Home Business Bar reservation: ಮದ್ಯದಂಗಡಿಗೂ ಕಾಲಿಟ್ಟ ಮೀಸಲಾತಿ – ಯಾರಿಗೆಲ್ಲಾ ಸಿಗುತ್ತೆ ?!

Bar reservation: ಮದ್ಯದಂಗಡಿಗೂ ಕಾಲಿಟ್ಟ ಮೀಸಲಾತಿ – ಯಾರಿಗೆಲ್ಲಾ ಸಿಗುತ್ತೆ ?!

Bar reservation

Hindu neighbor gifts plot of land

Hindu neighbour gifts land to Muslim journalist

Bar reservation: ಇದುವರೆಗೂ ಶಿಕ್ಷಣ, ಉದ್ಯೋಗ, ರಾಜಕೀಯ ಕ್ಷೇತ್ರಗಳಲ್ಲಿ ಇದ್ದ ಮೀಸಲಾತಿ ಇದೀಗ ಮಧ್ಯದಂಗಡಿಗಳಿಗೂ(Bar Reservation) ವ್ಯಾಪಿಸಲು ಹೊರಟಿದೆ. ಈ ರೀತಿಯ ಒಂದು ಪ್ರಸ್ತಾವು ನಮ್ಮ ರಾಜ್ಯ ಸರ್ಕಾರದ ಮುಂದೆ ಬಂದಿದ್ದು ಇದರ ಜಾರಿಗೆ ಸರ್ಕಾರ ಚಿಂತನೆ ನಡೆಸಿದೆ.

ಹೌದು, ಬೆಳಗಾವಿಯಲ್ಲಿ(Belagavi) ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು ಈ ವೇಳೆ ಇಂತಹ ಒಂದು ಪ್ರಸ್ತಾಪವು ರಾಜ್ಯ ಸರ್ಕಾರದ ಮುಂದೆ ಬಂದಿದೆ. ಅಂದಹಾಗೆ ಇದುವರೆಗೂ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡುವಾಗ ಮೀಸಲಾತಿ ಪಾಲನೆ ವಿಚಾರ ಇರಲಿಲ್ಲ. ಎಸ್ಸಿ ಹಾಗೂ ಎಸ್ಟಿ ಪರವಾನಗಿದಾರರಿಗೆ ಸೇರಿದ ಮದ್ಯದಂಗಡಿಗಳ ಸಂಖ್ಯೆ ತೀರಾ ಕಡಿಮೆ ಇದೆ. ಆದರೆ ಇನ್ಮುಂದೆ ಬಾರ್ ಗಳಿಗೆ ಲೈಸೆನ್ಸ್ ನೀಡುವಾಗ ಮೀಸಲಾತಿ ಪರಿಗಣಿಸಬೇಕು ಎಂದು ಕಾಂಗ್ರೆಸ್‌ ಸದಸ್ಯ ಎಂ.ಪಿ. ನರೇಂದ್ರ ಸ್ವಾಮಿ ಸರ್ಕಾರದ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರೆ.

ಇನ್ನು ಇದಕ್ಕೆ ಉತ್ತರಿಸದ ಅಬಕಾರಿ ಸಚಿವರಾದ ಆರ್‌.ಬಿ. ತಿಮ್ಮಾಪುರ(B R Timmapura) ರಾಜ್ಯದಲ್ಲಿ ಒಟ್ಟಾರೆ ಮದ್ಯದಂಗಡಿಗಳಲ್ಲಿ ಎಸ್ಸಿ ಹಾಗೂ ಎಸ್ಟಿ ಪರವಾನಗಿದಾರರಿಗೆ ಸೇರಿದ ಮಳಿಗೆ ಕಡಿಮೆ ಇವೆ. ಇನ್ನು ಮುಂದೆ ಮದ್ಯದಂಗಡಿಗಳಲ್ಲೂ ಮೀಸಲಾತಿ ಒದಗಿಸುವ ಬಗ್ಗೆ ನಿಯಮಾನುಸಾರ ಪರಿಶೀಲಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: C M Siddaramaiah: ಮುಸ್ಲಿಂಮರಿಗೆ ದೇಶದ ಸಂಪತ್ತನ್ನು ಹಂಚುತ್ತೇನೆ – ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ!!