವಿಟಮಿನ್ ಸಿ ಇರುವ ಹಣ್ಣು-ತರಕಾರಿಗಳನ್ನು ಸೇವನೆ ಮಾಡಿ
ಸಿಟ್ರಸ್ ಜಾತಿಗೆ ಸೇರಿರುವ ಹಣ್ಣುಗಳು ಮತ್ತು ಕೆಲವೊಂದು ಬಗೆಯ ಹಸಿರೆಲೆ ತರಕಾರಿಗಳಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದ್ದು, ಚರ್ಮದ ಆರೋಗ್ಯ ಹಾಗೂ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ಇದನ್ನು ಓದಿ: Weight Loss Tips: ಈರುಳ್ಳಿಯ ಈ ಭಾಗವನ್ನು ತಿಂದರೆ ವಾರ ಬೇಡ, ಕೆಲವೇ ದಿನಗಳಲ್ಲಿ ತೂಕ ಇಳಿದು ಹೋಗುತ್ತೆ !!

# ವಾಲ್ನಟ್ ಸೇವನೆ ಮಾಡಿ
ವಾಲ್ನಟ್ ನಲ್ಲಿ ವಿಟಮಿನ್ ಇ , ಜಿಂಕ್ ಮತ್ತು ಪ್ರೋಟೀನ್ ಅಂಶಗಳು ಇರುವ ಹಿನ್ನೆಲೆ ಇದು ಆರೋಗ್ಯವನ್ನು ವೃದ್ಧಿಸುವ ಜೊತೆಗೆ ಮುಖದ ಸೌಂದರ್ಯವನ್ನು ಕಾಪಾಡಲು ನೆರವಾಗುತ್ತದೆ.

# ಅಡುಗೆಯಲ್ಲಿ ಟೊಮೆಟೊ ಬಳಸಿ
ಟೊಮೆಟೊ ಹಣ್ಣಿನಲ್ಲಿ ಹೇರಳವಾದ ಆಂಟಿ – ಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಅಂಶಗಳು ಇರುವುದರಿಂದ ಇವು ಚರ್ಮದ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

# ಕ್ಯಾರೆಟ್
ಕ್ಯಾರೆಟ್ ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಎ ಅಂಶವನ್ನು ಒಳಗೊಂಡಿದ್ದು, ಇದು ಮುಖದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ. ಮುಖದಲ್ಲಿ ನೆರಿಗೆ ಬೀಳುವ ಪ್ರಕ್ರಿಯೆಯನ್ನು ದೂರ ಮಾಡಿ, ಚರ್ಮದ ರಕ್ಷಣೆ ಮಾಡುತ್ತದೆ.

# ಡಾರ್ಕ್ ಚಾಕೋಲೆಟ್
ಮಿತವಾಗಿ ಡಾರ್ಕ್ ಚಾಕೋಲೆಟ್ ಸೇವನೆ ಮಾಡುವುದರಿಂದ, ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮದ ಮೇಲೆ ಸನ್ ಬರ್ನ್ ಸಮಸ್ಯೆಗಳು ಎದುರಾಗದ ಹಾಗೆ ರಕ್ಷಣೆ ನೀಡುತ್ತದೆ. ಅಷ್ಟೆ ಅಲ್ಲದೇ, ಹೃದಯದ ಆರೋಗ್ಯ ಕೂಡ ಕಾಪಾಡಬಹುದು. ಇದಲ್ಲದೇ, ದೇಹದ ಕಾಂತಿ ಕೂಡ ಹೆಚ್ಚಾಗುತ್ತದೆ.

 

Leave A Reply

Your email address will not be published.